ಬಿಗ್ ಬಾಸ್ ಮನೆಯಲ್ಲಿ ಚಂದ್ರಚೂಡ್ ಬಿಚ್ಚಿಟ್ಟರು ಭಯಾನಕ ಘಟನೆ

ಥ್ರಿಲಿಂಗ್ ಘಟನೆ ಕೇಳಿದ ಬಿಗ್ ಬಾಸ್ ಸ್ಪರ್ಧಿಗಳು ಶಾಕ್

 | 
ಬಿಗ್ ಬಾಸ್ ಮನೆಯಲ್ಲಿ ಚಂದ್ರಚೂಡ್ ಬಿಚ್ಚಿಟ್ಟರು ಭಯಾನಕ ಘಟನೆ

ಬಿಗ್ ಬಾಸ್ ಮನೆ ಹೊಕ್ಕಿರುವ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಅವರು ತಮ್ಮ ಜೀವನದಲ್ಲಿ ಸಾಕಷ್ಟು ನೋವುಗಳನ್ನು ಎದುರಿಸಿ ಬೆಳೆದವರು, ಅವರು ಅನುಭವಿಸಿದ ಸಂಕಷ್ಟಗಳನ್ನು ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟ ಬಾರಿ ಹೇಳಿಕೊಂಡಿದ್ದಾರೆ. ಈಗ ತಮ್ಮ ಜೀವನದದಲ್ಲಿ ನಡೆದ ಭಯಾನಕ ಘಟನೆಯೊಂದರ ಬಗ್ಗೆ ಬಿಗ್​ ಬಾಸ್​ ಮನೆಯಲ್ಲಿ ಹೇಳಿಕೊಂಡಿದ್ದಾರೆ. ಅವರ ಜೀವನದಲ್ಲಿ ನಡೆದ ಈ ಘಟನೆ ಕೇಳಿ ಎಲ್ಲರೂ ಶಾಕ್​ ಆಗಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​ನಲ್ಲಿ ಎಲ್ಲಾ ಸ್ಪರ್ಧಿಗಳು ತಮ್ಮ ಜೀವನದಲ್ಲಿ ನಡೆದಿರುವ ಕಹಿ ಘಟನೆಗಳ ಬಗ್ಗೆ ಹೇಳಬೇಕಿತ್ತು. ಈ ಸಂದರ್ಭ ಮನಬಿಚ್ಚಿ ಮಾತನಾಡಿರುವ ಚಕ್ರವರ್ತಿ ತಮ್ಮ ಜೀವದಲ್ಲಿ ನಡೆದ ಭಯಾನಕ ಘಟನೆಯಿಂದ ಪಾರಾಗಿ ಬಂದ ಸನ್ನಿವೇಶವನ್ನು ಹೇಳಿದರು.

ನಾನು ಚೆನ್ನೈ ರೈಲ್ವೆ ನಿಲ್ದಾಣದಲ್ಲಿ ಮೂರು ದಿನಗಳ ಕಾಲ ಹಸಿದುಕೊಂಡಿದ್ದೆ. ಮನೆ ಸಂಪರ್ಕ ಕಡಿತವಾಗಿತ್ತು. ಆಗ ನನಗೆ ಓರ್ವನ ಪರಿಚಯವಾಯ್ತು. ಅವನು ನನ್ನನ್ನು ವೇಶ್ಯರ ಮನೆಗೆ ಕೆಲಸಕ್ಕೆ ಕರೆದುಕೊಂಡು ಹೋಗಿಬಿಟ್ಟ. ಅಲ್ಲಿ 127 ಜನರಿದ್ರು. ಇದೇ ವೇಳೆ 14 ವರ್ಷದ ಹುಡುಗಿಯನ್ನು ಅವಳ ಚಿಕ್ಕಪ್ಪ ಮಾರಿ ಹೋಗಿದ್ದ. ನನಗೂ ಅವಳಿಗೂ ಪರಿಚಯವಾಯ್ತು.

ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗುವಂತೆ ಬಾಲಕಿ ನನ್ನ ಬಳಿ ಅಂಗಲಾಚಿದಳು. ವೇಸ್ಟ್​ ತುಂಬಿಸಿಕೊಂಡು ಹೋಗುವ ಗಾಡಿಯಲ್ಲಿ ಇಬ್ಬರೂ ಹೊರಟು ರೈಲ್ವೆ ನಿಲ್ದಾಣಕ್ಕೆ ತಲುಪಿದೆವು. ದುಡ್ಡು ಕೂಡ ಇರಲಿಲ್ಲ. ಬೆಂಗಳೂರಿಗೆ ಹೋಗುವ ರೈಲು ಏರಿದೆವು ಆದರೆ ಬಂಗಾರಪೇಟೆ ಬಳಿ ನಮ್ಮನ್ನು ಹಿಡಿದರು, ಇಬ್ಬರಿಗೂ ಸರಿಯಾಗಿ ಹೊಡೆದರು ಅವಳು ಸತ್ತಳು ನಾನು ಬದುಕಿದೆ ಎಂದು ಚಕ್ರವರ್ತಿ ಭಯಾನಕ ಘಟನೆ ಬಿಚ್ಚಿಟ್ಟರು.

ಓರ್ವ ಪೊಲೀಸ್ ಕಾನ್ಸ್​ಟೇಬಲ್​ ನನ್ನನ್ನು ಬದುಕಿಸಿದರು, ಅಲ್ಲಿಂದ ಬಂದು ನಾನು ನೇರವಾಗಿ ಹಿಮಾಲಯಕ್ಕೆ ಹೋದೆ. ಎರಡು ವರ್ಷ ಅಲ್ಲಿದ್ದೆ. ನಂತರ ಬೆಂಗಳೂರಿಗೆ ಬಂದು ಪತ್ರಕರ್ತ, ಹೋರಾಟಗಾರನಾಗಿ ರೂಪುಗೊಂಡೆ. ವೇಶ್ಯೆಯರಿಗಾಗಿ ಏನಾದರೂ ಮಾಡಬೇಕೆಂದು ತಿಳಿದು 25 ವೇಶ್ಯಯರನ್ನು ಸೇರಿಸಿ ರವೀಂದ್ರ ಕಲಾಕ್ಷೆತ್ರದಲ್ಲಿ ನಾಟಕವಾಡಿಸಿದೆ ಎಂದು ತಮ್ಮ ಜೀವನದಲ್ಲಿ ನಡೆದ ಘಟನೆ ಬಗ್ಗೆ ಚಕ್ರವರ್ತಿ ಹೇಳಿಕೊಂಡಿದ್ದಾರೆ.