ತೆಲುಗು ನಟ ಕಲ್ಯಾಣ್ ರಾಮ್ ‘ಬಿಂಬಿಸರ’ ಚಿತ್ರದ ಫಸ್ಟ್ ಲುಕ್ ರಿವೀಲ್

ರಾಜನಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿರುವ ನಂದಮುರಿ ಕಲ್ಯಾಣ್ ರಾಮ್

 | 
Bimbisara First look

ತೆಲುಗು ನಟ ನಂದಮುರಿ ಕಲ್ಯಾಣ್ ರಾಮ್ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಮುಂದಿನ ಚಿತ್ರ ‘ಬಿಂಬಿಸರ’ವೆಂದು ಘೋಷಿಸಿದ್ದಾರೆ. ತಮ್ಮ ತಾತ ನಟ ಎನ್ ಟಿಆರ್ ಅವರ 98ನೇ ಹುಟ್ಟುಹಬ್ಬದಂದು ಬಿಂಬಿಸರದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ.

ಈ ಚಲನಚಿತ್ರವನ್ನು ಮಲ್ಲಿದಿ ವಶಿಷ್ಠ ನಿರ್ದೇಶನ ಮಾಡುತ್ತಿದ್ದು, ಈ ಚಿತ್ರದಲ್ಲಿ ನಂದಮುರಿ ಕಲ್ಯಾಣ್ ರಾಮ್ ಅವರು ಹಿಂದೆಂದೂ ಕಾಣಿಸಿಕೊಳ್ಳದಂತ ಗೆಟಪ್ ನಲ್ಲಿ ತೆರೆ ಮೇಲೆ ಬರಲಿದ್ದಾರೆ. ಹಲವಾರು ಜನರನ್ನು ಕೊಲ್ಲುವಷ್ಟು ಶಕ್ತನಾಗಿರುವ ರಾಜ ಮತ್ತು ವಾರಿಯರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಬಿಂಬಿಸರ ಚಿತ್ರದ ಪೋಸ್ಟರ್ ಅನ್ನು ಸಾಮಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕಲ್ಯಾಣ್ ರಾಮ್, ‘ಇತಿಹಾಸದಲ್ಲಿ ಕಳೆದು ಹೋದ ಭೂಮಿಯಲ್ಲಿ, ಅನಾಗರಿಕ ರಾಜ ವಾಸವಾಗಿದ್ದ, ಇದೇ ಇವರ ಕಥೆಯನ್ನು ಪ್ರಸ್ತುಪಪಡಿಸಲಾಗುತ್ತಿದೆ. ಬಿಂಬಿಸರ’ ಎಂದು ಬರೆದುಕೊಂಡಿದ್ದಾರೆ.

ಬಿಂಬಿಸರದಲ್ಲಿ ಕಲ್ಯಾಣ್ ರಾಮ್ ಜೊತೆ ಕೆಥರಿನ್ ತೆರೆಸಾ ಮತ್ತು ಸಂಯುಕ್ತಾ ಮೇನನ್ ತರೆ ಹಂಚಿಕೊಳ್ಳಿದ್ದು, ಈ ಚಿತ್ರವನ್ನು ಎನ್ ಟಿಆರ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ.