ಅಮ್ಮನ ಬಾಯಿಗೆ ಬಾಯಿಟ್ಟು ಉಸಿರು ನೀಡಿ ಬದುಕಿಸಲು ಮಕ್ಕಳ ಹರಸಾಹಸ

ಮನಕಲಕುವ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್

 | 
ಅಮ್ಮನ ಬಾಯಿಗೆ ಬಾಯಿಟ್ಟು ಉಸಿರು ನೀಡಿ ಬದುಕಿಸಲು ಮಕ್ಕಳ ಹರಸಾಹಸ

ಬೆಹ್ರಿಚ್(ಉತ್ತರಪ್ರದೇಶ): ಉಸಿರಾಟದ ತೊಂದರೆಯಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ, ತನ್ನ ತಾಯಿಯ ಬಾಯಿಗೆ ಬಾಯನ್ನಿಟ್ಟ ಇಬ್ಬರು ಸಹೋದರಿಯರು ಕೃತಕ ಉಸಿರು ನೀಡಿ ಅಮ್ಮನನ್ನು ಬದುಕಿಸಲು ಹರಸಾಹಸ ಪಟ್ಟಿರುವ ಘಟನೆ ಉತ್ತರಪ್ರದೇಶದ ಬೆಹ್ರಿಚ್ ಜಿಲ್ಲೆಯಲ್ಲಿ ನಡೆದಿದೆ.

ಈ ಮನಕಲಕುವ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದು ಆಸ್ಪತ್ರೆಗಳಲ್ಲಿ ಇರುವ ಆಕ್ಸಿಜನ್ ಕೊರತೆ ಮತ್ತು ಸಿಬ್ಬಂಧಿಯ ಕೊರೆತೆಯನ್ನು ಎತ್ತು ತೋರುತ್ತದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ತುರ್ತು ಚಿಕಿತ್ಸಾ ವಿಭಾಗದ ಅಧಿಕಾರಿ ಆತಿಶಂ ಅಲಿ, ರೋಗಿ ಮೇಲುಸಿರು ಬಿಡುವ ಸಂದರ್ಭದಲ್ಲಿ ಆಸ್ಪತ್ರೆಗೆ ಬಂದುರು, ತಕ್ಷಣ ವೈದ್ಯರು ಬಂದು ನೋಡಿದರು ಆದರೆ ಅವರು ಅವರು ಮೃತಪಟ್ಟರು ಎಂದು ಹೇಳಿದ್ದಾರೆ.

ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಆಸ್ಪತ್ರೆಯ ಬಳಿ ಆಗಮಿಸಿದ ಬ್ಹೆರೀಚ್ ನ ಜಿಲ್ಲಾಧಿಕಾರಿ ಶಂಭು ಕುಮಾರ್ ಮತ್ತು ಮಹಾರಾಜ್ ಸುಹೆಲ್ ದೇಲ್ ಮೆಡಿಕಲ್ ಕಾಲೇಜ್ ನ ಹಿರಿಯ ವೈದ್ಯಾಧಿಕಾರಿಗಳು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ರೋಗಿಯನ್ನು ಪರೀಕ್ಷಿಸಿದರು.

ರೋಗಿಯ ಕುಟುಂಬಸ್ಥರು ಆಸ್ಪತ್ರೆಯ ನಿರ್ಲಕ್ಷ್ಯದಿಂದ ಬೆಡ್ ನಲ್ಲಿ ಸತ್ತಿದ್ದಾರೆ ಎಂದು ಹೇಳಿದ್ದು, ಇಲ್ಲಿ ಯಾವುದೇ ತರಹದ ಆಕ್ಸಿಜನ್ ಅಭಾವ ಇಲ್ಲ, ಅವರು ಆಸ್ಪತ್ರೆಗೆ ಬಂದ ನಂತರ ಕೂಡಲೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ನಂತರ ಚಿಕಿತ್ಸೆ ಫಲಕಾರಿಯಾದೆ ಮೃತಪಟ್ಟಿದ್ದಾರೆ ಎಂದು ಮಹಾರಾಜ್ ಸುಹೆಲ್ ದೇಲ್ ಮೆಡಿಕಲ್ ಕಾಲೇಜ್ ನ ಪ್ರಾಂಶುಪಾಲರಾದ ಎ.ಕೆ ಶಹ್ನಿ ತಿಳಿದಿದ್ದಾರೆ.

Read this Story: ರಕ್ತಧಾನ ಮಾಡಿ ಪೊಲೀಸರಿಂದ ತಾಯಿ, ಮಗುವಿಗೆ ಜೀವಧಾನ

https://kannada.newslati.com/news/cop-abu-tahir-saves-pregnant-woman/cid2827905.htm