ಚಾಮರಾಜನಗರ ದುರಂತದಲ್ಲಿ ಮಡಿದ ಕುಟುಂಬಕ್ಕೆ ನಟ ಸುದೀಪ್ ಸಹಾಯ

ಕಿರುತೆರೆ ನಟಿ ಸೋನು ಪಾಟೀಲ್ ಅವರಿಗೂ ನೆರವು ನೀಡಿದ ಸುದೀಪ್

 | 
ಚಾಮರಾಜನಗರ ದುರಂತದಲ್ಲಿ ಮಡಿದ ಕುಟುಂಬಕ್ಕೆ ನಟ ಸುದೀಪ್ ಸಹಾಯ

ಬೆಂಗಳೂರು: ಇತ್ತೀಚೆಗೆ ಚಾಮರಾಜನಗರದ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಸಾವಿನಪ್ಪಿದ್ದ ಕೋವಿಡ್ ಸೋಂಕಿತರ ಕುಟುಂಬಗಳಿಗೆ ನಟ ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್ ನೆರವು ನೀಡಲು ಮುಂದೆ ಬಂದಿದ್ದಾರೆ.

ಚಾಮರಾಜನಗರ ಆಸ್ಪತ್ರೆಯಲ್ಲಿ ಸಾವನಪ್ಪಿದ್ದ 24 ಜನರ ಪೈಕಿ ತೀರಾ ಅಗತ್ಯವಿರುವ 12 ಕುಟುಂಬಗಳ ಮಕ್ಕಳ ಸಂಪೂರ್ಣ ವಿದ್ಯಾಭಾಸದ ಖರ್ಚನ್ನು ಸುದೀಪ್ ಅವರ ನಡೆಸುತ್ತಿರುವ ಚಾರಿಟಬಲ್ ಟ್ರಸ್ಟ್ ನೋಡಿಕೊಳ್ಳಲಿದೆ ಎಂದು ಟ್ರಸ್ಟ್ ನ ಸದಸ್ಯರಾದ ರಮೇಶ್ ಹೇಳಿದ್ದು, ಈ ಮೂಲಕ ನೊಂದವರ ನೆರವಿಗೆ ಕಿಚ್ಚ ಸುದೀಪ್ ನಿಂತಿದ್ದಾರೆ.

ಇದಲ್ಲೆದೆ ಬಿಗ್ ಬಾಸ್ ಸೀಸನ್ 2ರ ಸ್ಪರ್ಧಿ ಹಾಗೂ ಕಿರುತೆರೆ ನಟಿ ಸೋನು ಪಾಟೀಲ್ ಅವರಿಗೂ ನೆರವು ನೀಡಿದ್ದಾರೆ. ಅವರ ತಾಯಿ ನ್ಯಮೋನಿಯಾಗೆ ತುತ್ತಾಗಿ ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದರು, ಇದನ್ನು ಮನಗಂಡ ಸುದೀಪ್ ಅವರು ಅವರು ಆಸ್ಪತ್ರೆ ಬಿಲ್ ಮತ್ತು ಔಷಧದ ವೆಚ್ಚವಾಗಿ 5ಲಕ್ಷ ರೂಪಾಯಿಯನ್ನು ನಟ ಸುದೀಪ್ ಅವರ ಕಿಚ್ಚ ಚಾರಟಬಲ್ ಟ್ರಸ್ಟ್ ಪಾವತಿಸಿದೆ. ಇದನ್ನು ಸ್ವತಃ ಸೋನು ಪಾಟೀಲ ಅವರೇ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.