ನಿರ್ದೇಶನಕ್ಕಿಳಿದ ಇಳಯದಳಪತಿ ವಿಜಯ್ ಪುತ್ರ.. ಜೇಸನ್ ಸಂಜಯ್ ವಿಜಯ್ ಚೊಚ್ಚಲ ಸಿನಿಮಾಗೆ ಲೈಕಾ ಬಂಡವಾಳ

ಜೇಸನ್ ಸಂಜಯ್ ವಿಜಯ್ ಜೊತೆ ಕೈ ಜೋಡಿಸಿರುವ ಸುಭಾಸ್ ಕರಣ್ ಮಾತನಾಡಿ, ಲೈಕಾ ಪ್ರೊಡಕ್ಷನ್ ಹೌಸ್ ಸದಾ ಯುವ ಪ್ರತಿಭೆಗಳಿಗೆ ವೇದಿಕೆ ನಿರ್ಮಾಣ ಮಾಡಿಕೊಡ್ತಿದೆ. ನಮ್ಮ ಮುಂದಿನ ಪ್ರಾಜೆಕ್ಟ್ ಜೇಸನ್ ಸಂಜಯ್ ವಿಜಯ್ ಅನ್ನೋದನ್ನು ಘೋಷಿಸಲು ಖುಷಿಯಾಗುತ್ತಿದೆ. ಜೇಸನ್ ಲಂಡನ್‌ನಲ್ಲಿ ಬಿಎ ಚಿತ್ರಕಥೆಯಲ್ಲಿ ಪರಿಪೂರ್ಣ ಶೈಕ್ಷಣಿಕ ಹಿನ್ನೆಲೆಯನ್ನು ಹೊಂದಿದ್ದಾರೆ ನಂತರ ಟೊರೊಂಟೊ ಫಿಲ್ಮ್ ಸ್ಕೂಲ್‌ನಲ್ಲಿ ಫಿಲ್ಮ್ ಪ್ರೊಡಕ್ಷನ್ ಡಿಪ್ಲೊಮಾವನ್ನು ಹೊಂದಿದ್ದಾರೆ
 | 
movies

ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ ಕನ್ನಡಕ್ಕೂ ಪದಾರ್ಪಣೆ ಮಾಡಿದೆ. ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾವನ್ನು ನಿರ್ಮಿಸ್ತಿರುವ ಈ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಇದೀಗ ಮತ್ತೊಂದು ಮೆಗಾ ಅನೌನ್ಸ್ ಮೆಂಟ್ ಮಾಡಿದೆ. ತಮಿಳು ಚಿತ್ರರಂಗದ ಖ್ಯಾತ ನಟ ಇಳಯದಳಪತಿ ವಿಜಯ್ ಸುಪುತ್ರ ನಿರ್ದೇಶನದ ಚೊಚ್ಚಲ ಸಿನಿಮಾಗೆ ಲೈಕಾ ಹಣ ಹಾಕುತ್ತಿದೆ. ಸ್ಟಾರ್ ಸಿನಿಮಾ ಮೇಕರ್ಸ್ ಜೊತೆಗೆ ಯುವ ಪ್ರತಿಭೆಗಳಿಗೂ ವೇದಿಕೆ ಕಲ್ಪಿಸುತ್ತಿರುವ ಲೈಕಾ ಸೃರ್ಷಿಕರ್ತ ಸುಭಾಷ್ ಕರಣ್ ಈಗ ವಿಜಯ್ ಪುತ್ರ ಜೇಸನ್ ಸಂಜಯ್ ವಿಜಯ್ ಗೂ ಹೊಸ ಹೆಜ್ಜೆಗೆ ಸಾಥ್ ಕೊಟ್ಟಿದ್ದಾರೆ.

