FilM Review : ಸಲಗ - ನಡೆದದ್ದು (ಅದೇ ಹಳೇ) ದಾರಿ
 

"ಸಲಗ"ನ್ನು,ಮಚ್ಚು, ಲಾಂಗು ಹಿಡಿದು ಬಂದಿರೋ, ಸಿನಿಮಾಗಳ ಪಟ್ಟಿಗೆ ಹೊಸ ಸೇರ್ಪಡೆಯಾಗಿ "ಸಲಗ" ಬಂದಿದೆ. ಜನ ಚೇಂಜ್ ಕೇಳ್ತಾ ಇದ್ದಾರೆ ಅಂತ ಗೊತ್ತಾಗಿ ಫರ್ಸ್ಟ್ ಟೈಮ್ ಡೈರೆಕ್ಟರ್ ಆದ ವಿಜಯ್ ಕುಮಾರ್ 'ದುನಿಯಾ' ದಿಂದ "ಡಿಟ್ಯಾಚ್" ಆಗಿ,  ರೌಡಿಸಂ ಕತೆಗೆ, "ಅಟ್ಯಾಕ್" ಮಾಡೋ ಸೇಡಿನ ಕತೆಯನ್ನು 'ನಿಂಬೆ' ಗಿಡಕ್ಕೆ, 'ಮೆಣಸಿನಕಾಯಿ' ಗಿಡವನ್ನು ಕಸಿ ಮಾಡಿದಂತೆ "ಅಟ್ಯಾಚ್" ಮಾಡಿದ್ದಾರೆ.
 | 
salaga
ರೇಟಿಂಗ್ : ***

ರೌಡಿಸಂ ಕತೆ ಅಂದ್ರೆ ಸ್ಯಾಂಡಲ್'ವುಡ್ ಮಂದಿಗೆ ಒಂತರಾ ಬಗೆದಷ್ಟೂ ತೆಗೆಯಲು ಸಿಗುವ ಕಲ್ಲಿದ್ದಲು ಗಣಿ ಇದ್ದ ಹಾಗೆ. ಎಂಭತ್ತರ ದಶಕದಲ್ಲಿ ಅಪ್ಪ-ಅಮ್ಮನ ಸಾವಿಗೆ ಕಾರಣರಾದವರ ಮೇಲೆ ನಾಯಕ ಸೇಡು ತೀರಿಸಿಕೊಳ್ಳೋ ಕತೆಯಿರೋ ಸಿನಿಮಾಗಳು ಬಂದರೆ, ತೊಂಭತ್ತರ ಮಧ್ಯ ಭಾಗದಿಂದ ರೌಡಿಸಂ, ಗ್ಯಾಂಗ್'ಸ್ಟರ್ಸ್' ಕತೆಗಳಿಗೆ  'ಸ್ಟಾರ್ಸ್'ಗಳು "ಓಂ"ಕಾರ ಹಾಕಿದ ಮೇಲೆ, ಕರಿಯ, ದುನಿಯ, ಜೋಗಿ, ಸಂತು, ಡೆಡ್ಲಿ ಸೋಮ, ಗೂಳಿ, ಬೆಳ್ಳಿಯಿಂದ ಉಗ್ರಂ, ಗಣಪ, ಟಗರು, ಕೆಜಿಎಫ್ ವರೆಗೆ ವರ್ಷಾನುವರ್ಷಗಳೂ ಸಿನಿ ಮಂದಿಯ ಆಯುಧ ಪೂಜೆ ನಡೆಯುತ್ತಲೇ ಇವೆ. 

ಈ ವರ್ಷವೂ 'ಆಯುಧ ಪೂಜೆ'ಯ ಸಮಯದಲ್ಲೇ, ಈಗಾಗಲೇ ಹಲವಾರು "ಸಲಗ"ನ್ನು,ಮಚ್ಚು, ಲಾಂಗು ಹಿಡಿದು ಬಂದಿರೋ, ಸಿನಿಮಾಗಳ ಪಟ್ಟಿಗೆ ಹೊಸ ಸೇರ್ಪಡೆಯಾಗಿ "ಸಲಗ" ಬಂದಿದೆ. ಜನ ಚೇಂಜ್ ಕೇಳ್ತಾ ಇದ್ದಾರೆ ಅಂತ ಗೊತ್ತಾಗಿ ಫರ್ಸ್ಟ್ ಟೈಮ್ ಡೈರೆಕ್ಟರ್ ಆದ ವಿಜಯ್ ಕುಮಾರ್ 'ದುನಿಯಾ' ದಿಂದ "ಡಿಟ್ಯಾಚ್" ಆಗಿ,  ರೌಡಿಸಂ ಕತೆಗೆ, "ಅಟ್ಯಾಕ್" ಮಾಡೋ ಸೇಡಿನ ಕತೆಯನ್ನು 'ನಿಂಬೆ' ಗಿಡಕ್ಕೆ, 'ಮೆಣಸಿನಕಾಯಿ' ಗಿಡವನ್ನು ಕಸಿ ಮಾಡಿದಂತೆ "ಅಟ್ಯಾಚ್" ಮಾಡಿದ್ದಾರೆ. ಅಲ್ಲಿಗೆ ಜಾಸ್ತಿ ರಿಸ್ಕ್ ತೆಗೆದುಕೊಳ್ಳದೆ, ತಮ್ಮ‌ ಇಮೇಜ್, ನಿರ್ದೇಶನದ ಜವಾಬ್ದಾರಿ, ನಿರ್ಮಾಪಕರ ದುಡ್ಡು  ಮೂರನ್ನೂ "ಸೇಫ್" ಆಗಿಸುವ ಪ್ರಯತ್ನ ಮಾಡಿದ್ದಾರೆ.

