ಕೆಜಿಎಫ್ ಚಾಪ್ಟರ್-2 ಬಿಡುಗಡೆಗೆ ನಡೆದಿದ್ಯಾ ತಯಾರಿ?

ಕುತೂಹಲ ಕೆರಳಿಸಿದೆ ಪ್ರಶಾಂತ್ ನೀಲ್ ಹಂಚಿಕೊಂಡ ಪೋಸ್ಟರ್

 | 
KGF Chapter-2 poster

ಬೆಂಗಳೂರು: ಕನ್ನಡ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನೆಮಾ ಕೆಜಿಎಫ್ ಚಾಪ್ಟರ್-2 ಥಿಯೆಟರ್ ತೆರೆಗಳ ಮೇಲೆ ಬಹು ಬೇಗನೇ ಅಪ್ಪಳಿಸುವ ಸಾಧ್ಯತೆ ಇದೆ. ಕೆಜಿಎಫ್ ಚಾಪ್ಟರ್-2 ಬಿಡುಗಡೆ ಕುರಿತು ಕುತೂಹಲ ಹುಟ್ಟಿಸಿವ ಪೋಸ್ಟರ್ ಒಂದನ್ನು ನಿರ್ದೇಶಕ ಪ್ರಶಾಂತ್ ನೀಲ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಕೆಜಿಎಫ್ ಚಾಪ್ಟರ್-2 ಚಿತ್ರತಂಡ ಬಿಡುಗಡೆ ದಿನಾಂಕವನ್ನು ಜುಲೈ ತಿಂಗಳಿಗೆ ನಿಗದಿಪಡಿಸಿತ್ತು. ಈಗ ಪ್ರಶಾಂತ್ ನೀಲ್ ಪ್ರಕಟಿಸಿರುವ ಪೋಸ್ಟರ್ ಚಿತ್ರದ ಬಿಡುಗಡೆ ಕುರಿತು ಪ್ರೇಕ್ಷಕರಿಗೆ ಕುತೂಹಲ ಹುಟ್ಟಿಸಿದ್ದು, ಚಿತ್ರ ಯಾವಾಗ ತೆರೆ ಮೇಲೆ ಬರಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ಈ ಸಿನೆಮಾವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದು, ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿದ್ದೆ. ಈ ಚಿತ್ರದಲ್ಲಿ ದೊಡ್ಡ ತಾರಾಗಣವೇ ಇದ್ದು, ನಟ ಯಶ್ ಜೊತೆಗೆ ಬಾಲಿವುಡ್ ನಟ ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ ರಾಜ್ ಸೇರಿದಂತೆ ಹಲವರು ನಟಿಸಿದ್ದು, ಈ ಸಿನೆಮಾ ಕನ್ನಡ, ಹಿಂದಿ, ತಮಿಳು, ತೆಲುಗು, ಮಳಯಾಳಂ ಬಾಷೆಗಳಲ್ಲಿ ಬಿಡುಗಡೆಯಾಗಲಿದೆ.