ಜೇಸನ್ ಸಂಜಯ್ ವಿಜಯ್ ಜೊತೆ ಕೈ ಜೋಡಿಸಿರುವ ಸುಭಾಸ್ ಕರಣ್ ಮಾತನಾಡಿ, ಲೈಕಾ ಪ್ರೊಡಕ್ಷನ್ ಹೌಸ್ ಸದಾ ಯುವ ಪ್ರತಿಭೆಗಳಿಗೆ ವೇದಿಕೆ ನಿರ್ಮಾಣ ಮಾಡಿಕೊಡ್ತಿದೆ. ನಮ್ಮ ಮುಂದಿನ ಪ್ರಾಜೆಕ್ಟ್ ಜೇಸನ್ ಸಂಜಯ್ ವಿಜಯ್ ಅನ್ನೋದನ್ನು ಘೋಷಿಸಲು ಖುಷಿಯಾಗುತ್ತಿದೆ. ಜೇಸನ್ ಲಂಡನ್‌ನಲ್ಲಿ ಬಿಎ ಚಿತ್ರಕಥೆಯಲ್ಲಿ ಪರಿಪೂರ್ಣ ಶೈಕ್ಷಣಿಕ ಹಿನ್ನೆಲೆಯನ್ನು ಹೊಂದಿದ್ದಾರೆ ನಂತರ ಟೊರೊಂಟೊ ಫಿಲ್ಮ್ ಸ್ಕೂಲ್‌ನಲ್ಲಿ ಫಿಲ್ಮ್ ಪ್ರೊಡಕ್ಷನ್ ಡಿಪ್ಲೊಮಾವನ್ನು ಹೊಂದಿದ್ದಾರೆ. ಅವರು ಸ್ಕ್ರಿಪ್ಟ್ ಅನ್ನು ವಿವರಿಸಿದಾಗ, ಅದು ನಮಗೆ ಸಿನಿಮೀಯ ಅನುಭವವನ್ನು ನೀಡಿದ್ದರಿಂದ ನಾವು ಚಿತ್ರ ನಿರ್ಮಾಣ ಮಾಡಲು ಮುಂದೆ ಬಂದೆವು. ಅವರು ಚಿತ್ರಕಥೆ ಮತ್ತು ನಿರ್ದೇಶನದಲ್ಲಿ ಪರಿಣತಿ ಹೊಂದಿದ್ದಾರೆ. ಜೇಸನ್ ಸಂಜಯ್ ವಿಜಯ್ ಅವರೊಂದಿಗೆ ಕೆಲಸ ಮಾಡುವ ಅದ್ಭುತ ಅನುಭವಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ. ಉದಯೋನ್ಮುಖ ತಾರೆಗಳು ಚಿತ್ರದಲ್ಲಿ ನಟಿಸಲಿದ್ದಾರೆ ಎಂದರು.

ನಿರ್ದೇಶಕ ಜೇಸನ್ ಸಂಜಯ್ ವಿಜಯ್ ಮಾತನಾಡಿ, "ಲೈಕಾ ಪ್ರೊಡಕ್ಷನ್ಸ್‌ನಂತಹ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಡಿ ನನ್ನ ಮೊದಲ ಚಿತ್ರವನ್ನು ನಿರ್ದೇಶಿಸುವ ಅವಕಾಶ ಸಿಕ್ಕಿರುವುದು ಗೌರವದ ಸಂಗತಿಯಾಗಿದೆ. ಇದು ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೇಂದ್ರವಾಗಿದೆ. ಈ ಅವಕಾಶಕ್ಕಾಗಿ ನಾನು ಸುಭಾಸ್ಕರನ್ ಸರ್ ಅವರಿಗೆ ಧನ್ಯವಾದ ಹೇಳುತ್ತೇನೆ. ನಾನು ನಿರ್ದೇಶಕನಾಗುವ ನನ್ನ ಕನಸುಗಳನ್ನು ಈಡೇರಿಸಲು ಉತ್ತಮ ಬೆಂಬಲವನ್ನು ನೀಡಿದ ತಮಿಳು ಕುಮಾರನ್ ಅವರಿಗೆ ಧನ್ಯವಾದ. ನಾನು ಈ ಅವಕಾಶವನ್ನು ಬಳಸಿಕೊಳ್ಳುತ್ತೇನೆ ಎಂದರು.