ಎರಡು ಗ್ಯಾಂಗ್'ಗಳ ನಡುವೆ ನಡೆಯುವ ಗಲಾಟೇಲಿ  T20 ಮ್ಯಾಚ್ ನಲ್ಲಿ ವಿಕೆಟ್ ಗಳು ಬಿದ್ದ ಹಾಗೆ ಹೆಣಗಳು ಬೀಳ್ತಾ ಇರ್ತವೆ‌. ಯಾರು ಯಾರನ್ನು ಯಾಕೆ ಹೊಡೀತಿದಾರೆ ಅಂತ ಕನ್ಫ್ಯೂಸ್ ಆಗೋ ಲೆವೆಲ್ ಗೆ ಸ್ಟ್ರೈಟ್ ಡ್ರೈವ್, ಸ್ವೀಪ್ ಶಾಟ್ ಗಳಿಂದ ಒಬ್ಬೊಬ್ಬರನ್ನೇ ಗ್ರೌಂಡಿನಾಚೆ ಹಾರಿ ಹೋಗೋ ಬಾಲ್ ತರ ಬಾರಿಸ್ತಿದ್ದರೆ, ಒಬ್ಬನಂತೂ "ದಿಸ್ ಈಸ್ ಟೂ ಮಚ್" ಅನ್ನೋ ಲೆವೆಲ್ ಗೆ ರಿವರ್ಸ್ ಸ್ವೀಪ್ ಮಾಡಿ "ಮಚ್ಚಿ"ನಿಂದಲೇ, ಹಿಂದೆ ಇದ್ದವನ ಬಾಯಿ "ಮುಚ್ಚಿ"ಸಿ, ಜೈಲಲ್ಲಿರುವ ಸಲಗನೇ "ಮೆಚ್ಚಿ" ಅಹುದಹುದೆನಿಸುವ ಲೆವೆಲ್ ಗೆ ತನ್ನ ಪೌರುಷ ತೋರಿಸ್ತಾನೆ. 

ಓ... ಇದು "ಅಂಡರ್ ವರ್ಲ್ಡ್" ನವ್ರ ಮಾಮೂಲು ಗಲಾಟೆ ಮಾರ್ರೆ ಅಂದ್ಕೊಳ್ಳೋ ಟೈಮಲ್ಲಿ , "ಅಂಡರ್ ಕರೆಂಟ್" ನಲ್ಲಿ ಓಡ್ತಾ ಇರೋ ಮ್ಯಾಟರ್ರೇ ಬೇರೆ ಅನ್ನೋ "ಸತ್ಯ" ಏಸಿಪಿಗೆ ಸಲಗ ಹೇಳೋ ಕತೆ ಮೂಲಕ ಮಹಾಜನಗಳಿಗೂ ತಿಳಿಯುತ್ತದೆ.  "ಸುಳ್ಳು" ಕೇಸಿನಲ್ಲಿ ಸಿಕ್ಕಿ ಹಾಕಿಸಿದ ಇನ್ಸ್'ಪೆಕ್ಟರ್ ಮತ್ತು "ಸುಳ್ಳು" ಸಾಕ್ಷಿ ಹೇಳಿ ಅಪ್ಪ ಅಮ್ಮನ ಸಾವಿಗೆ ಕಾರಣರಾದವರ ಮೇಲೆ ಸೇಡು ತೀರಿಸಿಕೊಳ್ಳುವ ಸಲಗ "ಸರೆಂಡರ್" ಆದರೆ, "ಯೂ ಆರ್ ಅಂಡರ್ ಅರೆಸ್ಟ್" ಎಂದ ಏಸಿಪಿ ಅವನನ್ನು ಬದಲಾಯಿಸಿ ಒಳ್ಳೆಯವನನ್ನಾಗಿಸಲು ಅವಕಾಶ ನೀಡುವಲ್ಲಿಗೆ ಕತೆ ಖತಂ.

