ಮೋಹನ್ ಲಾಲ್ ಮರಕ್ಕರ್: ಅರಬಿ ಕಡಲಿಂತೆ ಸಿಂಹಂ ಬಿಡುಗಡೆಗೆ ಸಿದ್ದ

ಸಿನೆಮಾ ಬಿಡುಗಡೆಯ ದಿನಾಂಕ ಪ್ರಕಟಿಸಿದ ಮೋಹನ್ ಲಾಲ್

 | 
ಮರಕ್ಕರ್ “ಅರಬಿ ಕಡಲಿಂತೆ ಸಿಂಹ

ದಕ್ಷಿಣ ಭಾರತದ ಪ್ರಖ್ಯಾತ ನಟ ಮೋಹನ್ ಲಾಲ್ ಅವರ ಬಹುನಿರೀಕ್ಷಿತ ಚಿತ್ರ ಮರಕ್ಕರ್ ಅರಬಿ ಕಡಲಿಂತೆ ಸಿಂಹಂ ಚಿತ್ರದ ಬಿಡುಗಡೆಗೆ ಹೊಸ ದಿನಾಂಕ ನಿಗದಿಯಾಗಿದೆ. ಈ ಸಿನೆಮಾ ಓಣಂ ಸಂದರ್ಭ ಆಗಸ್ಟ್ 12ರಂದು ಥೀಯೇಟರ್ಗಳಲ್ಲಿ ರಿಲೀಸ್ ಆಗಲಿದೆ.

ಈ ಚಿತ್ರವನ್ನು ಪ್ರಿಯದರ್ಶನ್ ನಿರ್ದೇಶ ಮಾಡಿದ್ದು, ಮರಕ್ಕರ್ ಒಂದು 16ನೇ ಶತಮಾನದ ಐತಿಹಾಸಿಕ ವಾರ್ ಡ್ರಾಮವಾಗಿದೆ. ಈ ಸಿನೆಮಾವನ್ನು ಮಾರ್ಚ್ 26, 2020 ರಂದೇ ಬಿಡುಗಡೆ ಮಾಡಲು ನಿರ್ಧಾರ ಮಾಡಲಾಗಿತ್ತು ಆದರೆ ಕೊರೋನಾ ಸಾಂಕ್ರಮಿಕದ ಹಿನ್ನೆಲೆ ಬಿಡುಗಡೆ ದಿನಾಂಕವನ್ನು ಹಲವು ಬಾರಿ ಮುಂದೂಡಲಾಗಿತ್ತು.

ಟ್ವಿಟ್ಟರ್ನಲ್ಲಿ ಬಿಡುಗಡೆ ದಿನಾಂಕವನ್ನು ತಿಳಿಸಿರುವ ನಟ ಮೋಹನ್ ಲಾಲ್ ಆಗಸ್ಟ್ 12 ರಂದು ಓಣಂ ಹಬ್ಬದ ಸಂದರ್ಭದಲ್ಲಿ ಸಿನೆಮಾ ಬಿಡುಗಡೆಯಾಗಲಿದೆ ಎಂದು ಮಳಯಾಳಂ ನಲ್ಲಿ ಬರೆದುಕೊಂಡಿದ್ದಾರೆ.

ಪ್ರಿಯದರ್ಶನ್ ನಿರ್ದೇಶನ ಮಾಡಿರುವ ಮರಕ್ಕರ್ ಅರಬಿ ಕಡಲಿಂತೆ ಸಿಂಹಂ ಚಿತ್ರವನ್ನು ಆಂಟೋನಿ ಪೆರುಂಬವೂರ್ ನಿರ್ಮಾಣ ಮಾಡಿದ್ದಾರೆ. ಸೆನ್ಸಾರ್ ಮಂಡಳಿಯಿಂದ 2019 ರಲ್ಲೇ ಪ್ರಮಾಣ ಪತ್ರ ಪಡೆದಿರುವ ಸಿನೆಮಾ ಬೆಸ್ಟ್ ಫೀಚರ್ ಫಿಲಿಂ, ಬೆಸ್ಟ್ ಸ್ಪೆಷಲ್ ಎಫೆಕ್ಟ್ಸ್ ಮತ್ತು ಬೆಸ್ಟ್ ಕಾಸ್ಟ್ಯೂಮ್ ಬಿಭಾಗಗಳಲ್ಲಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

ಈ ಸಿನೆಮಾ 100ಕೋಟಿ ರೂಪಾಯಿಗಳ ದೊಡ್ಡ ಬಡ್ಜೆಟ್ ನ ಸಿನೆಮಾ ಆಗಿದ್ದು, ಇದರಲ್ಲಿ ಮೋಹಲ್ ಲಾಲ್, ಮಂಜು ವಾರಿಯರ್, ಕೀರ್ತಿ ಸುರೇಶ್, ಪ್ರಣವ್ ಮೋಹನ್ ಲಾಲ್, ಅರ್ಜುನ್ ಸರ್ಜಾ, ಸುನೀಲ್ ಶೆಟ್ಟಿ, ಪ್ರಭು, ಸಿದ್ದಿಕ್ಕಿ ಸೇರಿದಂತೆ ಹಲವರು ಖ್ಯಾತನಾಮರ ದೊಡ್ಡ ತಾರಾ ಬಳಗವೇ ಇದೆ.