ನಮ್ಮ ಕಲಾವಿದರು ಮತ್ತು ನಾವು 

ನಾವು ನಮ್ಮ‌ ನಟರಿಗೆ ಅಭಿಮಾನವನ್ನು ಮಾತ್ರ ತೋರುತ್ತಿದ್ದೇವೆ ಆದರೆ ಅವರು ಸಹಸ್ರಾರು ಮಂದಿಗೆ ಅನ್ನದ ದಾರಿಯನ್ನು ತೋರುತ್ತಿದ್ದಾರೆ . ದಯವಿಟ್ಟು ನಾವು ಯಾರನ್ನೇ ಆಗಲಿ ದೂರುವ ದೂಷಿಸುವ ಮುನ್ನ ಒಂದು ಕ್ಷಣ ಅವರ ಸಹಾಯವನ್ನೊಮ್ಮೆ ಗಮನಿಸಿ ಅವರ ಮಾನವೀಯತೆಯನ್ನು ಪರಿಗಣಿಸಬೇಕು , 
 | 
darshan and puneeth
ಯಾವುದೇ ನಾಡಿನ ಯಾವುದೇ ಭಾಷೆಯ ಜನಪ್ರಿಯ ನಾಯಕನಟರಿಬ್ಬರ ಅಭಿಮಾನಿಗಳು ಪರಸ್ಪರ ತೀರಾ ಮುಜುಗರಕ್ಕೊಳಪಡುವಂತೆ ಬೈದಾಡಿಕೊಂಡಾಗ ಅವರನ್ನು ಇಷ್ಟ ಪಡುವ ಅಭಿಮಾನಿಗಳಿಗೆ ಬೇಸರವಾಗುವುದು ಸಹಜ ಆ ಬೇಸರವನ್ನು ಕೆಲವರು ಕೋಪದ ಮೂಲಕ ನಿಂದನೆಯ ಮೂಲಕ ವ್ಯಕ್ತಪಡಿಸುತ್ತಾರೆ . 
ಆದರೆ ಇಲ್ಲಿ ಬೇಸರಕ್ಕಿಂತಲೂ ಹೆಚ್ಚು ನೋವು ಪಡುತ್ತಿರುವವರು ಆ ನಟರಿಂದ ಆಸ್ಪತ್ರೆಗೆ ಹಣ ಸಹಾಯ ಪಡೆದು ಜೀವ ಉಳಿಸಿಕೊಂಡ ಹಲವಾರು ಮಂದಿ , ಮಕ್ಕಳ ಶಿಕ್ಷಣಕ್ಕೆ ಹೆಣ್ಣು ಮಕ್ಕಳ ಮದುವೆಗೆ ಸಹಾಯ ಪಡೆದ ಬಡಪೋಷಕರು ,  ಆಶ್ರಯ ಪಡೆದ ಹತ್ತಾರು ಆಶ್ರಮದ ವಿಕಲ ಚೇತನರು , ದೃಷ್ಟಿಯಿಲ್ಲದಿದ್ದರೂ ಸ್ವಚ್ಚಂಧವಾಗಿ ಬದುಕುತ್ತಿರುವ ಅಂಧಾಶ್ರಮದ ಅಸಂಖ್ಯಾತ ಕುರುಡರು ,  ಹೊತ್ತೊತ್ತಿಗೂ ಹಸಿವೆಯನ್ನು ನೀಗಿಸಿಕೊಳ್ಳುತ್ತಿರುವ ಸಾವಿರಾರು ಅನಾಥರು , ಅವರನ್ನು ನಂಬಿ ಬದುಕುತ್ತಿರುವ ನೂರಾರು ಕುಟುಂಬಗಳು ...... ಇವರೆಲ್ಲಾ ತಮ್ಮನ್ನು ಸಾಕು ಸಲುಹಿದ ನಾಯಕರಿಗಾಗುತ್ತಿರುವ ಅವಮಾನವನ್ನ ಯಾವ ರೀತಿ ಸಹಿಸಿಕೊಳ್ಳುತ್ತಾರೆ ತಮ್ಮ ಅಸಹನೆಯನ್ನು ಯಾವ ರೀತಿ ಹೊರಹಾಕುತ್ತಾರೆ ? 
ನಾವು ನಮ್ಮ‌ ನಟರಿಗೆ ಅಭಿಮಾನವನ್ನು ಮಾತ್ರ ತೋರುತ್ತಿದ್ದೇವೆ ಆದರೆ ಅವರು ಸಹಸ್ರಾರು ಮಂದಿಗೆ ಅನ್ನದ ದಾರಿಯನ್ನು ತೋರುತ್ತಿದ್ದಾರೆ . ದಯವಿಟ್ಟು ನಾವು ಯಾರನ್ನೇ ಆಗಲಿ ದೂರುವ ದೂಷಿಸುವ ಮುನ್ನ ಒಂದು ಕ್ಷಣ ಅವರ ಸಹಾಯವನ್ನೊಮ್ಮೆ ಗಮನಿಸಿ ಅವರ ಮಾನವೀಯತೆಯನ್ನು ಪರಿಗಣಿಸಬೇಕು , ಓಟೆಂಬ ನಮ್ಮ ಹಕ್ಕನ್ನು ಪಡೆದ ರಾಜಕೀಯ ನಾಯಕರು ಮಾಡಲಾರದ್ದನ್ನು ಈ ನಮ್ಮ ಸಿನಿಮಾ ನಾಯಕರು ಮಾಡುತ್ತಿದ್ದಾರೆ . 
ಇವರು ನಮ್ಮ ಸಾಮಾಜಿಕ ಜಾಲತಾಣದ ಆಹಾರ ಅಲ್ಲ ಸಹಸ್ರಾರು ಮಂದಿ ಹಸಿದವರ ತಟ್ಟೆಯ ಆಹಾರ . ಸೂರ್ಯ ಚಂದ್ರರಿಗೆ ಗ್ರಹಣವಿರುತ್ತದೆಯೇ ಹೊರತು ತಾರೆಗಳಿಗಲ್ಲ .....ಅಭಿಮಾನದ ಹೆಸರಲ್ಲಿ ನಾವು ತಾರೆಗಳಿಗೆ ಗ್ರಹಣವಿಡಿಸುವುದು ಬೇಡ . ಇಷ್ಟಕ್ಕೂ ಅವರು ನಮಗೆ ನೀಡಿರೋ ಸ್ಥಾನವಾದರೂ ಎಂತದ್ದು ಒಬ್ಬರು ನಮ್ಮನ್ನು ಪ್ರೀತಿಯಿಂದ ಸೆಲೆಬ್ರೆಟಿಗಳು ಎಂದು ಕರೆದರೆ ಮತ್ತೊಬ್ಬರು ನಮ್ಮನ್ನು ಭಕ್ತಿಯಿಂದ ದೇವರುಗಳು ಎಂದು ಕೂಗಿದವರು ...... ಮತ್ತು ಸ್ವತಃ ದೇವರಾದವರು . 
ಅಭಿಮಾನವೆನ್ನುವುದು ರಕ್ತ ಉಕ್ಕುವ ಹೃದಯದಲ್ಲಿರಬೇಕೇ ಹೊರತು ಎಂಜಲುಕ್ಕುವ ನಾಲಿಗೆಯಲ್ಲಲ್ಲ .
ನೋವು ಇಲ್ಲಿ ಅಕ್ಷರವಾಗಿದೆ ಯಾರಿಗಾದರೂ ನೋವಾಗಿದ್ದರೆ ದಯವಿಟ್ಟು ಕ್ಷಮೆಯಿರಲಿ 🙏