ಮಾಮೂಲು ಕತೆಗೆ ಸುಣ್ಣ ಬಣ್ಣ ಬಳಿದು ಹೊಸದಾಗಿಸುವ ಪ್ರಯತ್ನ ಮಾಡಿದ್ದಾರೆ. ಮನೆ ಹಳೆಯದಾದರೂ "ಸೂರಿ"ಗೆ ಹೊಸ ಶೀಟ್ ಹಾಕಿದ್ದಾರೆ. ನೋಡುವ ಸಮಸ್ತ ಆಸ್ತಿಕರಿಗೆ ಇಷ್ಟವಾಗದೇ ಇದ್ದರೂ, "ಮಾಸ್ತಿಕ"ರಿಗೆ ಹಿಡಿಸುವ, ಮಚ್ಚಿನಷ್ಟೇ ಹರಿತವಾದ, "ಫಿಲ್ಟರ್ ಇಲ್ಲದ", ಕಡು, ಕಾಫಿಯಷ್ಟೇ "ಸ್ಟ್ರಾಂಗ್" ಆಗಿರೋ ಸಂಭಾಷಣೆ ಇದೆ. ಚಕಚಕನೆ ಓಡಾಡುವ ದೃಶ್ಯಗಳು ಪ್ರೇಕ್ಷಕನಿಗೆ ಯೋಚಿಸಲೂ‌ ಸಮಯ ಸಿಗದಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಚರಣ್ ರಾಜ್ ತಮ್ಮ ಹಿನ್ನೆಲೆ ಸಂಗೀತದಿಂದ ಚಿತ್ರವನ್ನು ಮುನ್ನೆಲೆಗೆ ತಂದು ನಿಲ್ಲಿಸಿದ್ದಾರೆ. 

ಕ್ಯಾಪ್ಟನ್ ಆಗಿದ್ರೂ ಟೀಮಲ್ಲಿರೋ ಹುಡುಗರಿಗೆಲ್ಲಾ ಟಾಪ್ ಆರ್ಡರಲ್ಲಿ  ಬ್ಯಾಟ್ ಮಾಡೋಕೆ ಬಿಟ್ಟು, ತಾನು ಮಾತ್ರ ಸಿಕ್ಸ್ ಡೌನ್, ಸೆವೆನ್ ಡೌನ್ ಬ್ಯಾಟ್ಸ್ ಮನ್ ಆಗಿ ಬಂದು ಕೊನೆಗೊಂದು ಫೋರು, ಸಿಕ್ಸು ಹೊಡೆದು ಟೀಮನ್ನು ದಡ ಸೇರಿಸಿ ಕ್ರೆಡಿಟ್ ತೆಗೊಳ್ಳೋ ಧೋನಿಯಂತೆ, ವಿಜಯ್ ಬೇರೆ ಪಾತ್ರಗಳ ಬಾಯಿ ಮಾತಿನ ಮೂಲಕವೇ ಸಿನಿಮಾದುದ್ದಕ್ಕೂ "ಇನ್'ವಿಸಿಬಲ್" ಆಗಿಯೂ "ಇನ್'ವಿನ್ಸಿಬಲ್" ಇಮೇಜ್ ಬಿಲ್ಡಪ್ ಮಾಡಿ ತಮ್ಮನ್ನು ಕೆಲ ದೃಶ್ಯಗಳಿಗಷ್ಟೇ ಸೀಮಿತಗೊಳಿಸಿ ಮಿಕ್ಕ ಪಾತ್ರಗಳನ್ನು ವಿಜೃಂಭಿಸಲು ಬಿಟ್ಟಿದ್ದಾರೆ. ಹಾಗಾಗಿ ಏಸಿಪಿ ಸಾಮ್ರಾಟ್, ಸಾವಿತ್ರಿ, ಕೆಂಡ, ಶೆಟ್ಟಿ ಪಾತ್ರಗಳಿಂದ ಹಿಡಿದು, ಐ ಲವ್ ಯೂ ಸಾರ್ ಅನ್ನುವ ಕಸಗುಡಿಸುವಾಕೆಯ ಪಾತ್ರವೂ ನೆನಪಲ್ಲುಳಿಯುತ್ತದೆ. ಧನಂಜಯ್ ಸಂಭಾಷಣಾ ಶೈಲಿ ಗಮನಸೆಳೆಯುತ್ತದೆ. ಹೊಸ ರುಚಿ  ಬಯಸುವ ಪ್ರೇಕ್ಷಕನಿಗೆ ಇಲ್ಲಿ ಸ್ಪೆಶಲ್ ಐಟಮ್ ಅಂತ ಏನೂ ಇಲ್ಲ. ಉಳಿದವರು ಅಲ್ಲಲ್ಲಿ ಕಣ್ಣು, ಕಿವಿ ಮುಚ್ಕೊಂಡ್ರೆ ಒಂದು "ಸಲ ಗ"ಮನಹರಿಸಿ