ಹೊಸ ಚಿತ್ರದ ಪೋಸ್ಟರ್ ರಿವೀಲ್ ಮಾಡಿದ ಮೋಹನ್ ಲಾಲ್

ಮಳಯಾಳಂ ಸ್ಟಾರ್ ಸುರೇಶ್ ಗೋಪಿಯವರ ಜನ್ಮದಿನದಂದು ಪೋಸ್ಟರ್ ರಿವೀಲ್

 | 
SG251 poster

ಇಂದು ಮಳಯಾಳಂ ಸ್ಟಾರ್ ಸುರೇಶ್ ಗೋಪಿಯವರ 63ನೇ ಜನ್ಮದಿನ, ಅವರ ಜನ್ಮದಿನದ ಹಿನ್ನೆಲೆ ನಟ ಮೋಹನ್ ಲಾಲ್ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಅವರ ಸುರೇಶ್ ಗೋಪಿಯವರ 251 ಅನ್ನೋ ಚಿತ್ರದ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದಾರೆ.

SG251 ಟೈಟಲ್ ತಾತ್ಕಾಲಿಕವಾಗಿದ್ದು, ಈ ಚಿತ್ರವನ್ನು ರಾಹುಲ್ ರಾಮಚಂದ್ರನ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರ ಥ್ರಿಲ್ಲರ್ ಜೊತೆಗೆ ಕೆಲ ಪ್ರಯಾಣದ ಅಂಶಗಳನ್ನು ಒಳಗೊಂಡಿರಲಿದೆ. ಈಗ ಬಿಡುಗಡೆ ಮಾಡಲಾಗಿರುವ ಪೋಸ್ಟರ್ ನೋಡುಗರ ಗಮನ ಸೆಳೆಯುತ್ತಿದೆ.

ಈ ಪೋಸ್ಟರ್ ಅನ್ನು ರಿವೀಲ್ ಮಾಡುವ ಮೂಲಕ ಮೋಹನ್ ಲಾಲ್ ಅವರು ಸುರೇಶ್ ಗೋಪಿಯವರಿಗೆ ಹುಟ್ಟುಹಬ್ಬದ ಶುಭಾಷಯವನ್ನು ಕೋರಿದ್ದಾರೆ.

ರಾಹುಲ್ ರಾಮಚಂದ್ರನ್ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಸಮೀನ್ ಸಲೀಂ ಕತೆ ಬರೆದಿದ್ದಾರೆ. ಎತಿರಿಯಲ್ ಎಂಟರ್ಟೈನ್ಮೆಂಟ್ ಸಂಸ್ಥೆ ಇದರ ನಿರರ್ಮಾಣದ ಹೊಣೆ ಹೊರುವ ಸಾದ್ಯತೆ ಇದೆ. ಪಾತ್ರಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿಯಬೇಕಿದೆ.