ಜ್ವಾಲಾ, ವಿಷ್ಣು ವಿಶಾಲ್ ಮದುವೆಗೆ ಕೋವಿಡ್ ಟೆಸ್ಟ್ ಕಡ್ಡಾಯ
ಸಾಮಾಜಿಕ ಜಾಲಾತಾಣದಲ್ಲಿ ವಿಷಯ ತಿಳಿಸಿದ ಜ್ವಾಲಾ
Jun 16, 2021, 12:39 IST
| 
ಹೈದರಾಬಾದ್: ಭಾರತದ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಹಾಗೂ ತಮಿಳಿನ ನಟ ವಿಷ್ಣು ವಿಶಾಲ್ ಮದುವೆ ನಿಶ್ಚಿಯವಾಗಿದೆ. ಹಲವು ದಿನಗಳಿಂದ ಡೇಟಿಂಗ್ ನಡೆಸುತ್ತಿದ್ದ ಇಬ್ಬರು ಹಸೆಮಣೆ ಏರುತ್ತಿದ್ದು, ಇವರ ವಿವಾಹ ಏಪ್ರಿಲ್ 22ಕ್ಕೆ ನಿಗದಿಯಾಗಿದೆ,
ಮದುವೆ ತಯಾರಿ ಕಾರ್ಯದಲ್ಲಿ ಬ್ಯುಸಿಯಾಗಿರುವ ಇಬ್ಬರು, ಮದುವೆಗೆ ಆಗಮಿಸುವ ಗೆಸ್ಟ್ ಗಳಿಗೆ ವಿಶೆಷ ಸೂಚನೆಯನ್ನು ನೀಡಿದ್ದಾರೆ. ಮದುವೆಗೆ ಆಗಮಿಸುವ ಗೆಸ್ಟ್ ಗಳಿಗೆ RTPCR ಕೋವಿಡ್ ಪರೀಕ್ಷೆ ಕಡ್ಡಾಯ ಎಂದು ಹೇಳಿದ್ದಾರೆ. ಮದುವೆಯ ಆಮಂತ್ರಣ ಪತ್ರವನ್ನು ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಂಡಿರುವ ಜ್ವಾಲಾ ಗುಟ್ಟಾ ಈ ಬಗ್ಗೆ ತಿಳಿಸಿದ್ದಾರೆ.
ಇವರ ನಿಶ್ಚಿತಾರ್ಥ 2020ರ ಸೆಪ್ಟೆಂಬರ್ ನಲ್ಲಿ ನಡೆದಿತ್ತು.