ಪಾಲಿಟಿಕ್ಸ್ ಬಿಟ್ಟು ಸ್ಯಾಂಡಲ್ ವುಡ್ ಗೆ ಅಕ್ಟಿಂಗ್ ಮಾಡಲು ಬಂದ ಮಾಜಿ ಸಿಎಂ ಯಡಿಯೂರಪ್ಪ!

ರೋಮಾಂಚನಕಾರಿಯದ ನೈಜ ಕಥೆ ಇದಾಗಿದ್ದು, ಚಿತ್ರಕ್ಕೆ 'ತನುಜಾ' ಎಂಬ ಹೆಸರಿಡಲಾಗಿದೆ. ಹಳ್ಳಿಗಾಡಿನ ತನುಜಾ ಕೋವಿಡ್ ಕಾರಣಾ ನೀಟ್ ಪರೀಕ್ಷೆ ಬರೆಯಲು ಅಸಹಾಯಕಳಾಗಿದ್ದಾಗ, ಅಕೆಯನ್ನು ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ್ ಭಟ್ ಮತ್ತು ಯೂತ್ ಐಕಾನ್ ಪ್ರದೀಪ್ ಈಶ್ವರ್ ಇಬ್ಬರು ಜೊತೆಗೂಡಿ ತನುಜಾಳನ್ನು 
 | 
BSY

ಚಂದನವಕ್ಕೆ ಕಾಲಿಟ್ಟ ಮಾಜಿ ಸಿಎಂ ಬಿ.ಎಸ್.ವೈ!

ತನುಜಾ ಎಂಬ ನೈಜ ಘಟನೆ ಅಧಾರಿತ ಚಿತ್ರದಲ್ಲಿ ವಿಶೇಷ ಪಾತ್ರ!

ನೀಟ್ ಪರೀಕ್ಷೆಗಾಗಿ 350 ಕೀ.ಮಿ ಕ್ರಮಿಸಿದ ಹುಡುಗಿಯೊಬ್ಬಳ ಕಥಾಹಂದರದ ಚಿತ್ರ!

ಚಿತ್ರರಂಗದಲ್ಲಿ ಹೆಸರು ಮಾಡಿ ಅನೇಕರು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅದೇ ರೀತಿ ರಾಜಕಾರಣಿಗಳು ಸಹ ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಚಪ್ಪಾಳೆ ಗಿಟ್ಟಸಿಕೊಂಡಿದಾರೆ. ಅಂತವರ ಸಾಲಿಗೆ ಹೊಸ ಸೆರ್ಪಡೆಯಾಗಿ, ಮಾಜಿ ಸಿಎಂ ಬಿ.ಎಸ್.ವೈ ಯಡಿಯೂರಪ್ಪ ರೋಚಕ ಕಥಾಅಂದರದ ಚಿತ್ರವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಈಗಾಗಲೇ ಯಡಿಯೂರಪ್ಪನವರ ಪಾತ್ರದ ಶೂಟಿಂಗ್ ನಡೆದಿದ್ದು, ಚಿತ್ರೀಕರಣದ ಸಂದರ್ಭದದಲ್ಲಿನ ಫೋಟೋಗಳು ಎಲ್ಲೆಡೆ ವೈರಲ್ ಅಗಿವೆ.


ನೀಟ್ ಪರೀಕ್ಷೆ ಬರೆಯಲು ಹುಡುಗಿಯೊಬ್ಬಳು  350 ಕಿಮೀ ಪ್ರಯಾಣಿಸಿದ ರೋಮಾಂಚನಕಾರಿಯದ ನೈಜ ಕಥೆ ಇದಾಗಿದ್ದು, ಚಿತ್ರಕ್ಕೆ 'ತನುಜಾ' ಎಂಬ ಹೆಸರಿಡಲಾಗಿದೆ. ಹಳ್ಳಿಗಾಡಿನ ತನುಜಾ ಕೋವಿಡ್ ಕಾರಣಾ ನೀಟ್ ಪರೀಕ್ಷೆ ಬರೆಯಲು ಅಸಹಾಯಕಳಾಗಿದ್ದಾಗ, ಅಕೆಯನ್ನು ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ್ ಭಟ್ ಮತ್ತು ಯೂತ್ ಐಕಾನ್ ಪ್ರದೀಪ್ ಈಶ್ವರ್ ಇಬ್ಬರು ಜೊತೆಗೂಡಿ ತನುಜಾಳನ್ನು  ಪರೀಕ್ಷೆಯಲ್ಲಿ ಪಾಸಾಗುವಂತೆ ಮಾಡಿದ್ದರು. ಆ ಘಟನೆ ನಡೆದಾಗ ಬಿ.ಎಸ್.  ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಬಿ.ಎಸ್.ವೈ ಸಹ ತನುಜಾಳಿಗೆ ಸಹಾಯ ಮಾಡಿದ್ದರು. ಈಗ ಸಿನಿಮಾದಲ್ಲೂ ಸಹ ಬಿ.ಎಸ್.ವೈ ಮುಖ್ಯಮಂತ್ರಿ ಪಾತ್ರ ಮಾಡುತ್ತಿದ್ದು. ಬಿ.ಎಸ್.ವೈ  ಚಿತ್ರದಲ್ಲಿ ನಟಿಸಲು ಒಪ್ಪಿ ಚಿತ್ರೀಕರಣದಲ್ಲಿ ಭಾಗಿಯಾಗಿದಕ್ಕೆ ಚಿತ್ರತಂಡ ಫುಲ್ ಖುಷಿಯಾಗಿದೆ.

ರಾಜ್ಯ ಪ್ರಶಸ್ತಿ ವಿಜೇತ ಹರೀಶ್ ಎಂಡಿ ಹಳ್ಳಿ ನಿರ್ದೇಶನ ಮಾಡುತ್ತಿದ್ದು. ಬಿ.ಎಸ್. ಯಡಿಯೂರಪ್ಪ ಜೊತೆ ವಿಶ್ವೇಶ್ವರ ಭಟ್.  ಸುಧಾಕರ್, ರಾಜೇಶ್ ನಟರಂಗ, ಕೈಲಾಶ್, ಸಂಧ್ಯಾ ಅರಕೆರೆ ಮತ್ತು ಬೇಬಿ ಶ್ರೀ ನಟಿಸುತ್ತಿದ್ದಾರೆ.  ಪ್ರದ್ಯೋತನ್ ಸಂಗೀತ ನಿರ್ದೇಶನ, ರವೀಂದ್ರನಾಥ್ ಛಾಯಾಗ್ರಹಣ, ಉಮೇಶ್ ಆರ್.ಬಿ ಸಂಕಲನ, ಆರ್.  ಚಂದ್ರಶೇಖರ ಪ್ರಸಾದ್ ಮತ್ತು ಜೆ.ಎಂ.ಪ್ರಹ್ಲಾದ್ ಸಂವಾದವನ್ನು ನಿರ್ವಹಿಸುತ್ತಿದ್ದಾರೆ.  ಈ ಚಿತ್ರವನ್ನು ‘ಬಿಯಾಂಡ್ ವಿಷನ್ಸ್ ಸಿನಿಮಾಸ್’ ನಿರ್ಮಿಸುತ್ತಿದೆ.