'ಅವತಾರ ಪುರುಷ'ನ ಹೊಸ ಅವತಾರ ರಿವೀಲ್!
'ಅವತಾರ ಪುರುಷ' ಹೊಸ ಟೀಸರ್ ರಿಲೀಸ್, ಯೂಟ್ಯೂಬ್ ನಲ್ಲಿ ಒಂದೇ ದಿನದಲ್ಲಿ 1 ಮಿಲಿಯನ್ ವೀವ್ಸ್... ಸಿಂಪಲ್ ಸುನಿ ನಿರ್ದೇಶನ, ಶರಣ್ ಮತ್ತು ಆಶಿಕಾ ರಂಗನಾಥ್ ಜೋಡಿಯ 'ಅವತಾರ ಪುರುಷ' ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ.

ಸಖತ್ ಫನ್ನಿ ಆಗಿರುವ ಟೀಸರ್ ನಲ್ಲಿ ಶರಣ್ ಕಾಮಿಡಿ ಟೈಮಿಂಗ್, ಪಂಚಿಂಗ್ ಡೈಲಾಗ್‌ಗಳು ಗಮನ ಸೆಳೆಯುತ್ತಿದೆ.
MAY 6ರಂದು ಚಿತ್ರ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಘೋಷಿಸಿದೆ.
ಅಚ್ಚರಿ ಗೆಟಪ್‌ನಲ್ಲಿ ಮಾಂತ್ರಿಕನಾಗಿ ಶ್ರೀನಗರ ಕಿಟ್ಟಿ ಅಭಿನಯಿಸಿದ್ದು. ಕಿಟ್ಟಿ ಪಾತ್ರದ ಕುರಿತು ಕುತೂಹಲ ಮೂಡುತ್ತಿದೆ.
ಪೋಸ್ಟರ್‌ಗಳಿಂದ ಗಮನ ಸೆಳೆದ 'ಅವತಾರ ಪುರುಷ' ಈಗ ಟೀಸರ್ ಬಿಡುಗಡೆಗೊಳಿಸಿ ಸಿನಿ ರಸಿಕರ ಗಮನ ಸೆಳೆಯುತ್ತಿದ್ದಾನೆ. ನಿನ್ನೆ, ಒಂದು ನಿಮಿಷ 45 ಸೆಕೆಂಡ್‌ಗಳ ಟೀಸರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಯೂಟ್ಯೂಬ್ ನಲ್ಲಿ ಒಂದೇ ದಿನದಲ್ಲಿ 1 ಮಿಲಿಯನ್ ವೀಕ್ಷಣೆ ಕಂಡು ಸಖತ್ ಸದ್ದು ಮಾಡುತ್ತಿದೆ. ಸಿಂಪಲ್ ಸುನಿ ನಿರ್ದೇಶನದಲ್ಲಿ, ಶರಣ್ ಮತ್ತು ಆಶಿಕಾ ರಂಗನಾಥ್ ಜೋಡಿಯ 'ಅವತಾರ ಪುರುಷ' ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದ್ದು, ಸುನಿ ಈ ಭಾರಿ ಯಾವ ಜಾದು ಮಾಡಲಿದ್ದಾರೆ ಎಂಬ ಕೌತುಕ ಮೂಡಿದೆ.
ಸಖತ್ ಫನ್ನಿ ಆಗಿರುವ ಟೀಸರ್ ನಲ್ಲಿ ಶರಣ್ ಕಾಮಿಡಿ ಟೈಮಿಂಗ್, ಪಂಚಿಂಗ್ ಡೈಲಾಗ್‌ಗಳು ಗಮನ ಸೆಳೆಯುತ್ತಿದೆ. ಜ್ಯೂನಿಯರ್ ಕಲಾವಿದನಾಗಿ ಶರಣ್ 'ಅವತಾರ ಪುರುಷ'ದಲ್ಲಿ ಕಾಣಿಸಿಕೊಂಡಿದ್ದು. ಸಿನಿಮಾಗಳ ಹೊರತಾಗಿ ಒಮ್ಮೆ ನೈಜಜೀವನದಲ್ಲಿಯೂ ನಟಿಸಬೇಕಾದ ಸಂದರ್ಭ ಎದುರಾದರೆ ಏನಾಗುತ್ತದೆ ಎಂಬುದು ಈ ಚಿತ್ರದ ಒನ್‌ಲೈನ್ ಕಥೆ ಎನ್ನಲಾಗಿದೆ. ಇದಲ್ಲದೆ, ಚಿತ್ರಕ್ಕೆ ಬ್ಲ್ಯಾಕ್ ಮ್ಯಾಜಿಕ್‌ನ ಫ್ಲೇವರ್ ಕೂಡ ನೀಡಲಾಗಿದ್ದು, ಮಾಟ-ಮಂತ್ರಗಳ, ತಂತ್ರಗಳನ್ನು ತಿಳಿಸಲು ಸುನಿ ರೆಡಿಯಾಗಿದ್ದಾರೆ. ಇನ್ನೂ, ಈ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಬಂಡವಾಳ ಹೂಡಿದ್ದು MAY 6ರಂದು ಚಿತ್ರ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಘೋಷಿಸಿದೆ.
ಸಿನಿಮಾದಲ್ಲಿ ಬಹುದೊಡ್ಡ ತಾರಗಣವೇ ಇದ್ದು ಸಾಯಿ ಕುಮಾರ್, ಭವ್ಯಾ, ಸುಧಾರಾಣಿ ಸೇರಿದಂತೆ ಹಲವು ನಟ-ನಟಿಯರು ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇವರೆಲ್ಲರ ಗೆಟಪ್ ಕೂಡ ವಿಭಿನ್ನವಾಗಿದ್ದು, ಟೀಸರ್ ನಲ್ಲಿ ಎಲ್ಲರೂ ಮಿಂಚಿದ್ದಾರೆ. ಇನ್ನೂ ಅಚ್ಚರಿ ಗೆಟಪ್‌ನಲ್ಲಿ ಮಾಂತ್ರಿಕನಾಗಿ ಶ್ರೀನಗರ ಕಿಟ್ಟಿ ಅಭಿನಯಿಸಿದ್ದು. ಕಿಟ್ಟಿ ಪಾತ್ರದ ಕುರಿತು ಕುತೂಹಲ ಮೂಡುತ್ತಿದೆ.