ಕೋವಿಡ್ ಪರಿಸ್ಥಿತಿ ನಿಭಾಯಿಸಲು RBIನಿಂದ 50 ಸಾವಿರ ಕೋಟಿ

ಲಸಿಕೆ, ಆಕ್ಸಿಜನ್ ಹಾಗೂ ವೆಂಟಿಲೇಟರ್ ಖರೀದಿಗೆ ಹಣ ಬಳಕೆ

 | 
RBI Governer

ನವದೆಹಲಿ: ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸಲು ಕೋವಿಡ್-19 ಹೆಲ್ತ್ ಕೇರ್ ಗ ಮಾರ್ಚ್ 2022ರವರೆಗೂ 50,000 ಕೋಟಿ ರೂಪಾಯಿಗಳನ್ನು ಆರ್ ಬಿಐ ನೀಡಲಿದೆ. ಲಸಿಕೆ ಉತ್ಪಾದಕರಿಗೆ ಆಕ್ಸಿಜನ್ ಸಿಲೆಂಡರ್ ಹಾಗೂ ವೆಂಟಿಲೇಟರ್ ಗಳನ್ನು ಖರೀದಿಸುವುದಕ್ಕಾಗಿ ಈ ಹಣ ಬಳಕೆಯಾಗಲಿದೆ ಎಂದು ಆರ್‍ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.

ಆರ್ಥಿಕತೆ ಮೇಲೆ ಕೋವಿಡ್-19 ಎರಡನೇ ಅಲೆಯ ಪರಿಣಾಮಗಳ ಕುರಿತು ದೇಶವನ್ನು ಉದ್ದೇಶಿಸಿಸಿ ಮಾತನಾಡಿರುವ ಅವರು, ಕೋವಿಡ್ ಪರಿಸ್ಥಿತಿಯನ್ನು ಆರ್ ಬಿಐ ಗಮನಿಸುವುದನ್ನು ಮುಂದುವರೆಸಲಿದೆ. ಕೊರೋನಾ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಅಗತ್ಯವಿರುವ ಎಲ್ಲಾ ಸಂಪನ್ಮೂಲಗಳನ್ನೂ ನಿಯೋಜನೆ ಮಾಡಲಿದೆ ಎಂದು ತಿಳಿಸಿದ್ದಾರೆ.

ಬಲಿಷ್ಠ ಆರ್ಥಿಕತೆಯ ಚೇತರಿಕೆಯಿಂದ ಹೊಸ ಸಮಸ್ಯೆಗಳನ್ನು ಎದುರಿಸುವ ರೀತಿಯಲ್ಲಿ ಪರಿಸ್ಥಿತಿಗಳು ಬದಲಾಗಿವೆ. ಕೋವಿಡ್ ಬಿಕ್ಕಟ್ಟಿನ ಪರಿಸ್ಥಿತಿಯಿಂದ ಭಾರತ ಹೊರಬರಲಿದೆ ಎಂದು ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದುರ್ಬಲ ಕ್ಷೇತ್ರಗಳಿಗೆ ಕ್ಷಿಪ್ರ ಸಾಲ ನೀಡಲಾಗುತ್ತಿದ್ದು, ಬ್ಯಾಂಕ್‍ಗಳು ತಮ್ಮ ಬ್ಯಾಲೆನ್ಸ್ ಶೀಟ್‍ನಲ್ಲಿ ಕೋವಿಡ್-19 ಸಾಲದ ಪುಸ್ತಕವನ್ನು ಪ್ರಾರಂಭಿಸಲಿವೆ. ಕೋವಿಡ್-19 ಬುಕ್ ಗೆ ಸಮನಾದ ಹೂಡಿಕೆಯನ್ನು ಆರ್‍ ಬಿಐ ನಲ್ಲಿ 40 ಬಿಪಿಎಸ್ ಮತ್ತು ಅದಕ್ಕಿಂತ  ಹಾಗೂ ಅದಕ್ಕಿಂತ ಮೇಲ್ಪಟ್ಟ ರಿವರ್ಸ್ ರೆಪೋ ದರದಲ್ಲಿ ಮಾಡಬಹುದಾಗಿದೆ ಎಂದು ಶಕ್ತಿಕಾಂತ್ ದಾಸ್ ಮಾಹಿತಿ ನೀಡಿದ್ದಾರೆ.