ಜೀವ ರಕ್ಷಕ ಆಕ್ಸಿಜನ್ ಬ್ಯಾಂಕ್ ಪ್ರಾರಂಭಿಸಿದ ಮೆಗಾಸ್ಟಾರ್ ಚಿರಂಜೀವಿ

ಕೊರೋನಾ ರೋಗಿಗಳ ನೆರವಿಗೆ ನಿಂತ ಕಾಲಿವುಡ್ ನಟ ಮೆಗಾಸ್ಟಾರ್ ಚಿರಂಜೀವಿ

 | 
Chiranjeevi

ಈ ಹಿಂದೆ ಏಪ್ರಿಲ್ ನಲ್ಲಿ ಚಲನಚಿತ್ರ ಕಾರ್ಮಿಕರು ಮತ್ತು ತೆಲುಗು ಪತ್ರಕರ್ತರಿಗೆ ಉಚಿತ ಕೋವಿಡ್-19 ಲಸಿಕೆ ಕೊಡಿಸುವ ಘೋಷಣೆ ಮಾಡಿದ ಕಾಲಿವುಡ್ ನಟ ಮೆಗಾಸ್ಟಾರ್ ಚಿರಂಜೀವಿ ಈಗ ಆಂದ್ರಪ್ರದೇಶದಲ್ಲಿ ಆಕ್ಸಿಜನ್ ಬ್ಯಾಂಕ್ ಗಳನ್ನು ಪ್ರಾರಂಭಿಸುವ ಮೂಲಕ ಕೊರೋನಾ ರೋಗಿಗಳ ನೆರವಿಗೆ ನಿಂತಿದ್ದಾರೆ.

ಈ ಆಕ್ಸಿಜನ್ ಬ್ಯಾಂಕ್ ಗಳು ಆಂಧ್ರಪ್ರದೇಶದ ಹಲವು ಜಿಲ್ಲೆಗಳಲ್ಲಿ ನಾಳೆಯಿಂದ ಕಾರ್ಯಾರಂಭ ಮಾಡಲಿವೆ. ಚಿರಂಜೀವಿ ಚಾರಿಟಬಲ್ ಟ್ರಸ್ಟ್ ಆಕ್ಸಿಜನ್ ಸಿಲಿಂಡರ್ ಗಳ ಜೊತೆಗೆ ಆಕ್ಸಿಜನ್ ಕಾನ್ಸೆಂಟ್ರೇಟರ್ ಸೇರಿದಂತೆ ಹಲವು ವೈದ್ಯಕೀಯ ಸೌಲಭ್ಯಗಳನ್ನು ಕೋವಿಡ್ ರೊಗಿಗಳಿಗೆ ಒದಗಿಸಲಿದೆ. ಇದರ ಉಸ್ತುವಾರಿಯನ್ನು ಚಿರಂಜೀವಿಯವರ ಪುತ್ರ ನಟ ರಾಮ್ ಚರಣ್ ನೋಡಿಕೊಳ್ಳಲಿದ್ದಾರೆ.

ಕಳೆದ ವರ್ಷ ಕೋವಿಡ್ ವೇಳೆ ಹಲವಾರು ಸೇವೆಗಳನ್ನು ನೀಡಿದ್ದ ಚಿರಂಜೀವಿ, ಈ ಬಾರಿ ಆಕ್ಸಿಜನ್ ಗೆ ಬಾರಿ ಬೇಡಿಕೆ ಉಂಟಾಗಿರುವ ಹಿನ್ನೆಲೆ ಚಿರಂಜೀವಿ ಚಾರಿಟಬಲ್ ಟ್ರಸ್ಟ್ ಮೂಲಕ ಅನಂತಪುರ, ಗುಂಟೂರು, ಖಮ್ಮಾಮ್, ಕರೀಮ್ ನಗರ ಮತ್ತು ಐದು ಇತರೆ ಜಿಲ್ಲೆಗಳಲ್ಲಿ ಆಕ್ಸಿಜನ್ ಬ್ಯಾಂಕ್ ಗಳನ್ನು ತೆರೆದು ಸೇವೆ ನೀಡುತಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಮಿಷನ್ (ಗುರಿ) ಪ್ರಾರಂಭವಾಗಿದೆ ಜೀವ ಉಳಿಸುವ ಆಕ್ಸಿಜನ್ ಕೊರತೆಯಿಂದ ಸಾವುಗಳು ಸಂಭವಿಸಬಾರದು’ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಅವರು ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ.