ಸ್ಯಾಂಡಲ್‌ವುಡ್‌ಗೆ ಶುಭ ಶುಕ್ರವಾರ!  ಹೌಸ್‌ಫುಲ್ ಪ್ರದರ್ಶನಕ್ಕೆ ಸರ್ಕಾರ ಅಸ್ತು,.. ಶುರುವಾಯ್ತು ಸಿನಿ ಸುಗ್ಗಿ!

ರಾಜ್ಯ ಸರ್ಕಾರ ಬಾರ್, ರೆಸ್ಟೊರೆಂಟ್‌, ಪಬ್‌ಗಳ ಮೇಲೆ ಹೇರಲಾಗಿದ್ದ 50-50 ರೂಲ್ಸ್ ಅನ್ನು ವಾಪಸ್ ಪಡೆದಿತ್ತಾದರೂ, ಥಿಯೇಟರ್‌ಗಳ ಮೇಲೆ ಹೇರಲಾಗಿದ್ದ ನಿಯಮವನ್ನು ಹಿಂಪಡೆದಿರಲಿಲ್ಲ. ಇದು ಚಿತ್ರರಂಗಕ್ಕೆ ಅಸಮಾಧಾನವನ್ನು ಮೂಡಿಸಿತ್ತು.
 | 
sams

ಅಂತೂ, ಚಿತ್ರರಂಗದ ಒತ್ತಾಯಕ್ಕೆ ಮಣಿದಿರುವ ರಾಜ್ಯ ಸರ್ಕಾರ, ಚಿತ್ರಮಂದಿರಗಳ ಮೇಲೆ ಹೇರಲಾಗಿದ್ದ 50% ಆಕ್ಯುಪೆನ್ಸಿ ಆದೇಶವನ್ನು ಹಿಂಪಡೆದಿದ್ದು, ಇನ್ಮುಂದೆ 100% ಆಕ್ಯುಪೆನ್ಸಿಯಡಿಯಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಟ್ಟಿದೆ. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ  ಮಾತಾಡಿದ ಆರೋಗ್ಯ ಸಚಿವ ಡಾ.ಕೆ ಸುಧಾಕರ್. ‘ನಾಳೆಯಿಂದಲೇ (ಜನವರಿ 05) ರಾಜ್ಯದಾದ್ಯಂತ ಚಿತ್ರಮಂದಿರಗಳು ತಮ್ಮ ಪೂರ್ಣ ಸೀಟು ಸಾಮರ್ಥ್ಯದೊಂದಿಗೆ ಹೌಸ್‌ಫುಲ್ ಪ್ರದರ್ಶಮವನ್ನು ನೀಡಬಹುದಾಗಿದೆ, ಚಿತ್ರಮಂದಿರಗಳ ಜೊತೆಗೆ  ಜಿಮ್, ಸ್ವಿಮ್ಮೀಂಗ್ ಫುಲ್ ಹಾಗೂ ಯೋಗಾಕೇಂದ್ರಗಳ ಮೇಲೆ ಹೇರಲಾಗಿದ್ದ 50:50 ನಿರ್ಬಂಧವನ್ನೂ ಸಹ ಸರ್ಕಾರ ಹಿಂಪಡೆಯಲಾಗಿದೆ’ ಎಂದರು..

ಕಳೆದ ವಾರ ಸಭೆ ನಡೆಸಿದ್ದ ರಾಜ್ಯ ಸರ್ಕಾರ ಬಾರ್, ರೆಸ್ಟೊರೆಂಟ್‌, ಪಬ್‌ಗಳ ಮೇಲೆ ಹೇರಲಾಗಿದ್ದ 50-50 ರೂಲ್ಸ್ ಅನ್ನು ವಾಪಸ್ ಪಡೆದಿತ್ತಾದರೂ, ಥಿಯೇಟರ್‌ಗಳ ಮೇಲೆ ಹೇರಲಾಗಿದ್ದ ನಿಯಮವನ್ನು ಹಿಂಪಡೆದಿರಲಿಲ್ಲ. ಇದು ಚಿತ್ರರಂಗಕ್ಕೆ ಅಸಮಾಧಾನವನ್ನು ಮೂಡಿಸಿತ್ತು. ಸರ್ಕಾರದ ಮಲತಾಯಿ ಧೋರಣೆ ವಿರುದ್ದ ಸಿನಿರಂಗ ಅಕ್ರೋಶವನ್ನ ವ್ಯಕ್ತಪಡಿಸಿತ್ತು. ಚಲನಚಿತ್ರ ವಾಣಿಜ್ಯ ಮಂಡಳಿಯ ಮುಖ್ಯಸ್ಥರು ಸಿಎಂ ಅವರನ್ನು ಭೇಟಿ ಮಾಡಿ ಪರಿಪೂರ್ಣ ಆಸನ ವ್ಯವಸ್ಥೆಗೆ ಮನವಿಯನ್ನು ಸಹ ಮಾಡಿತ್ತು. ಅಂತೆಯೇ ಇದೀಗ ಸರ್ಕಾರವು ಚಿತ್ರಮಂದಿರಗಳ ಮೇಲೆ ಹೇರಲಾಗಿದ್ದ ನಿರ್ಬಂಧವನ್ನು ತೆರೆದಿದೆ. 


ಇನ್ನೂ 50% ಆಕ್ಯುಪೆನ್ಸಿ ರೂಲ್ಸ್‌ ನಿಂದಾಗಿ ತಮ್ಮ ರೀಲಿಸ್ ಡೇಟ್ ಮುಂದಕ್ಕೆ ಹಾಕಿದ್ದ ಸಾಲು-ಸಾಲು ಸಿನಿಮಾಗಳು ಚಿತ್ರಮಂದಿರಗಳಲ್ಲಿ 100% ಆಕ್ಯುಪೆನ್ಸಿಗೆ ಸರ್ಕಾರ ಅಸ್ತು ಎಂದ ಬೆನ್ನಲ್ಲೇ ಬಿಡುಗಡೆಗೆ ಸಿದ್ದವಾಗಿದ್ದು ತಮ್ಮ ರೀಲೀಸ್ ಡೇಟ್ ಘೋಷಿಸುತ್ತಿವೆ. ಮೊದಲಿಗೆ ಏಕ್ ಲವ್ ಯಾ, ವರದ, ಓಲ್ಡ್-ಮಾಂಕ್ ಸಿನಿಮಾಗಳು ಬಿಡುಗಡೆ ಆಗಲಿವೆ.