ಕೋವಿಡ್ ಸೊಂಕಿತರಿಗಾಗಿ 500 ಆಕ್ಸಿಜನ್ ಕಾನ್ಸೆಂಟ್ರೇಟರ್ ಸಂಗ್ರಸಿದ ಸಲ್ಮಾನ್

ಸಲ್ಮಾನ್ ಖಾನ್ ಕಾರ್ಯಕ್ಕೆ ಅಭಿಮಾನಿಗಳಿಂದ ಬಾರೀ ಮೆಚ್ಚುಗೆ

 | 
salman khan procure oxygen concentrators

ಕೋವಿಡ್ ಎರಡನೇ ಅಲೆ ದೇಶವನ್ನು ಹಿಂದೆಂದೂ ಕಾಡದಷ್ಟು ಕಾಡುತ್ತಿದೆ. ಹಲವಾರು ಬಾಲಿವುಡ್ ನಟ ನಟಿಯರು ಕೋವಿಡ್ ಪೀಡಿತರ ನೆರವಿಗೆ ಧಾವಿಸಿದ್ದಾರೆ. ದೇಶದ ಹಲವೆಡೆ ಆಕ್ಸಿಜಜ್ ಸಿಲಿಂಡರ್, ಬೆಡ್ ಗಳಿಗೆ ಕೊರತೆ ಎದುರಾಗಿರುವುದು ವರದಿಯಾಗುತ್ತಲೇ ಇವೆ. ಈ ಹಿನ್ನೆಲೆ ತಮ್ಮ ಕೈಲಾದ ಸೇವೆ ಮಾಡಲು ನಟ ಸಲ್ಮಾನ್ ಖಾನ್ ಮುಂದೆ ಬಂದಿದ್ದಾರೆ.

ಕಾಂಗ್ರೆಸ್ ಎಂಎಲ್ ಎ ಬಾಬಾ ಸಿದ್ದಿಕ್ಕಿ ಮತ್ತವರ ಮಗನಾದ ಝೀಶಾನ್ ಸಿದ್ದಿಕ್ಕಿ ಅವರ ಜೊತೆ ಕೈಜೋಡಿಸಿರುವ ಸಲ್ಮಾನ್ ಖಾನ್ ಕೋವಿಡ್ ಸೋಂಕಿತರಿಗಾಗಿ 500 ಆಕ್ಸಿಜನ್ ಕಾನ್ಸೆಂಟ್ರೇಟರ್ ಗಳನ್ನು ಸಂಗ್ರಹಿಸಿರುವುದಾಗಿ ಬರೆದುಕೊಂಡಿದ್ದಾರೆ.

ನಮ್ಮ ಮೊದಲ 500 ಆಕ್ಸಿಜನ್ ಕಾನ್ಸೆಂಟ್ರೇಟರ್ ಗಳು ಮುಂಬೈ ತಲುಪಿದ್ದು, ಆಕ್ಸಿಜನ್ ಕಾನ್ಸೆಂಟ್ರೇಟರ್ ಅವಶ್ಯಕತೆ ಇರುವ ಕೋವಿಡ್ ಸೋಂಕಿತರು ಸಂಪರ್ಕಿಸಬಹದು ಎಂದು ಸಹಾವಾಣಿ ಪೋನ್ ನಂಬರ್ ಅನ್ನು ಲಗತಿಸಿದ್ದಾರೆ. ಬೇಕಾದವರು ನೇರವಾಗಿ ಮೆಸೇಜ್ ಮಾಡಿ, ಟ್ಯಾಗ್ ಮಾಡಿ ನಾವು ನಿಮಗೆ ಉಚಿತವಾಗಿ ಆಕ್ಸಿಜನ್ ಕಾನ್ಸೆಂಟ್ರೇಟರ್ ಗಳ ಸೇವೆಯನ್ನು ನೀಡುತ್ತೇವೆ. ಬಳಸಿ ಗುಣಮುಖರಾದ ನಂತರ ಮತ್ತೆ ವಾಪಾಸ್ ನೀಡಬೇಕೆಂದು ತಿಳಿಸಿದ್ದಾರೆ.

ಸಲ್ಮಾನ್ ಖಾನ್ ಇದನ್ನು ಹಂಚಿಕೊಳ್ಳುತ್ತಿದ್ದಂತೆ ಅವರ ಅಭಿಮಾನಿಗಳು ಅವರ ನಿಶ್ವಾರ್ಥ ಕೊಡುಗೆಯನ್ನು ಹೊಗಳಿದ್ದಾರೆ.

ಕೋವಿಡ್ ಸೋಂಕಿನಿಂದ ಕಷ್ಟಕ್ಕೆ ಸಿಲುಕಿದ್ದ ಹಲವರಿಗೆ ಸಹಾಯ ಮಾಡಿದ್ದ ಸಲ್ಮಾನ್ ಖಾನ್ ಕರ್ನಾಟಕದ 18 ವರ್ಷದ ಯುವಕನಿಗೆ ಸಹಾಯ ಮಾಡುವ ಮುಖಾಂತರ ಗಮನ ಸೆಳೆದಿದ್ದರು, ನಂತರ ಅವರ 5000 ಕೋವಿಡ್ ಫ್ರಂಟ್ ಲೈನ್ ಕಾರ್ಯಕರ್ತರಿಗೆ ಅನ್ನ ನೀಡುವ ಮೂಲಕ ಸಲ್ಮಾನ್ ಸಹಾಯ ಮಾಡಿದ್ದರು.