ಅಮೆರಿಕಾ ಭಾರತಕ್ಕೆ ಸಾಕಷ್ಟು ಸಹಾಯ ಮಾಡುತ್ತಿದೆ

ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಹೇಳಿಕೆ

 | 
ಅಮೆರಿಕಾ ಭಾರತಕ್ಕೆ ಸಾಕಷ್ಟು ಸಹಾಯ ಮಾಡುತ್ತಿದೆ

ವಾಶಿಂಗ್ಟನ್: ಅಮೆರಿಕಾ ದೇಶ ಭಾರತಕ್ಕೆ ಸಾಕಷ್ಟು ಸಹಾಯ ಮಾಡುತ್ತಿದೆ ಎಂದು ಅಮೆರಿಕಾ ಅಧ್ಯಕ್ಷ ಜೋ ಬಿಡೇನ್ ಹೇಳಿದ್ದಾರೆ. ವಾಶಿಂಗ್ಟನ್ ಡಿಸಿಯಲ್ಲಿ ಭಾರತದ ವಿನಾಶಕಾರಿ ಕೋವಿಡ್-19 ಎರಡನೇ ಅಲೆಯ ಕುರಿತು ಮಾತನಾಡಿದ ಅವರು ನಾವು ಭಾರತ ಮತ್ತು ಬ್ರೆಝಿಲ್ ದೇಶಗಳಿಗೆ ಗಮನಾರ್ಹವಾಗಿ ಸಹಾಯ ಮಾಡುತ್ತಿದ್ದೇವೆ ಎಂದಿದ್ದಾರೆ,

ನಾನು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರ ಜೊತೆ ಮಾತನಾಡಿದೆ. ಅವರು ನಮಗೆ ವ್ಯಾಕ್ಸಿನ್ ತಯಾರಿಸಲು ಕಚ್ಚಾ ವಸ್ತುಗಳನ್ನು ಕೇಳಿದ್ದಾರೆ, ನಾವು ಅದನ್ನು ಕಳುಹಿಸುತ್ತಿದ್ದೇವೆ, ನಾವು ಆಕ್ಸಿಜನ್ ಕಳುಹಿಸುತ್ತಿದ್ದೇವೆ, ನಾವು ಸಾಕಷ್ಟು ಸಹಾಯ ಮಾಡುತ್ತಿದ್ದೇವೆ ಎಂದು ಅಮೆರಿಕಾ ಅಧ್ಯಕ್ಷ ಜೋ ಬಿಡೇನ್ ಹೇಳಿದ್ದಾರೆ.

ನಾವು ಯಾರಿಗೆ ವ್ಯಾಕ್ಸಿನ್ ಕೊಡುತ್ತೇವೆ ಎಂದು ಈಗಲೇ ಹೇಳುವುದಿಲ್ಲ, ನಾವು ಹೀಗಾಗಲೇ ಕೆನಡಾ, ಮೆಕ್ಸಿಕೋ ದೇಶಗಳಿಗೆ ವ್ಯಾಕ್ಸಿನ್ ಸರಬರಾಜು ಮಾಡಿದ್ದೇವೆ. ನಾವು ಯಾರಿಗೆ ಕೊಡಬೇಕೆಂದು ಜುಲೈ ನಾಲ್ಕರಂದು ಹೇಳುತ್ತೇನೆ ಎಂದು ತಿಳಿಸಿದ್ದಾರೆ.