ಕಮಲ್ ಮಾತ್ರವಲ್ಲ ಹಲವು ನಟರು ತಮ್ಮ ಚೊಚ್ಚಲ ರಾಜಕೀಯ ಚದುರಂಗದಲ್ಲಿ ಸೋತಿದ್ದಾರೆ
ಯಾವ ಯಾವ ಸೆಲೆಬ್ರಿಟಗಳು ರಾಜಕೀಯ ಎಂಟ್ರಿಯಲ್ಲೇ ಸೋತಿದ್ದಾರೆ, ಡೀಟೈಲ್ಸ್ ಇಲ್ಲಿದೆ
ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಅವರು ಕೊಯಮತ್ತೂರು ದಕ್ಷಿಣ ಕ್ಷೇತ್ರದಲ್ಲಿ ಚುನಾವಣೆಗೆ ನಿಂತು ಬಿಜೆಪಿಯ ವನತಿ ಶ್ರೀನಿವಾಸನ್ ಎದುರು ಸೋತಿದ್ದಾರೆ. ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಸ್ಪರ್ಧಿಸಿ ದುರಾದೃಷ್ಟವಸಾತ್ ಸೋತಿದ್ದಾರೆ. 22ನೇ ರೌಂಡ್ ಮತಎಣಿಕೆ ತನಕ ಲೀಡ್ ನಲ್ಲಿದ್ದ ಕಮಲ್ ನಂತರ ವನತಿ ಶ್ರೀನಿವಸನ್ ಕಡೆ ವಾಲಿತು. ಕೊನೇಗೆ ವನತಿ ಅವರು 1728 ವೋಟ್ ಗಳ ಅಂತರದಿಂದ ಗೆದ್ದರು.
ಅದಾಗ್ಯು ಕಮಲ್ ಅವರ ಮಕ್ಕಳ್ ನೀದಿ ಮೈಯ್ಯಂ ಪಕ್ಷ ನಟ ಶರತ್ ಕುಮಾರ್ ಅವರ ಆಲ್ ಇಂಡಿಯ ಸಮಥುವ ಮಕ್ಕಳ್ ಕಚಿ ಮತ್ತು ಇಂಡಿಯಾ ಜನನಯಗ ಕಚಿ ಜೊತೆ ಹೊಂದಾಣಿಕೆ ಮಾಡಿಕೊಂಡು 154 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು ಆದರೆ ಒಂದೇ ಒಂದು ಸಿಟನ್ನು ಗೆಲ್ಲದೆ ವಿಫಲವಾಗಿದೆ. ಕಮಲ್ ಹಾಸನ್ ಪೊಲಿಟಿಕಲ್ ಕೆರಿಯರ್ ನ್ ಮೊದಲ ಪ್ರಯತ್ನದಲ್ಲಿ ಸೋತಿದ್ದಾರೆ.
ಕಮಲ್ ಹಸನ್ ಮಾತ್ರವಲ್ಲದೇ ಇತರ ನಟರು ಸಹ ತಮ್ಮ ಚೊಚ್ಚಲ ರಾಜಕೀಯ ಪ್ರಯತ್ನದಲ್ಲಿ ಸೋತಿದ್ದಾರೆ ಅವರು ವಿವರ ಇಲ್ಲಿದೆ.
ಪವನ್ ಕಲ್ಯಾಣ್
2014 ರಲ್ಲಿ ಜನಸೇನಾ ಎಂಬ ಪಾರ್ಟಿ ರಚಿಸಿದ ಟಾಲಿವುಡ್ ನಟ ಪವನ್ ಕಲ್ಯಾಣ್ 2019 ರಲ್ಲಿ ನಡೆದ ಜನರಲ್ ಎಲೆಕ್ಷನ್ ನಲ್ಲಿ ಎರಡು ಕಡೆ ಸ್ಪರ್ಧಿಸಿದ್ದರು. ಆದ್ರೆ, ಆ ಎರಡೂ ಕಡೆಯೂ ಸೋತರು.
ಸ್ಮೃತಿ ಇರಾನಿ
2003 ರಲ್ಲಿ ಸ್ಮೃತಿ ಇರಾನಿಯವರು ಬಿಜೆಪಿಗೆ ಸೇರ್ಪಡೆಯಾಗಿ ಮಹಾರಾಷ್ಟ್ರದ ಯೂಥ್ ವಿಂಗ್ ನ ವೈಸ್ ಪ್ರಸಿಡೆಂಟ್ ಆಗಿದ್ರು, 14ನೇ ಲೋಕಸಭಾ ಚುನಾವಣೆಯಲ್ಲಿ ಕಪಿಲ್ ಸಿಬಲ್ ಎದುರು ದೆಹಲಿಯ ಚಾಂದಿನಿ ಚೌಕ್ ನಲ್ಲಿ ಸ್ಪರ್ಧಿಸಿ ಸೋತರು. ಈಗ ಉತ್ತರಪ್ರದೇಶದ ಅಮೇಥಿಯ ಸಂಸದರಾಗಿದ್ದು ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಗುಲ್ ಪನಗ್
ಗುಲ್ ಪನಗ್ ಅವರು 2014 ಲೋಕಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಮೂಲಕ ಚಂದೀಘಡ್ ನಲ್ಲಿ ನಿಂತು ತಮ್ಮ ಪೊಲಿಟಿಕಲ್ ಕ್ಯರಿಯರ್ ಪರೀಕ್ಷೆ ನಡೆಸಿದ್ದರು ಆದರೆ ಅವರು ಬಿಜೆಪಿಯ ಕಿರೋನ್ ಖೇರ್ ವಿರುದ್ಧ ಸೋತರು.
ಸಾಖಿ ಸಾವಂತ್
ರಾಖಿ ಸಾವಂತ್ ಅವರು 2014 ರ ಚುನಾವಣೆಯಲ್ಲಿ ರಾಷ್ಟ್ರೀಯ ಆಮ್ ಪಾರ್ಟಿ ಎಂಬ ತಮ್ಮದೇ ಹೊಸಾ ಪಾರ್ಟಿ ರಚಿಸಿ ನಾರ್ಥ ವೆಸ್ಟ್ ಮುಂಬೈ ನಲ್ಲಿ ಸ್ಪರ್ಧಿಸಿದ್ದರು ಆದ್ರೆ ಅವರು ಸೋತರು.
ಹೀಗೆ ಪ್ರಕಾಶ್ ಝಾ, ರಾಜೇಶ್ ಖನ್ನಾ, ಶತ್ರುಜ್ಞ ಸಿನ್ಹಾ, ಮಹೇಶ್ ಮಂಜ್ರೇಕರ್, ಮನೋಜ್ ತಿವಾರಿ, ರವಿ ಕಿಶಾನ್, ಪ್ರಕಾಶ್ ರಾಜ್ ಎಂಬ ಸೆಲೆಬ್ರಿಟಿಗಳು ತಮ್ಮ ರಾಜಕೀಯ ಪಯಣದ ಚೊಚ್ಚಲ ಪ್ರಯತ್ನದಲ್ಲಿ ಸೋತಿದ್ದಾರೆ.