ದರ್ಶನ್ ಕರೆಗೆ ಒಂದೇ ವಾರದಲ್ಲಿ 1ಕೋಟಿ ರೂ. ಸಂಗ್ರಹ

ಮೃಗಾಲಯಗಳಿಗೆ ನೆರವಿನ ಮಹಾಪೂರ

 | 
Darshan in zoo

ಬೆಂಗಳೂರು: ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿದ್ದ ಮೃಗಾಲಯಗಳ ಪ್ರಾಣಿಗಳನ್ನು ದತ್ತು ಪಡೆಯಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ನೀಡಿರುವ ಕರೆಗೆ ಬರೊಬ್ಬರಿ ಒಂದು ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಸಂಗ್ರಹವಾಗಿದೆ.

ಮೃಗಾಲಯಗಳಿಗೆ ನೆರವು ನೀಡಲು ಅವರು ಮಾಡಿದ ಮನವಿಗೆ ರಾಜ್ಯಾದ್ಯಂತ ಅದ್ಭುತ ಸ್ಪಂದನೆ ವ್ಯಕ್ತವಾಗಿದ್ದು, ಕರ್ನಾಟಕದ 9 ಮೃಗಾಲಯಗಳಿಗೂ ದೇಣಿಗೆ ಹರಿದು ಬಂದಿದೆ. ಕೇವಲ ಆರು ದಿನಗಳಲ್ಲಿ ಒಂದು ಕೋಟಿ ರೂಪಾಯಿಗಳು ಸಂಗ್ರಹವಾಗಿರುವುದು ಗಮನಾರ್ಹ ವಿಚಾರ.

ಈ ಬಗ್ಗೆ ಕರ್ನಾಟಕ ಮೃಗಾಲಯ ಪ್ರಾಧಿಕಾರ ಅಧಿಕೃತ ಟ್ವಿಟರ್​ ಖಾತೆ ಮೂಲಕ ಮಾಹಿತಿ ಹಂಚಿಕೊಂಡಿದೆ. ಅಲ್ಲದೆ, ಇದಕ್ಕೆ ಕಾರಣರಾದ ದರ್ಶನ್​ ಅವರಿಗೆ ಧನ್ಯವಾದ ತಿಳಿಸಿದೆ. ಯಾವ ಮೃಗಾಲಯಕ್ಕೆ ಎಷ್ಟು ಹಣ ಬಂದಿದೆ ಎಂಬುದರ ವಿವರವನ್ನೂ ನೀಡಲಾಗಿದೆ.