'ಪಠಾಣ್' ಸಿನೆಮಾ ಬಾಯ್ಕಾಟ್ ಮಾಡಿದ್ದರ ಘೋರ ಪರಿಣಾಮಗಳು:

 | 
pathan film

ವಿಶ್ವದಾದ್ಯಂತ 300 ಸ್ಕ್ರೀನ್‍ಗಳನ್ನು ಹೊಸದಾಗಿ ಸೇರಿಸಬೇಕಾಯ್ತು. ಹಾಗಾಗಿ ಪಠಾಣ್ ವಿಶ್ವದಾದ್ಯಂತ ಒಟ್ಟು 8000 ಸ್ಕ್ರೀನ್‍ಗಳಲ್ಲಿ ಬಿಡುಗಡೆಯಾಗಿ, ಅತೀ ಹೆಚ್ಚು ಸ್ಕ್ರೀನ್‍ಗಳಲ್ಲಿ ಬಿಡುಗಡೆಯಾದ ಹಿಂದಿ ಸಿನೆಮಾ ಎನ್ನುವ ಹೆಗ್ಗಳಿಕೆ ಪಡೆಯಿತು

ಜನರ ಬೇಡಿಕೆ ಎಷ್ಟಿದೆಯೆಂದರೆ ಥಿಯೇಟರ್ ಗಳು ಸಾಕಾಗದೆ, ಉತ್ತರ ಪ್ರದೇಶ ಹಾಗೂ ರಾಜಸ್ಥಾನದಲ್ಲಿ ಮುಚ್ಚಿಹೋಗಿದ್ದ 25 ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳನ್ನು ತೆರೆದು ಪಠಾಣ್ ಚಿತ್ರ ಪ್ರದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತಿದೆ

ಇದೇ ಮೊಟ್ಟಮೊದಲಬಾರಿ ಶಾರೂಖ್ ಖಾನ್ ಸಿನೆಮಾವೊಂದು ಬೆಳಗ್ಗೆ 6 ಗಂಟೆಗೆ ಪ್ರದರ್ಶಿಸಲ್ಪಡುತ್ತಿದೆ

ಇವತ್ತು ಚಿತ್ರ ಬಿಡುಗಡೆಯಾಗಿ ಸಂಜೆಯಾದರೂ ಜನರ ನೂಕುನುಗ್ಗಲು ನಿಲ್ಲದಿರುವುದರಿಂದ ಇದೀಗ ದೇಶದೆಲ್ಲೆಡೆ ಅನೇಕ ಸ್ಕ್ರೀನ್‍ಗಳು ಮಧ್ಯರಾತ್ರಿಯ ಇನ್ನೊಂದು ಶೋ ಸೇರಿಸಿದ್ದಾರೆ

ನಿನ್ನೆ ರಾತ್ರೆಯವರೆಗೆ ಸುಮಾರು 4.5 ಲಕ್ಷ ಮುಂಗಡ ಟಿಕೇಟ್ ಬಿಕರಿಯಾಗಿದ್ದು, ಹಿಂದಿ ಸಿನೆಮಾ ಮಟ್ಟಿಗೆ ಇದು ಇನ್ನೊಂದು ದಾಖಲೆ

ಇನ್ನು ಭಕ್ತರ ಬಹು ದೊಡ್ಡ ಬೇಡಿಕೆಯಂತೆ ಬೇಷರಮ್ ಹಾಡಿನಲ್ಲಿ ದೀಪಿಕಾ ಪಡುಕೋಣೆ ಧರಿಸಿರುವ ಕೇಸರಿ ಬಿಕನಿಯ ದೃಶ್ಯಕ್ಕೆ ಒಂಚೂರೂ ಕತ್ತರಿ ಹಾಕದೇ ಪಠಾಣ್ ಬಿಡುಗಡೆಯಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಭಕ್ತರು ಪಠಾಣ್ ಬಾಯ್ಕಾಟ್ ಮಾಡಿರುವುದರಿಂದ ಈ ಚಿತ್ರದ ಮೇಲೆ ಬಹಳ ದೊಡ್ಡ ಪರಿಣಾಮ ಬೀರಿದೆ.