ಚಾಮರಾಜನಗರ ಕೋವಿಡ್ ರೋಗಿಗಳ ಸಾವು, ಸರ್ಕಾರಿ‌ ಪ್ರಯೋಜಿತ ಕೊಲೆ: ನಟ ಚೇತನ್

ತಜ್ಞರು ಎಚ್ಚರಿಕೆ ನಿರ್ಲಕ್ಷಿಸಿ ಬೇಜವಾಬ್ದಾರಿಯಿಂದ ವರ್ತಿಸಿದ ಸರ್ಕಾರವೇ ಈ ದುರಂತಕ್ಕೆ ಹೊಣೆ

 | 
Chethan

ಬೆಂಗಳೂರು: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ 24 ಕೋವಿಡ್ ರೋಗಿಗಳ ಸಾವನ್ನು ಆ ದಿನಗಳು ಖ್ಯಾತಿಯ ನಟ ಮತ್ತು ತಮ್ಮ ಸಮಾಜಮುಖಿ ಕೆಲಸಗಳಿಂದ ವಿಶಿಷ್ಟವಾಗಿ ಗುರುತಿಸಿಕೊಂಡಿರುವ ನಟ ಚೇತನ್ ಅವರು ಸರ್ಕಾರಿ ಪ್ರಾಯೋಜಿತ ಕೊಲೆ ಎಂದಿದ್ದಾರೆ.

ಈ ಕುರಿತು ತಮ್ಮ ಅಧಿಕೃತ ಫೇಸ್ಬುಕ್ ಖಾತೆಯಿಂದ ಲೈವ್ ಬಂದು ಮಾತನಾಡಿದ ಅವರು ರೋಗಿಗಳ ಸಾವು ಶೋಚನೀಯ, ಇಂತಹ ಪರಿಸ್ಥಿತಿಯ ಕುರಿತು ಮೊದಲೇ ಸಾಕಷ್ಟು ತಜ್ಞರು ಎಚ್ಚರಿಕೆ ಕೊಟ್ಟಿದ್ದರೂ ನಿರ್ಲಕ್ಷಿಸಿ ಬೇಜವಾಬ್ದಾರಿಯಿಂದ ವರ್ತಿಸಿದ ಸರ್ಕಾರವೇ ಈ ದುರಂತಕ್ಕೆ ಹೊಣೆ ಎಂದರು.

ಇದೇ ಸಂದರ್ಭದಲ್ಲಿ ಕೇರಳದ ಆರೋಗ್ಯ ವ್ಯವಸ್ಥೆಯನ್ನು ಉಲ್ಲೇಖಿಸಿದ ಅವರು ಕೇರಳದಿಂದ ನಾವು ಕಲಿಯಬೇಕಾದ್ದು ಬಹಳಷ್ಟಿದೆ ಎಂದರು. ಆರೋಗ್ಯದ ಕ್ಷೇತ್ರದ ರಾಷ್ಟ್ರೀಕರಣದ ಅಗತ್ಯವಿದ್ದು ಒಕ್ಕೂಟ ಸರ್ಕಾರ ಆರೋಗ್ಯ ಕ್ಷೇತ್ರದಲ್ಲಿರುವ ಖಾಸಗಿ ಲಾಭಿಯನ್ನು ಹತ್ತಿಕ್ಕುವಲ್ಲಿ ಸೋತಿದ್ದು, ಬಂಡವಾಳಶಾಹಿಗಳ ಪರವಹಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.