ದರ್ಶನ್ ಕರೆಗೆ ಜೈ ಎಂದ ದಚ್ಚು ಫ್ಯಾನ್ಸ್ ಮತ್ತು ಪ್ರಾಣಿ ಪ್ರಿಯರು

ಮೃಗಾಲಯಗಳ ಪ್ರಣಿಗಳನ್ನು ದತ್ತು ಪಡೆದು ಮಾನವೀಯತೆ ಮೆರೆದರು

 | 
darshan

ಬೆಂಗಳೂರು: ಕೋವಿಡ್ ನಿಂದ ಮೃಗಾಲಯಗಳಲ್ಲಿರುವ ಪ್ರಾಣಿಗಳು ಸಂಕಷ್ಟಕ್ಕೆ ಸಿಲುಕಿವೆ, ಈ ಹಿನ್ನೆಲೆ ರಾಜ್ಯ ಮೃಗಾಲಯಗಳ ಪ್ರಾಣಿ ಪಕ್ಷಿಗಳನ್ನು ದತ್ತು ಪಡೆಯುವಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಡಿದ್ದ ಮನವಿಗೆ ದಚ್ಚು ಅಬಿಮಾನಿಗಳು ಸೇರಿದಂತೆ ಹಲವರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ.

ರಾಜ್ಯದ ಮೈಸೂರು ಚಾಮರಾಜೇಂದ್ರ ಮೃಗಾಲಯ, ಬನ್ನೇರುಘಟ್ಟ ಮೃಗಾಲಯ, ಗದಗ ಮೃಗಾಲಯ, ಶಿವಮೊಗ್ಗ ಮೃಗಾಲಯ ಸೇರಿದಂತೆ ನಾನಾ ಭಾಗಗಳಲ್ಲಿರುವ ಮೃಗಾಲಯಗಳ ಪ್ರಾಣಿ ಪಕ್ಷಿಗಳನ್ನು ದರ್ಶನ್ ಅಭಿಮಾನಿಗಳು ಮತ್ತು ಪ್ರಾಣಿ ಪ್ರಿಯರು ದತ್ತು ಪಡೆದಿದ್ದಾರೆ.

ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ದರ್ಶನ್ ಎಂಬ ಹೆಸರಿನ ಸಿಂಹವನ್ನು ಯಜಮಾನ ಚಿತ್ರದ ನಿರ್ಮಾಪಕಿ ಶೈಲಜಾ ನಾಗ್ ಅವರು ದತ್ತು ಪಡೆದಿದ್ದಾರೆ. ಹಾಗೆ ದತ್ತು ಪಡೆದ ಪ್ರಾಣಿ ಪ್ರಿಯರ ಮತ್ತು ಅಭಿಮಾನಿಗಳು ಮಾಹಿತಿ ಪಡೆದ ದರ್ಶನ್ ದತ್ತು ಪಡೆದಿರುವ ಪತ್ರಗಳನ್ನು ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ ದತ್ತು ಪಡೆದವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.