ಕೊರೋನಾಗೆ ಕಳೆದ 24ಗೆಂಟೆಯಲ್ಲಿ 4,187 ಮಂದಿ ಸಾವು

ದೇಶದಾದ್ಯಂತ 4,01,078 ಹೊಸ ಪ್ರಕರಣಗಳು ಪತ್ತೆ

 | 
ಕೊರೋನಾಗೆ ಕಳೆದ 24ಗೆಂಟೆಯಲ್ಲಿ 4,187 ಮಂದಿ ಸಾವು

ನವದೆಹಲಿ: ದೇಶದಲ್ಲಿ ಕೊರೋನಾ ಮಹಾಮಾರಿಯಿಂದ ಸಾವು ನೋವುಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಭಾರತ ಕಳೆದ 24 ಗಂಟೆಯಲ್ಲಿ ದಾಖಲೆಯ 4,187 ಮಂದಿ ಬಲಿಯಾಗಿದ್ದಾರೆ ಹಾಗೂ 4,01,078 ಹೊಸ ಪ್ರಕರಣಗಳು ದಾಖಲಾಗಿವೆ, ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ.

ದೇಶದಲ್ಲಿ ಗುರುವಾರ 4.12 ಲಕ್ಷ ಪ್ರಕರಣಗಳು ದಾಖಲಾಗಿದ್ದವು, ಶುಕ್ರವಾರ 4.14 ಲಕ್ಷ ಪ್ರಕರಣಗಳು ದಾಖಲಾಗಿದ್ದವು, ಇಂದು 4.01 ಲಕ್ಷ ಪ್ರಕರಣಗಳು ಕಂಡುಬಂದಿವೆ. ಕಳೆದ 24 ಗಂಟೆಯಲ್ಲಿ 3,18,609 ರೋಗಿಗಳು ಗುಣಮುಖರಾಗಿ ಬಿಡುಗಡೆಗೊಂಡಿದ್ದು. ದೇಶದಾದ್ಯಂತ ಇಲ್ಲೀವರೆಗೆ 1,79,30,960 ಜನರು ಕೊರೋನಾದಿಂದ ಗುಣಮುಖರಾಗಿದ್ದಾರೆ ಹಾಗೂ ದೇಶದಾದ್ಯಂತ 37,23,446 ಪ್ರಕರಣಗಳು ಇವೆ.

ಕಳೆದ 24 ಗಂಟೆಯಲ್ಲಿ ಮಹಾರಾಷ್ಟ್ರದಲ್ಲಿ 54,022 ಪ್ರಕರಣಗಳು, ಕರ್ನಾಟಕ 28,781 ಪ್ರಕರಣಗಳು, ಕೇರಳದಲ್ಲಿ 38,460 ಪ್ರಕರಣಗಳು, ಉತರಪ್ರದೇಶದಲ್ಲಿ 27,763 ಪ್ರಕರಣಗಳು, ತಮಿಳುನಾಡಿನಲ್ಲಿ 26,465 ಪ್ರಕರಣಗಳು ದಾಖಲಾಗಿವೆ.

ಈವರೆಗೆ 16,73,46,544 ಮಂದಿ ವ್ಯಾಕ್ಸಿನ್ ಪಡೆದಿದ್ದಾರೆ.  ಭಾರತ ಬಿಗಿ ಕ್ರಮಗಳನ್ನು ತೆಗೆದುಕೊಂಡರೆ ಕೋವಿಡ್ ಮೂರನೆ ಅಲೆ ಬರುವುದು ಸಾಧ್ಯತೆ ಕಡಿಮೆ ಎಂದು ಸರ್ಕಾರ ಹೇಳಿದೆ.