ಅಗಲಿದ ಅಪ್ಪು ವಿನ ಜೇಮ್ಸ್ ಚಿತ್ರಕ್ಕೆ  ಶಿವಣ್ಣ ಧ್ವನಿ!
 

ಎಲ್ಲವೂ ಅಂದಕೊಂಡಂತೆಯೇ ಅಗಿದ್ದರೆ, ಇಷ್ಟೊತ್ತಿಗೆ ಅಪ್ಪು  ಡಬ್ಬಿಂಗ್ ಸ್ಟೂಡೀಯೋದಲ್ಲಿ ಕೂತೂ ಮಾನಿಟರ್ ಮುಂದೆ ಜೇಮ್ಸ್  ಚಿತ್ರದ ತಮ್ಮ ಪಾತ್ರಕ್ಕೆ  ಧ್ವನಿ ನೀಡುತ್ತೀರ ಬೇಕಿತ್ತು..!
 | 
appu

ಅದರೆ,  ದುರಾದೃಷ್ಟವಶಾತ್ ಎಂಬಂತೆ ಚಿತ್ರ ಕಂಪ್ಲೀಟ್ ಅಗುವ ಮೊದಲೇ ಅಪ್ಪು ಬಾರದ ಲೋಕಕ್ಕೆ ತೆರಳಿಬಿಟ್ಟರು. ಜೇಮ್ಸ್ ಪುನೀತ್ ನಟನೆಯ ಕೊನೆಯ ಸಿನಿಮಾವಾಯ್ತು.
ನಿದನಕ್ಕೂ ಮುನ್ನವೇ ಪುನೀತ್ ಭಾಗದ ಚಿತ್ರೀಕರಣ ಸಂಪೂರ್ಣವಾಗಿದ್ದರು ಸಹ, ಡಬ್ಬಿಂಗ್ ಮತ್ತು ಎರಡು ಹಾಡುಗಳು ಹಾಗೇ ಉಳಿದುಕೊಂಡಿತ್ತು. ಅಪ್ಪು ಇಲ್ಲದೆ ಅವರ ಪಾತ್ರಕ್ಕೆ ಯಾರು ಧ್ವನಿಯಾಗುತ್ತಾರೇಂಬ ಪ್ರಶ್ನೇ ಎಲ್ಲರಲ್ಲೂ ಮೂಡಿತ್ತು. ಚಿತ್ರದಲ್ಲಿ ಅಪ್ಪು ಧ್ವನಿ ಇರುತ್ತಾ? ಅಥವಾ ಅಪ್ಪುಗೆ ಬೇರೆ ಯಾರಾದರು ಡಬ್ಬಿಂಗ್ ಮಾಡುತ್ತಾರ? ಎಂಬ ಚರ್ಚೆ ಶುರುವಾಗಿತ್ತು. ಕೆಲವುರು ಶಿವಣ್ಣ ಧ್ವನಿ ನೀಡಬೇಕೆಂದರೆ, ಇನ್ನೂ ಕೆಲವರು ಯುವರಾಜ್ ಕುಮಾರ್ ಧ್ವನಿ ನೀಡಬೇಕೆಂದರು, ಆದರೆ ಈಗ ಇದಕ್ಕೆಲ್ಲ ಸ್ಪಷ್ಟ ಚಿತ್ರಣ ಸಿಕ್ಕಿದ್ದು, ಜೇಮ್ಸ್ ಚಿತ್ರದಲ್ಲಿನ ಅಪ್ಪು ಪಾತ್ರಕ್ಕೆ ಶಿವಣ್ಣ  ಧ್ವನಿ ನೀಡಿದ್ದಾರೆ.


ಡಬ್ಬಿಂಗ್ ಕುರಿತಾಗಿ ತಮ್ಮ ಅನುಭವ ಹಂಚಿಕೊಂಡ ಶಿವಣ್ಣ,  'ಡಬ್ಬಿಂಗ್ ಸಮಯದಲ್ಲಿ ಅಪ್ಪು ಮುಖ ನೋಡಿಕೊಂಡು ಡಬ್ ಮಾಡೋದು ಬಹಳ ಕಷ್ಟ ಅಯ್ತು. ಅವನ ವಾಯ್ಸ್ ಜೊತೆಗೆ ಮ್ಯಾಚ್ ಮಾಡೋದು ಕಷ್ಟ, ನನ್ನ ಪ್ರಯತ್ನ ನಾನು ಮಾಡಿದ್ದೀನಿ ಎಲ್ಲರಿಗೂ ಇಷ್ಟವಾಗಬಹುದು 'ಎಂದರು. ಅಲ್ಲದೇ 'ನನ್ನ ಸಿನಿಮಾಗೆ ಡಬ್ ಮಾಡುವುದು ಸುಲಭ, ಬೇರೆ ನಟನ ಒಳಗೆ ನುಗ್ಗಿ ಡಬ್ ಮಾಡೋದು ಕಷ್ಟ, ಡಬ್ಬಿಂಗ್ ಕಲಾವಿದರಿಗೆ ಇದು ಸುಲಭ'ವೆಂದರು.


