ರೊಮ್ಯಾಂಟಿಕ್ ಸ್ಟೋರಿ ಮೂಲಕ ತೆರೆ ಮೇಲೆ ಡಾರ್ಲಿಂಗ್ ಕೃಷ್ಣ, ಡಿಂಪಲ್ ಕ್ವೀನ್ ರಚಿತಾ

ತೆರೆ ಮೇಲೆ ‘ಲವ್‌ ಮೀ or ಹೇಟ್ ಮೀ’ ಎನ್ನಲಿದ್ದಾರೆ ಡಿಂಪಲ್ ಕ್ವೀನ್ ಮತ್ತು ಡಾರ್ಲಿಂಗ್ ಕೃಷ್ಣ

 | 
rachita ram and darling krishna

ಬೆಂಗಳೂರು: ಲವ್ ಮಾಕ್ಟೇಲ್ ಚಿತ್ರದ ಯಶಸ್ಸಿನ ನಟ, ನಿರ್ದೇಶಕ ಡಾರ್ಲಿಂಗ್ ಕೃಷ್ಣ ಮತ್ತು ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಒಟ್ಟಿಗೆ ಚಲನಚಿತ್ರದಲ್ಲಿ ನಟಿಸಲಿದ್ದಾರೆ.

ಈ ವಿಚಾರವನ್ನು ನಟ ಡಾರ್ಲಿಂಗ್ ಕೃಷ್ಣ ಹಾಗೂ ರಚಿತಾ ರಾಮ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರಕ್ಕೆ 'ಲವ್‌ ಮೀ or ಹೇಟ್ ಮೀ' ಎಂಬ ಟೈಟಲ್ ಇಡಲಾಗಿದೆ. ಟೈಟಲ್ ನ ಪೋಸ್ಟರ್ ಅನ್ನು ರಚಿತಾ ರಾಮ್ ಹಂಚಿಕೊಂಡಿದ್ದಾರೆ.

ಈ ಟೈಟಲ್ ನೋಡಿದರೆ ರೊಮ್ಯಾಂಟಿಕ್ ಲವ್ ಸ್ಟೋರಿಯ ಚಿತ್ರವೆಂದು ತಿಳಿಯಬಹುದಾಗಿದ್ದು, ಈ ಚಿತ್ರವನ್ನು ದೀಪಕ್ ಗಂಗಾಧರ್ ಎಂಬುವವರು ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ಸಿನಿಮಾ ವಿತರಣೆ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ದೀಪಕ್ ಗಂಗಾಧರ್ ಇದೇ ಮೊದಲ ಬಾರಿಗೆ ನಿರ್ದೇಶನದ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಈ ಚಿತ್ರವನ್ನು ಮದನ್ ಗಂಗಾಧರ್ ಮತ್ತು ನಂದೀಶ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಏಪ್ರಿಲ್ ತಿಂಗಳಲ್ಲೇ ಆರಂಭವಾಗಬೇಕಿತ್ತು. ಕೊರೋನಾ ಹಿನ್ನೆಲೆ ಮುಂದೂಡಲಾಗಿದೆ. ಈ ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಲಿದ್ದು, ಸಾಧುಕೋಕಿಲ, ಚಿಕ್ಕಣ್ಣ ಅವರು ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.