ಬಾಲಿವುಡ್ ನಟಿ ಕಂಗನಾ ರನೌತ್ ಟ್ವಿಟ್ಟರ್ ಖಾತೆ ಅಮಾನತ್ತು

ಇನ್ಸ್ಟಾಗ್ರಾಮ್ ನಲ್ಲಿ ಗಳಗಳನೆ ಕಣ್ಣೀರಿಟ್ಟ ಕಂಗನಾ

 | 
Kangana Ranaut

ಪಶ್ಚಿಮ ಬಂಗಾಲ ಚುನಾವಣೆಯ ಮತೆಣಿಕೆ ಮುಗಿದ ನಂತರ ಟ್ವಿಟ್ಟರ್ ನಲ್ಲಿ ವಿವದಾತ್ಮಕ ಪೋಸ್ಟ್ ಹಾಕಿದ ಹಿನ್ನೆಲೆ; ಬಾಲಿವುಡ್ ನಟಿ ಕಂಗನಾ ರನೌತ್ ಅವರ ಟ್ವಿಟ್ಟರ್ ಅಕೌಂಟನ್ನು ಸ್ಥಗಿತಗೊಳಿಸಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಆಕ್ಟಿವ್ ಆಗಿದ್ದ ಕಂಗನಾ ಸಿನೆಮಾಗಿಂತಲೂ ಹೆಚ್ಚು ವಿವಾದಗಳಿಂದಲೇ ಸಿದ್ದಿ ಮಾಡಿದ್ದರು. ಪ್ರಚೋನಕಾರಿ ಪೋಸ್ಟ್ ಮಾಡಿದ ಹಿನ್ನೆಲೆ ಟ್ವಿಟ್ಟರ್ ಅವರ ಖಾತೆಯನ್ನ ಅಮಾನತ್ತು ಮಾಡಿದೆ.

ಪಶ್ಚಿಮ ಬಂಗಾಳದ ಚುನಾವಣೆ ಬಳಿಕ ಅಲ್ಲಿ ಹಿಂಸಾಚಾರ ನಡೆರುವ ಬಗ್ಗೆ ವರದಿಯಗಿತ್ತು, ಇದರ ಬಗ್ಗೆ ಪೋಸ್ಟ್ ಮಾಡಿದ್ದ ಕಂಗನಾ, ಪ್ರದಾನಿ ಮೋದಿ ಪರವಾಗಿ ವಾದ ಮಂಡಿಸುವ ಭರದಲ್ಲಿ ಪ್ರಧಾನಿ ಮೋದಿ ಮಮತಾ ವಿರುದ್ಧ ತಮ್ಮ ವಿರಾಟ ರೂಪ ತೋರಿಸಬೇಕು ಎಂದು ಹಿಂಸೆಗೆ ಪ್ರಚೋದನೆ ನೀಡುವ ಪೋಸ್ಟ್ ಮಾಡಿದ್ದಾರೆ ಎಂದು ಟ್ವಿಟ್ಟರ್ ಕಂಗನಾಳ ಖಾತೆಯನ್ನು ಸಸ್ಪೆಂಡ್ ಮಾಡಿದೆ.

ನಂತರ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ಹಂಗನಾ ವಿಡಿಯೋದಲ್ಲಿ ಕಣ್ಣೀರು ಹಾಕಿದ್ದಾರೆ. ಬಂಗಾಳದಲ್ಲಿ ಕೆಟ್ಟ ಸಿದ್ದು, ಕೇಳಿ ಬರುತ್ತಿದೆ. ಪೋಟೋಗಳು, ಡೀಟೈಲ್ ಗಳು ಬರುತ್ತಿವೆ. ಅಲ್ಲಿ ಹಿಂಸಾಚಾರ, ಹತ್ಯೆ, ಗ್ಯಾಂಗ್ ರೇಪ್, ನಡೆಯುತ್ತಿವೆ ಆದ್ರೆ ಅಂತಾರಾಷ್ಟ್ರೀಯ ಮಾಧ್ಯಮಗಳು ಅದನ್ನು ತೋರಿಸುತ್ತಿಲ್ಲ. ಈ ರೀತಿ ಯಾಕೆ ಅಂತಾ ನನಗೆ ಗೊತ್ತಾಗ್ತಾ ಇಲ್ಲ. ಅಲ್ಲಿ ದೇಶದ್ರೋಹಿಗಳು ಆಡಳಿತ ನಡೆಬೇಕಾ? ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಬರಬೇಕು ಎಂದು ಕಂಗನಾ ಕಣ್ಣೀರಾಕಿದ್ದಾರೆ.