rja kumarಇನ್ನೂ, ಚಿತ್ರದ ನಿರ್ದೇಶಕ ಬಹದ್ದೂರ್ ಚೇತನ್ ಮಾತನಾಡಿ, 'ಶಿವಣ್ಣ ಜೇಮ್ಸ್ ಚಿತ್ರದಲ್ಲಿ ಒಂದು ಪಾತ್ರ ಮಾಡಿದ್ದು, ಆ ಪಾತ್ರದ ಜೊತೆಗೆ ಅಪ್ಪು ಅವರ ಪಾತ್ರಕ್ಕೂ ಕೂಡ ಡಬ್ಬಿಂಗ್ ಮಾಡಿದ್ದಾರೆ. ಆದರೆ ಅವರದ್ದೇ ಧ್ವನಿ  ಸಿನಿಮಾದಲ್ಲಿ ಇರುತ್ತೆ ಎಂದು ಈಗಲೇ ಹೇಳಲು ಆಗುವುದಿಲ್ಲ. ಯಾಕೆಂದರೆ ಅಪ್ಪು ಅವರ ಧ್ವನಿ ಇರಿಸಲು ತಾಂತ್ರಿಕ ಕೆಲಸಗಳು ನಡೆಯುತ್ತಿವೆ. ಪುನೀತ್‌ ಅವರ ಧ್ವನಿಯನ್ನೆ ಉಳಿಸಲು ಸಿನಿಮಾ ತಂಡ ಸಾಕಷ್ಟು ಪ್ರಯತ್ನ ಪಡುತ್ತಿದ್ದು, ಅದಕ್ಕಾಗಿ ಉತ್ತಮ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ. ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಪುನೀತ್ ರಾಜ್‌ಕುಮಾರ್ ಅವರು ಮಾತಾಡಿದ್ದೆ ಸಂಭಾಷಣೆಯನ್ನು ಹಾಗೆ ಉಳಿಸಿಕೊಳ್ಳುವುದಕ್ಕೆ ಮೊದಲ ಆದ್ಯತೆ ನೀಡಲಾಗಿದೆ.  ಒಂದು ವೇಳೆ ಸಾಧ್ಯ ಆಗದೇ ಇದ್ದರೆ ಮಾತ್ರ ಶಿವಣ್ಣ ಅವರ ಧ್ವನಿಯನ್ನು ಬಳಸಿಕೊಳ್ಳಲಾಗುತ್ತದೆ' ಎಂದರು.


ನಟ ಪುನೀತ್‌ ರಾಜ್‌ಕುಮಾರ್ ಅವರ ಹುಟ್ಟುಹಬ್ಬ ಮಾರ್ಚ್ 17ಕ್ಕೆ  ಜೇಮ್ಸ್ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ನಿರ್ದರಿಸಿದ್ದು, ಚಿತ್ರದ  ಕೆಲಸಗಳು ಸಂಪೂರ್ಣವಾಗಿದೆ. ಮೊನ್ನೆಯಷ್ಪೆ ಅರ್ಮಿ ಲುಕ್ ನಲ್ಲಿರುವ ಅಪ್ಪು ಚಿತ್ರವನ್ನು ಚಿತ್ರತಂಡ ಪೋಸ್ಟ್ ಮಾಡಿದ್ದು, ಸದ್ಯದಲ್ಲೇ ಚಿತ್ರದ ಟೀಸರ್ ರಿಲೀಸ್ ಮಾಡಲಿದೆ. ಬೆಳ್ಳಿ ಪರದೆ ಮೇಲೆ ಕೊನೆಯ ಬಾರಿಗೆ ಜೇಮ್ಸ್ ರೂಪದಲ್ಲಿ ಬರುತ್ತಿರುವ ಅಪ್ಪುರನ್ನು ಕಣ್ತುಂಬಿಕೊಳ್ಳಲು  ಅಭಿಮಾನಿಗಳು,ಕನ್ನಡ ಪ್ರೇಕ್ಷಕರು  ಕಾತರದಿಂದ  ಕಾಯುತ್ತಿದ್ದಾರೆ.