ನಟ ಪನ್ನಂಬಲಂ ಗೆ ಕಿಡ್ನಿ ಸರ್ಜರಿಗೆ ನಟ ಚಿರಂಜೀವಿ ಸಹಾಯ

ಕಿಡ್ನಿ ಸರ್ಜರಿಗಾಗಿ 2 ಲಕ್ಷ ರೂಪಾಯಿಗಳ ದೇಣಿಗೆ ನೀಡಿದ ಮೆಗಾ ಸ್ಟಾರ್

 | 
Ponnambalam and Chiranjeevi

ನಟ ಪೊನ್ನಂಬಂ ಕಾಲಿವುಡ್ ಸಿನೆಮಾಗಳಲ್ಲಿ ಪ್ರಧಾನವಾಗಿ ನಟಿಸುತ್ತಿದ್ದವರು, ಅವರು ಕೆಲ ವರ್ಷಗಳಿಂದ ಕಿಡ್ನಿ ಸಂಬಂಧಿತ ಸಮಸ್ಯೆಯಿಂದ ನರಳುತ್ತಿದ್ದರು, ಈ ಹಿನ್ನೆಲೆ ವೈದ್ಯರು ಕಿಡ್ನಿ ಟ್ರಾನ್ಸ್ ಪ್ಲಾಂಟ್ ಸರ್ಜರಿ ಮಾಡಿಸಿಕೊಳ್ಳಲು ಸಲಹೆ ನೀಡಿದ್ದರು, ಪೊನ್ನಂಬಲಂ ಅವರ ಆರ್ಥಿಕ ಪರಿಸ್ಥಿತಿಯನ್ನು ತಿಳಿದ ಚಿರಂಜೀವಿ ಅವರ ಕಿಡ್ನಿ ಸರ್ಜರಿಗೆ 2 ಲಕ್ಷ ರೂಪಾಯಿಗಳನ್ನು ನೀಡಿ ಅವರ ನೆರವಿಗೆ ಧಾವಿಸಿದ್ದಾರೆ.

ಕೋವಿಡ್ ಪರಿಸ್ಥಿತಿಯಲ್ಲಿ ಚಿರಂಜೀವಿಯವರು ಹಲವಾರ ಜನರಿಗೆ ಸಹಾಯ ಮಾಡುತ್ತಿದ್ದಾರೆ. ಈಗ ಪೊನ್ನಂಬಲಂ ಅವರ ಕಿಡ್ನಿ ಸರ್ಜರಿಗೆ ಸಹಾ ಮಾಡಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಚಿರಂಜೀವಿಯರ ಸಹಾಯವನ್ನು ಪೊನ್ನಂಬಲಂ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅವರ ಸಹಾಯ ನನಗೆ ತುಂಬಾ ಅನುಕೂಲವಾಗಲಿದೆ. ಅವರ ಸಹಾಯವನ್ನು ನಾನು ಎಂದೂ ಮರೆಯುವುದಿಲ್ಲ. ದೇವರು ಅವರಿಗೆ ಒಳ್ಳೆದನ್ನು ಮಾಡಿ ಎಂದು ಹೃತ್ಪೂರ್ವಕ ವಂದನೆಗಳು ಎಂದು ತಿಳಿಸಿದ್ದಾರೆ.

ಪೊನ್ನಂಬಲಂ ಅವರು ವಿಲನ್ ಪಾತ್ರಗಳಿಗೆ ಹೆಸರವಾಸಿಯಾಗಿದ್ದಾರೆ. ಇವರು ತಮಿಳು. ತೆಲುಗು, ಮಳಯಾಳಂ, ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಆರ್ಥಿಕವಾಗಿ ದರ್ಬಲವಾಗಿರುವ ಇವರಿಗೆ ತಮಿಳು ನಟ ಕಮಲ್ ಕೂಡ ಸಹಾಯಸ್ತ ನೀಡಿದ್ದು, ಪೊನ್ನಂಬಲಂ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಕಮಲ್ ಒತ್ತುಕೊಂಡಿದ್ದಾರೆ.