ಗ್ರಾಮಸ್ಥರಿಗೆ ಉಚಿತ ಕೋವಿಡ್ ಲಸಿಕೆ ಕೊಡಿಸಿದ ಟಾಲಿವುಡ್ ಸ್ಟಾರ್

ತಂದೆ ಕೃಷ್ಣ ಅವರ ಹುಟ್ಟುಹಬ್ಬದಂದು ಗ್ರಾಮಸ್ಥರಿಗೆ ಉಚಿತ ಲಸಿಕೆ ಕೊಡಿಸಿದ ಮಹೇಶ್ ಬಾಬು

 | 
Mahesh babu Covid free vaccine prigram

ಕೊರೋನಾದಿಂದ ಪಾರಾಗಲು ಕೊರೋನಾ ಲಸಿಕೆ ತುಂಬಾ ಮುಖ್ಯ ಎಂಬುದು ನಮಗೆಲ್ಲರಿಗೂ ಗೊತ್ತಿರುವ ವಿಚಾರ, ಕೋವಿಡ್ ಲಸಿಕೆಗೆ ಈಗ ಎಲ್ಲಿಲ್ಲದ ಬೇಡಿಕೆ ಶುರುವಾಗಿದೆ. ರಾಷ್ಟ್ರದಲ್ಲಿ ಲಸಿಕೆ ತಾರತಮ್ಯ ನಡೆಯುತ್ತಿದೆ ಎಂಬ ಕೂಗು ಕೇಳುತ್ತಿದೆ. ಕೆಲವರು ಹಣದ ದುರಾಸೆಗೆ ಲಸಿಕೆಯನ್ನು ಕಮಿಷನ್ ಗಾಗಿ ಮಾರಾಟ ಮಾಡತ್ತಿದ್ದಾರೆ.

ಇಂತಹವುಗಳ ನಡುವೆ ಟಾಲಿವುಡ್ ಸೂಪರ್ ಸ್ಟಾರ್ ನಟ ಮಹೇಶ್ ಬಾಬು ಅವರ ತಂದೆಯ ಹುಟ್ಟು ಹಬ್ಬದಂದು ಬುರ್ರಿಪಲೆಂ ಎಂಬ ಗ್ರಾಮದ ಎಲ್ಲಾ ಜನರಿಗೆ ಉಚಿತವಾಗಿ ಕೋವಿಡ್ ಲಸಿಕೆ ಕೊಡಿಸುವ ಮೂಲಕ ಅವರ ತಂದೆ ನಟ ಕೃಷ್ಣ ಅವರ 78 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

ನಟ ಕೃಷ್ಣ ಅವರು ಅಮ್ಮ ದೊಂಗ, ಅಗ್ನಿ ಪರ್ವತ ಮತ್ತು ಸಿಂಹಾಸನಂ ಎಂಬ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿ ತೆಲುಗು ಸಿನೆಮಾರಗದಲ್ಲಿ ಹೆಸರು ಮಾಡಿದ್ದಾರೆ. ಇವರು 78ನೇ ವರ್ಷದ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದ ಅವರ ಮಗ ಮಹೇಶ್ ಬಾಬು, ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಬುರ್ರಿಪಲೆಂ ಗ್ರಾಮದ ಎಲ್ಲಾ ಜನರಿಗೆ ಉಚಿತ ಲಸಿಕೆ ಕೊಡಿಸಿದ್ದಾರೆ.

ಭಾರತದಲ್ಲಿ ಬಹಳ ಗೌರವಯುತ ನಟರಾಗಿ ಗುರುತಿಸಿಕೊಂಡಿರುವ ಮಹೇಶ್ ಬಾಬು ಅವರು, ಹಲವಾರು ಸೇವಾ ಕಾರರ್ಯಗಳಿಂದಲೂ ಗುರುತಿಸಿಕೊಂಡಿದ್ದಾರೆ. ಇವರು ಆಂಧ್ರಪ್ರದೇಶದ ಮತ್ತು ತೆಲಂಗಾಣದ ಬುರ್ರಿಪಲೆಂ, ಸಿದ್ದಾಪುರ ಗ್ರಾಮಗಳನ್ನು ದತ್ತು ಪಡೆದಿದ್ದು, ಹಲವು ಸಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ.