ವ್ಯಾಕ್ಸಿನ್ ಒದಗಿಸದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

ರಾಜ್ಯದ ಜನರಿಗೆ ಯಾವಾಗ ಲಸಿಕೆ ಒದಗಿಸುತ್ತೀರಾ ಎಂದು ಪ್ರಶ್ನೆ

 | 
ವ್ಯಾಕ್ಸಿನ್ ಒದಗಿಸದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

ಬೆಂಗಳೂರು: ರಾಜ್ಯದಲ್ಲಿ ವ್ಯಾಕ್ಸಿನ್ ಕೊರತೆ ಎದುರಾಗಿರುವ ಹಿನ್ನಲೆ ವ್ಯಾಕ್ಸಿನ್ ಒದಗಿಸದ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ರಾಜ್ಯದಲ್ಲಿ 6 ಕೋಟಿಗೂ ಹೆಚ್ಚು ಜನಸಂಖ್ಯೆ ಇದೆ, ಆದ್ರೆ ನೀವು ಶೇಖಡ ಒಂದರಷ್ಟು ಜನರಿಗೂ ಲಸಿಕೆ ನೀಡಿಲ್ಲ, ರಾಜ್ಯದ ಜನರಿಗೆ ಯಾವಾಗ ಲಸಿಕೆ ಒದಗಿಸುತ್ತೀರಾ ಎಂದು ಎಂದು ಸರ್ಕಾರವನ್ನು ಪ್ರಶ್ನಿಸುವ ಮೂಲಕ ಚಾಟಿ ಬೀಸಿದೆ.

ರಾಜ್ಯದಲ್ಲಿ ಒಂದನೇ ಡೋಸ್ ತೆಗೆದುಕೊಂಡವರಿಗೆ ಎರಡನೇ ಡೋಸ್ ಲಭ್ಯವಾಗಿದಲ್ಲ. 26 ಲಕ್ಷ ಜನರಿಗೆ ಲಸಿಕೆಯ ಕೊರತೆ ಎದುರಾಗಿದೆ. ಈ ಪರಿಸ್ಥಿತಿಯನ್ನು ಯಾವಾಗ ಸರಿಪಡಿಸುತ್ತೀರಾ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.