ಬ್ಲಾಕ್ ಮತ್ತು ವೈಟ್ ಫಂಗಸ್ ನಂತರ ಈಗ ಎಲ್ಲೋ ಫಂಗಸ್ ಪತ್ತೆ!
ಉತ್ತರಪ್ರದೇಶದ ಘಜಿಯಾಬಾದ್ ನಲ್ಲಿ ಮೊದಲ ಎಲ್ಲೋ ಫಂಗಸ್ ಪ್ರಕರಣ ಪತ್ತೆ!

ನವದೆಹಲಿ: ಭಾರತ ಕೊರೋನಾ ಜೊತೆಗೆ ಹೆಚ್ಚುತ್ತಿರುವ ಮ್ಯೂಕೋರ್ಮೈಕೊಸಿಸ್ ಪ್ರಕರಣಗಳ ವಿರುದ್ಧ ಹೋರಾಡುತ್ತಿದ್ದೆ. ದೇಶದಲ್ಲಿ ಬ್ಲಾಕ್ ಫಂಗಸ್, ವೈಟ್ ಫಂಗಸ್ ನಂತರ ಇದೀಗ ಎಲ್ಲೋ ಫಂಗಸ್ ಕಾಣಿಸಿಕೊಂಡಿದೆ ಎಂಬ ಸುದ್ದಿ ತಿಳಿದು ಬಂದಿದೆ.
ಬ್ಲಾಕ್ ಫಂಗಸ್ ಈಗ ಹೆಚ್ಚಾಗುತ್ತಿದ್ದು, ಈ ವರೆಗೆ ದೇಶದಲ್ಲಿ ಸಾವಿರಾರು ಬ್ಲಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿವೆ. ಮತ್ತು ಕೆಲವು ವೈಟ್ ಫಂಗಸ್ ಪ್ರಕರಣಗಳು ಪತ್ತೆಯಾಗಿವೆ. ಇದರ ಜೊತೆಗೆ ಉತ್ತರಪ್ರದೇಶದ ಘಜಿಯಾಬಾದ್ ನ 45 ವರ್ಷದ ವ್ಯಕ್ತಿಯೋರ್ವನಲ್ಲಿ ಬೆಚ್ಚಿಬೀಳುಸುವಂತಾ ಮೊದಲ ಎಲ್ಲೋ ಫಂಗಸ್ ಪ್ರಕರಣ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.
ಸಿಟಿ ಸ್ಕ್ಯಾನ್ ನಲ್ಲಿ ಸೈನಸ್ ನಾರ್ಮಲ್ ಆಗಿದೆ ಆದರೆ ಎನ್ಡೋಸ್ಕೊಪಿ ಮಾಡಿದಾಗ ಎಲ್ಲೋ ಫಂಗಸ್ ಎಂದು ತಿಳಿದು ಬಂದಿದೆ. ಎಲ್ಲೋ ಫಂಗಸ್ ಸಾಮಾನ್ಯವಾಗಿ ಸರೀಸೃಪಗಳಲ್ಲಿ ಕಂಡು ಬರುತ್ತದೆ. ಮನುಷ್ಯನಲ್ಲಿ ಕಂಡು ಬಂದಿರುವುದು ಇದೇ ಮೊದಲು ಎಂದು ಡಾ. ಬಿ.ಪಿ ತ್ಯಾಗಿ ಹೇಳಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ.
ಎಲ್ಲೋ ಫಂಗಸ್ ಪ್ರಕರಣ ಪತ್ತೆಯಾಗಿರುವ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಿಲ್ಲ. ಆದರೆ, ಬ್ಲಾಕ್ ಫಂಗಸ್ ಮತ್ತು ವೈಟ್ ಫಂಗಸ್ ಗಿಂತಲೂ ಎಲ್ಲೋ ಫಂಗಸ್ ತುಂಬಾ ಅಪಾಯಕಾರಿ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.