ವಿಕ್ಕಿ ಕೌಶಲ್ಯದ ಬಲೆಗೆ ಬಿತ್ತ ಕ್ಯಾಟ್!

ಕತ್ರೀನಾ, ವಿಕ್ಕಿ ಡೇಟಿಂಗ್ ಬಗ್ಗೆ ಬಾಯ್ಬಿಟ್ಟ ಹರ್ಷವರ್ಧನ್ ಕಪೂರ್

 | 
Kaushal and katrina

ಬಾಲಿವುಡ್ ನಟಿ ಕತ್ರೀನಾ ಕೈಫ್ ಮತ್ತು ನಟ ವಿಕ್ಕಿ ಕೌಶಲ್ ಹಲವು ದಿನಗಳಿಂದ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನುವ ಸುದ್ದಿಯನ್ನು ನಟ ಹರ್ಷವರ್ಧನ್ ಕಪೂರ್ ಸ್ಪಷ್ಟಪಡಿಸಿದ್ದಾರೆ. ಎರಡ್ಮೂರು ವರ್ಷಗಳಿಂದ ಅವರು ಡೇಟಿಂಗ್ ಮಾಡುತ್ತಿದ್ದಾರೆ. ಆದರೆ, ತಮ್ಮ ಸಂಬಂಧಗಳ ಬಗ್ಗೆ ಅವರು ಬಾಯ್ ಬಿಡದೇ ಮಗ್ಗುಮ್ಮಾಗಿದ್ದಾರೆ ಎಂದು ಹೇಳುವ ಮೂಲಕ ಅವರು ನಡುವಿನ ಸಂಬಂಧವನ್ನು ದೃಢಪಡಿಸಿದ್ದಾರೆ.

ಝೂಮ್ ಇಂಟರ್ವಿವ್ ಒಂದರಲ್ಲಿ ಬಾಲಿವುಡ್ ನಲ್ಲಿ ಚಾಲ್ತಿಯಲ್ಲಿರುವ ನಿಜವಾದ ರಿಲೇಷನ್ ಶಿಪ್ ಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಹರ್ಷವರ್ಧನ್ ಕಪೂರ್, ವಿಕ್ಕಿ ಮತ್ತು ಕತ್ರೀನಾ ಒಟ್ಟಿಗೆ ಇರುವುದು ನಿಜ, ನಾನು ಇದನ್ನ ಹೇಳಿದರೆ ನನಗೆ ತೊಂದರೆಯಾಗಬಹುದೇನೋ? ನನಗೆ ಗೊತ್ತಿಲ್ಲ. ಅವರು ಇದರಲ್ಲಿ ಸಾಕಷ್ಟು ಮುಕ್ತರಾಗಿದ್ದಾರೆಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.  

ವಿಕ್ಕಿ ಮತ್ತು ಕತ್ರೀನಾ ಅವರ ಸಂಬಂಧಗಳ ಬಗ್ಗೆ ಸುಮ್ಮನೆ ಉಳಿಸಿದ್ದಾರೆ. ಏಪ್ರಿಲ್ 2021 ರಲ್ಲಿ ವಿಕ್ಕಿ ಕೌಶಲ್ ಗೆ ಕೋವಿಡ್ ದೃಢಪಟ್ಟಿತ್ತು. ಅದರ ಮಾರನೆ ದಿನವೇ ಕತ್ರೀನಾ ಆಕೆಯ ಮೆಡಿಕಲ್ ರಿಪೋರ್ಟ್ ಗಳನ್ನು ಸಾಮಾಜಿಕ ಜಾಲತಾನಗಳಲ್ಲಿ ಹಾಕಿದ್ದರು ಇದೇ ಇದಕ್ಕೆ ಸಾಕ್ಷಿ ಎಂದು ತಿಳಿಸಿದ್ದಾರೆ.