ಚಿತಾಗಾರದ ಕಾರ್ಮಿಕರಿಗೆ ನೆರವಿನ ಹಸ್ತ ನೀಡಿದ ತುಪ್ಪದ ಬೆಡಗಿ...! 

 ರುದ್ರಭೂಮಿಯ ಕೆಲಸಗಾರರಿಗೆ, ನಿರಾಶ್ರಿತರಿಗೆ ಹಾಗೂ ಬಂದೋಬಸ್ತ್​ ನಲ್ಲಿದ್ದ ಪೊಲೀಸರಿಗೆ ದಿನಸಿ ಕಿಟ್ ನೀಡಿದ್ದಾರೆ ನಟಿ ರಾಗಿಣಿ ದ್ವಿವೇದಿ.

 | 
Ragini dvivedi

ನಮಗೆಲ್ಲ ತಿಳಿದಿರುವ ಹಾಗೆ ಕೊರೋನಾದಿಂದ ರಾಜ್ಯದ ಜನತೆ ತತ್ತರಿಸಿ ಹೋಗಿದೆ. ಬಡ ಮತ್ತು ಮಾಧ್ಯಮ ವರ್ಗದ ಕುಟುಂಬಗಳು ಬೀದಿಗೆ ಬರುವಂತಹ ಸಂಕಷ್ಟ ಎದುರಾಗಿದೆ. ಇದರ ಜೊತೆಗೆ ಕೊರೋನಾ ಉಲ್ಬಣಕ್ಕೆ ತುತ್ತಾಗಿರುವ ರೋಗಿಗಳ ಚಿಕಿತ್ಸೆ ವಿಚಾರಕ್ಕೆ ಸಂಬಂಧಿಸಿದಂತೆ ಈ ವರ್ಗದ ಜನರು ನೇರವಾಗಿ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರಕ್ಕಾಗಿ ಸಾಲುಗಟ್ಟಿ ನಿಲ್ಲುವಂತಾಗಿದೆ. ಈ ಎಲ್ಲಾ ವಿದ್ಯಮಾನಗಳು ಸಾರ್ವಜನಿಕರಲ್ಲಿ ಮಾನಸಿಕವಾಗಿ ದುರ್ಬಲಗೊಳಿಸುತ್ತಿದೆ. ನಮ್ಮನ್ನಾಳುವ ಸರ್ಕಾರಗಳು ನಿಜಕ್ಕೂ ಜನರಲ್ಲಿ ಆತ್ಮ ಸ್ತಯ್ರ್ಯ ತುಂಬುವ ಅನಿವಾರ್ಯ ತುರ್ತಾಗಿದೆ.

ಈ ಸಂದಿಗ್ದ ಪರಿಸ್ಥಿತಿಯಲ್ಲಿ ಅನೇಕ ಸಿನಿಮಾ,ಕ್ರಿಕೆಟ್,ರಾಜಕೀಯ ತಾರೆಗಳು ಸೇರಿದಂತೆ ಸಾಮಾಜಿಕ ಸಂಘಟನೆಗಳು ತಮ್ಮ ಕೈಲಾದಷ್ಟು ನೆರವಿನ ಹಸ್ತ ನೀಡುವುದರ ಮೂಲಕ ಬಡತನದ ಹಸಿವಿಗೆ ಮಿಡಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದ  ಖ್ಯಾತ ನಟಿ ರಾಗಿಣಿ ದ್ವಿವೇದಿ ಬಂದೋಬಸ್ತ್​ನಲ್ಲಿದ್ದ ಪೊಲೀಸರಿಗೆ ಆಹಾರದ ಪೊಟ್ಟಣಗಳನ್ನು ನೀಡಿದ್ದರು. ಇದೀಗ ಚಿತಾಗಾರ ಹಾಗೂ ರುದ್ರಭೂಮಿಯ ಕೆಲಸಗಾರರಿಗೆ ದಿನಸಿ ಕಿಟ್ ಹಂಚುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ.