ಕಿರಿಕ್ ಪಾರ್ಟಿ ಸಂಯುಕ್ತ ಹೆಗ್ಡೆಗೆ ಕೊರೋನಾ ಸೋಂಕು ದೃಢ

ಸಾಮಾಜಿಕ ಜಾಲತಾಣದಲ್ಲಿ ವಿಷಯ ತಿಳಿಸಿದ ಕಿರಿಕ್ ಬೆಡಗಿ ಸಂಯುಕ್ತ

 | 
Samyukta hegde

ಕೋವಿಡ್ ಎರಡನೇ ಅಲೆಯ ಸೋಂಕು ದೇಶದ ಹಲವಾರು ಸೆಲೆಬ್ರೆಟಿಗಳಿಗೆ ತಟ್ಟಿದೆ. ಈ ಸಾಲಿಗೆ ಈಗ ಕಿರಿಕ್ ಪಾರ್ಟಿಯ ಬೆಡಗಿ ನಟಿ ಸಂಯುಕ್ತ ಹೆಗ್ಡೆ ಸೇರಿದ್ದಾರೆ, ಕೊರೋನಾ ಸೋಂಕು ತಗುಲಿರುವ ವಿಷಯವನ್ನು ಸ್ವತಃ ತಾವೇ ಸಾಮಾಜಿಕ ಜಾಲತಣದಲ್ಲಿ ಹಂಚಿಕೊಂಡಿದ್ದಾರೆ.

ನನಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ವೈಧ್ಯರ ಸಲಹೆಯ ಮೆರೆಗೆ ಪ್ರತ್ಯೇಕ ವಾಸದಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದೇನೆ ತಿಳಿಸಿರುವ ಸಂಯಕ್ತ, ಎಲ್ಲರೂ ನಿಮ್ಮ ಬಗ್ಗೆ ಕಾಳಜಿ ವಹಿಸಿ, ಸಕಾರಾತ್ಮಕವಾಗಿರಿ, ಕೋವಿಡ್ ಪರಿಕ್ಷೆ ನಕಾರಾತ್ಮಕವಾಗಿರಲಿ ಎಂದು ಆಶಿಸಿದ್ದಾರೆ.

ಸಂಯುಕ್ತ ಹೆಗ್ದೆಯ ಪೋಷಕರಿಗೂ ಕೊರೋನಾ ಸೋಂಕು ತಗುಲಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಆರೋಗ್ಯವಾದ ನಂತರ ನಾನು ಅವರನ್ನು ಪಡೆದುಕೊಂಡಿದ್ದೇನೆ. ವಿಶ್ವಕ್ಕೆ ನಾನು ಕೃತಜ್ಞೆ ಎಂದು ತಿಳಿಸಿದ್ದಾರೆ. ಹಾಗೆ ಕೊರೋನಾಗಾಗಿ ಶ್ರಮಿಸುತ್ತಿರುವ ಬಿಬಿಎಂಪಿಯ ಕಾರ್ಯವನ್ನು ಶ್ಲಾಘಿಸಿದ್ದಾರೆ.