ಸಾವಿನ ಕದ ತಟ್ಟಿ ಬಂದ ನಟ ಕೋಮಲ್!

ಕೊರೋನಾದಿಂದ ಪಾರಾದ ಕೋಮಲ್ ಸಂಕಷ್ಟಗಳ ಬಗ್ಗೆ ಸಹೋದರ ಜಗ್ಗೇಶ್ ಟ್ವೀಟ್

 | 
ಸಾವಿನ ಕದ ತಟ್ಟಿ ಬಂದ ನಟ ಕೋಮಲ್!

ಹೌದು, ಅಯ್ಯೋ. ಇದೇನಪ್ಪಾ ನಟ ಕೋಮಲ್ ಹೀಗ್ ಮಲಗಿದ್ದಾರೆ ಏನ್ ಆಯ್ತಂತ ಯೋಚನೆ ಮಾಡ್ತಾ ಇದ್ದೀರಾ.. ಈ ಸ್ಟೋರಿ ನೋಡಿ. 

ಕೊರೋನಾ ವೈರಸ್ 2ನೇ ಅಲೆಗೆ ಭಾರತ ದೇಶ ಅಕ್ಷರಶಃ ತತ್ತರಿಸಿದೆ. ಮಹಾಮಾರಿ ಕೋವಿಡ್-19 ಪಿಡುಗಿನಿಂದಾಗಿ ಜನಸಾಮಾನ್ಯರು ಮಾತ್ರವಲ್ಲದೆ ಸೆಲೆಬ್ರಿಟಿಗಳು ಸಹ ಸಂಕಷ್ಟಕ್ಕೀಡಾಗಿದ್ದಾರೆ. ಈ ಕೊರೋನಾ ಮಹಾಮಾರಿಗೆ ಅನೇಕ ಸೆಲೆಬ್ರಿಟಿಗಳು ತುತ್ತಾಗಿದ್ದು, ಕಳೆದ ವಾರ ನಟ ಕೋಮಲ್ ಗೆ ಕೊರೋನಾ ಧೃಡಪಟ್ಟಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಕೋಮಲ್ ಅವರ ಅಣ್ಣ ನಟ ಜಗ್ಗೇಶ್ ಅವರು ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಚ್ಚರಿ ಅಂದ್ರೆ ಕೋಮಲ್ ಗೆ ಹಲವು ದಿನಗಳ ಹಿಂದೆಯೇ ಕೊರೋನಾ ಸೋಂಕು ತಗಲಿತ್ತು ಆದರೆ, ಈ ವಿಚಾರವನ್ನು ಜಗ್ಗೇಶ್ ಅವರು ಯಾರಿಗೂ ತಿಳಿಸದೇ ಮುಚ್ಚಿಟ್ಟಿದ್ದರು. ಆದರೆ, ಈ ವಿಷಯವನ್ನು ಇದೀಗ ಬಿಚ್ಚಿಟ್ಟಿದ್ದಾರೆ.  

ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಂತರ ಸಾಲು ಸಾಲು ಸಂಕಷ್ಟ ಅನುಭವಿಸಿದ್ದ ನಟ ಕೋಮಲ್ ಸ್ವಾಭಿಮಾನದಿಂದ ಬದುಕಲು ಬೆಂಗಳೂರಿನಲ್ಲಿ ಸ್ವಂತ ವ್ಯವಹಾರ ಶುರು ಮಾಡಿದ್ರು. ಆದರೆ, ಇತ್ತೀಚೆಗೆ ಅಲ್ಲಿಯೂ ಸಂಕಷ್ಟಕ್ಕೀದಾಗಿದ್ರು. ಕೆಲ ಲಂಚಬಾಕರಿಂದ ತಮಗೆ ಬರಬೇಕಾದ ಹಣ ಬಾರದೆ  ಇದ್ದುದ್ದರಿಂದ ಸಮಸ್ಯೆ ಅನುಭವಿಸಿದ್ರು ಎಂದು ತಿಳಿದು ಬಂದಿದ್ದು, ಸಿನೆಮಾ, ವ್ಯವಹಾರ ಎರಡರಲ್ಲೂ ಸಮಸ್ಯೆ ಅನುಭವಿಸಿದ್ದ ಕೋಮಲ್ ಗೆ ಮಹಾಮಾರಿ ಕೊರೋನಾ ಕೂಡ ಬಾಧಿಸಿದೆ. 

ತನ್ನ ಸಹೋದರನ ಪಟ್ಟ ಸಂಕಷ್ಟ ಮತ್ತು ಆರೋಗ್ಯದ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್, ನಾನು ಇಷ್ಟು ದಿನ ಪಡುತ್ತಿದ್ದ ಯಾತನೆ ರಾಯರಿಗೆ ಗೊತ್ತು! ನನ್ನ ತಮ್ಮನನ್ನು ಉಳಿಸಿಕೊಡಬೇಕೆಂದು ಗುರು  ರಾಯರಲ್ಲಿ ಬೇಡಿಕೊಂಡಿದ್ದೆ. ರಾಯರು ಬೃಂದಾವನದಿಂದ ಬಂದು ನನ್ನ ಸಹೋದರನನ್ನು ಉಳಿಸಿಬಿಟ್ಟರು ಎಂದು ತನ್ನ ಇಷ್ಟದ ಆರಾಧ್ಯ ಧೈವ ಗುರು ರಾಘವೇಂದ್ರ ರಾಯರನ್ನು ಸ್ಮರಿಸಿದ್ದಾರೆ.

ಹಾಗೆ ಕೋಮಲ್ ಅವರು ಗುಣಮುಖರಾಗಲು ಸಹಕರಿಸಿದ ವೈದ್ಯರುಗಳಾದ ಡಾ. ಮಧುಮತಿ, ಡಾ. ಲಲಿತ ಹಾಗೂ ಆಸ್ಪತ್ರೆಯ ನರ್ಸ್ ಗಳಿಗೆ ಟ್ವೀಟ್ ಮೂಲಕ ಧನ್ಯವಾದ ತಿಳಿಸಿದ್ದಾರೆ.

http://