ಗೋಕಾಕಿನ್ ಲ್ಲಿ ಸಭೆ ನಡೆಸಿ, ಮತ್ತೆ ಅಖಾಡಕ್ಕಿಳಿದ ರಮೇಶ್ ಜಾರಕಿಹೊಳಿ

ಕೋವಿಡ್ ಸೆಂಟರ್ ಗಳಲ್ಲಿ ಮುಂಜಾಗೃತೆ ವಹಿಸುವಂತೆ ಅಧಿಕಾರಿಗಳಿಗೆ ವಾರ್ನಿಂಗ್

 | 
ಗೋಕಾಕಿನ್ ಲ್ಲಿ ಸಭೆ ನಡೆಸಿ, ಮತ್ತೆ ಅಖಾಡಕ್ಕಿಳಿದ ರಮೇಶ್ ಜಾರಕಿಹೊಳಿ

ಬೆಳಗಾವಿ: ರಾಜಕೀಯ ಷಡ್ಯಂತ್ರದ ಬಿರುಗಾಳಿಗೆ ಸಿಲುಕಿ, ಜೊತೆಗೆ ಕೊರೋನಾ ಸೊಂಕಿಗೆ ತುತ್ತಾಗಿ ವಿಶ್ರಾಂತಿ ಪಡೆಯುತ್ತಿದ್ದ ರಮೇಶ್ ಜಾರಕಿಹೊಳಿ ಅವರು ಇವತ್ತಿನಿಂದ ಮತ್ತೆ ಅಖಾಡಕ್ಕಿಳಿದಿದ್ದಾರೆ.

ಬೆಳಗಾವಿ ಜಿಲ್ಲೆ ಮತ್ತು ಗೋಕಾಕಿನಲ್ಲಿ ಕೊರೋನಾ ಮಹಾಮಾರಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆ, ಮಾಜಿ ಸಚಿವ, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಇಂದು ಏಕಾಏಕಿ ಬೆಳಗಾವಿ ತಾಲ್ಲೂಕು ಭವನದಲ್ಲಿ ಕೋವೀಡ್ ನಿರ್ವಹಣೆ ಕುರಿತು ಗೋಕಾಕ್ ತಾಲ್ಲೂಕಿನ ಅಧಿಕಾರಿಗಳ ಸಭೆ ಕರೆದು ಕೋವೀಡ್ ಚಿಕಿತ್ಸೆ ವಿಚಾರದಲ್ಲಿ ಯಾವ ತೊಂದರೆ ಆಗದಂತೆ ವ್ಯೆವಸ್ಥೆ ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ರು. ಗೋಕಾಕ್ ನಲ್ಲಿ ಆಕ್ಸಿಜನ್ ವ್ಯೆವಸ್ಥೆ, ಜೊತೆಗೆ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಎಲ್ಲ ರೀತಿಯ ಮುಂಜಾಗೃತಾ ಕ್ರಮಗಳನ್ನು ವಹಿಸಬೇಕು ಎಂದು ರಮೇಶ್ ಅಧಿಕಾರಿಗಳಿಗೆ ವಾರ್ನಿಂಗ್ ಮಾಡಿದರು.

ನಂತರ ಮಾದ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಆಗದಂತೆ ನೋಡಿಕೊಳ್ಳಲು, ಗೃಹ ಸಚಿವ ಬೊಮ್ಮಾಯಿ ಅವರು ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರನ್ನು ಭೇಟಿಯಾಗಿದ್ದು, ಆಕ್ಸೀಜನ್ ಸಮಸ್ಯೆ ಶೀಘ್ರದಲ್ಲೇ ಇತ್ಯರ್ಥವಾಗಲಿದೆ ಎಂದು ಹೇಳಿದರು.

ಕೊರೋನಾ ನಿಯಂತ್ರಣ ಮಾಡಲು ಈ ಬಾರಿ ಖಡಕ್ ಲಾಕ್ ಡೌನ್ ಮಾಡಲಾಗುತ್ತಿದೆ. ಗ್ರಾಮೀಣ ಭಾಗದ ಜನರು ಸಿಟಿಗೆ ಬಾರದಂತೆ ಸಿಟಿ ಜನರು ಹಳ್ಳಿಗೆ ಹೋಗದಂತೆ ನೋಡಿಕೊಳ್ಳಲಾಗುತ್ತೆ, ಕೊರೋನಾ ಚೈನ್ ಲಿಂಕ್ ಬ್ರೇಕ್ ಮಾಡಲು ಬೇಕಾದ ಕ್ರಮಗಳನ್ನು ಕೈಗೊಳ್ಳುತ್ತೆವೆ, ಜನರು ಇದಕ್ಕೆ ಹೆದರುವ ಅವಶ್ಯಕತೆ ಇಲ್ಲ ಗಂಬೀರ ಪರಿಸ್ಥಿತಿ ಇದ್ದರೆ ಮಾತ್ರ ಆಸ್ಪತ್ರಗೆ ಬಂದು ಚಿಕಿತ್ಸೆ ಪಡೆಯಬೇಕು ಎಂದು ರಮೇಶ್ ಜಾರಕಿಹೊಳಿ ಮನವಿ ಮಾಡಿಕೊಂಡರು.

ಮನೆಯಲ್ಲೆ ಇದ್ದು ಯೋಗ ಪ್ರಾಣಾಯಾಮ ಹಾಗು ವ್ಯಾಯಾಮ ವೈದ್ಯರ ಸಲಹೆ ಪಡೆದರೆ ಕೊರೋನ‌ ನಿಯಂತ್ರಣಕ್ಕೆ ಬರುತ್ತೆ ಎಂದು ರಮೇಶ್ ಅಭಿಪ್ರಾಯಪಟ್ಟರು.