ಮತ್ತೆ ತೆರೆ ಮೇಲೆ ಬರಲಿದೆ ಕ್ರಿಶ್ ಸರಣಿಯ ನಾಲ್ಕನೇ ಚಿತ್ರ
Krrish-4 ಬಗ್ಗೆ ಸುಳಿವು ನೀಡಿದ ನಟ ಹೃತಿಕ್ ರೋಷನ್
Jun 24, 2021, 15:31 IST
| 
ಬಾಲಿವುಡ್ ನ ಸೂಪರ್ ಡೂಪರ್ ಚಿತ್ರ ಕ್ರಿಶ್ ಗೆ 15 ವರ್ಷ ತುಂಬಿದ ಬೆನ್ನಲ್ಲೆ ಕ್ರಿಶ್ ಸರಣಿಯ ನಟ ಹೃತಿಕ ರೋಷನ್ ಕ್ರಿಶ್ 4 ನಿನೆಮಾ ತೆರೆ ಮೆಲೆ ಬರುವುದಾಗಿ ಘೋಷಿಸಿದ್ದಾರೆ.
ಈಗಾಗಲೇ ಕ್ರಿಶ್ ಸರಣಿಯ ಮೂರು ಚಿತ್ರಗಳು ಪ್ರೇಕ್ಷಕರನ್ನು ರಂಜಿಸಿದ್ದು, ಈಗ ಅದೇ ಸರಣಿಯ ನಾಲ್ಕೆನೇ ಚಿತ್ರವು ತೆರೆ ಮೂಲೆ ಬರಲಿದೆ. ಈ ಬಗ್ಗ್ಗೆ ಸ್ವತಃ ಹೃತಿಕ್ ರೋಷನ್ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡುವ ಮೂಲಕ ಸುಳಿವು ನೀಡಿದ್ದಾರೆ.
The past is done .
— Hrithik Roshan (@iHrithik) June 23, 2021
Let’s see what the future brings. #15YearsOfKrrish #Krrish4 pic.twitter.com/xbp5QzwObF
ಈ ಸಿನೆಮಾದಲ್ಲಿಯೂ ಸೂಪರ್ ಹೀರೋ ಆಗಿ ಹೃತಿಕ್ ರೋಷನ್ ಮತ್ತೊಮ್ಮೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಇನ್ನುಳಿದ ಮಾಹಿತಿಗಳನ್ನು ಚಿತ್ರತಂಡ ಹಂಚಿಕೊಳ್ಳಬೇಕಿದೆ.