ಕೋವಿಡ್ ಎರಡನೇ ಅಲೆ ತಡೆಯೋಕೆ ‌ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ: ಡಿ.ಕೆ ಶಿವಕುಮಾರ್

ಕೋವಿಡ್ ಲಸಿಕೆ ಪೂರೈಕೆ ಆಗುತ್ತಿಲ್ಲ, ಮೊದಲ ಡೋಸ್ ಪಡೆದವರಿಗೆ 2ನೇ ಡೋಸ್ ಸಿಗುತ್ತಿಲ್ಲ

 | 
ಕೋವಿಡ್ ಎರಡನೇ ಅಲೆ ತಡೆಯೋಕೆ ‌ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ: ಡಿ.ಕೆ ಶಿವಕುಮಾರ್

ಬೆಂಗಳೂರು: ರಾಜ್ಯಕ್ಕೆ ಸರಿಯಾಗಿ ಕೋವಿಡ್ ಲಸಿಕೆ ಪೂರೈಕೆ ಆಗುತ್ತಿಲ್ಲ, ಮೊದಲ ಡೋಸ್ ಪಡೆದವರಿಗೆ ಎರಡನೇ ಡೋಸ್ ಸಿಗುತ್ತಿಲ್ಲ, ಆನ್ ಲೈನ್ ನಲ್ಲಿ ಅಪ್ಲಿಕೇಶನ್ ತೆರೆಯುತ್ತಿಲ್ಲ, ಜನ ಆಸ್ಪತ್ರೆಗೆ ಹೋಗಿ ವಾಪಸ್ ಬರುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಎರಡನೇ ಅಲೆ ತಡೆಯೋಕೆ ‌ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಚಾಮರಾಜನಗರದಲ್ಲಿ 24 ಜನ ಸಾವನ್ನಪ್ಪಿದದರು, ರಾಜ್ಯದ ಹಲವು ಕಡೆ ಸಾವು ನೋವು ಹೆಚ್ಚಾಗುತ್ತಿವೆ .ಸರ್ಕಾರದಿಂದ ಆಸ್ಪತ್ರೆಗೆ ಸೇರಿದ ರೋಗಿಗಳು ಹೆಣವಾಗಿ ವಾಪಾಸ್ ಬರುತ್ತಿದ್ದಾರೆ, ಇದು ಕೊಲೆಗಡುಕ‌ ಸರ್ಕಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನರು ಸೋಶಿಯಲ್ ಮಿಡಿಯಾದಲ್ಲೂ ನೋವು ತೋಡಿಕೊಳ್ಳದಂತ ಸ್ಥತಿ ಇದೆ, ಈ ರೀತಿ ಏನಾದ್ರೂ ಮಾಡಿದ್ರೆ ಅವರಿಗೆ ನೊಟೀಸ್ ಕೊಡಿಸಿ ಹೆದರಿಸುತ್ತಿದ್ದಾರೆ, ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ, ಜನರನ್ನ ಕೊಲೆ ಮಾಡುವ ಸಂಚನ್ನ ಸರ್ಕಾರ ಮಾಡ್ತಿದೆ, ಇದರ ಸಂಪೂರ್ಣ ಹೊಣೆ ಸರ್ಕಾರದವೇ ಹೊರಬೇಕು ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಷ್ಟು ಬೈದರೂ ಎಚ್ಚೆತ್ತುಕೊಳ್ಳದ ಸರ್ಕಾರ ಕೋವಿಡ್ ನಿಯಂತ್ರಣದಲ್ಲಿ ಸಂಪೂರ್ಣ ವಿಫಲವಾಗಿದೆ, ಕೋರ್ಟ್ ಸರ್ಕಾರಕ್ಕೆ ಛೀಮಾರಿ ಹಾಕುತ್ತಿದೆ ಜನರು ಸರ್ಕಾರಕ್ಕೆ ಛೀಮಾರಿ ಹಾಕುತ್ತಿದ್ದಾರೆ ಎಂದರು ಹಾಗೆ ಸರ್ಕಾರ ವಿಶೇಷ ಪ್ಯಾಕೇಜನ್ನು ಘೋಷಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.