ಪ್ರಿಸ್ವೆಸ್ ಸಮೂಹದಿಂದ 2021ರ ಕಿರುಚಿತ್ರೋತ್ಸವಕ್ಕೆ ಮುಕ್ತ ಆಹ್ವಾನ...!
“ಪ್ರಿಸ್ವೆಸ್ ಕಿರುಚಿತ್ರೋತ್ಸವ-2021” ಪ್ರಿಸ್ವೆಸ್ ಸಮೂಹದ ಆಯೋಜನೆ ಅಡಿಯಲ್ಲಿ ಕಿರುಚಿತ್ರ ನಿರ್ದೇಶಕ, ನಿರ್ಮಾಪಕರಿಗೆ ರೆಡ್ ಕಾರ್ಪೆಟ್ ಹಾಸಿ ಕೈ ಬೀಸಿ ಕರೆಯುತ್ತಿದೆ. ಪ್ರತೀ ವರ್ಷ ಮೇ. 9ನೇ ತಾರೀಖಿನಂದು ವಿಶ್ವದಾದ್ಯಂತ ಹೊಸ ತಲೆಮಾರಿನ ಪ್ರತಿಭೆಗಗಳಿಗೆ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ.
ಕಿರುಚಿತ್ರೋತ್ಸವವನ್ನು ನಾವಿನ್ಯತೆ ಮತ್ತು ಹೊಸ ಆಲೋಚನೆಗಳೊಂದಿಗೆ ಪ್ರಸ್ತುತಪಡಿಸಿವುದೇ ನಮ್ಮ ಮುಖ್ಯ ಧ್ಯೇಯ. ಈ ಸ್ಪರ್ಧೆ ಯುವಜನರಲ್ಲಿ ಚಲನಚಿತ್ರ ತಯಾರಿಕೆಯನ್ನು ಪುನಶ್ಚೇತನಗೊಳಿಸುವ ಉದ್ದೇಶವಾಗಿದೆ. ಆದ್ದರಿಂದ, ಪ್ರಿಸ್ವೆಸ್ ಹೊಸ ಮತ್ತು ಸೃಜನಶೀಲ ಚಿತ್ರ ನಿರ್ದೇಶಕ ಮತ್ತು ನಿರ್ಮಾಪಕರನ್ನು ಗುರುತಿಸಿ ಹೊರತರಲು ಈ ಚಿತ್ರೋತ್ಸವವನ್ನು ಆಯೋಜಿಸಲು ನಿರ್ಧರಿಸಿದೆ.
ನಮ್ಮ ಸಂಸ್ಥೆ ನಿರಂತರವಾಗಿ ಕಲೆ ಮತ್ತು ಸಂಸ್ಕೃತಿಗಳಿಗೆ ಕೊಡುಗೆ ನೀಡುತ್ತಾ ಬಂದಿದೆ. ಚಲನಚಿತ್ರ ನಿರ್ಮಿಸಲು ಬೇಕಾದ ಶಿಕ್ಷಣ, ತರಬೇತಿ ನೀಡಿ ಸಿನಿಮಾ ತಯಾರಕರನ್ನು ನಿರ್ಮಿಸುವುದು ನಮ್ಮ ದ್ಯೆಯೋದ್ದೇಶ. ಜೊತೆಗೆ ಜಾಗತಿಕ ಚಲನಚಿತ್ರೋದ್ಯಮದಲ್ಲಿ ಹೊಸ ಪ್ರತಿಭೆಗಳಿಗೆ ಪ್ರಮುಖ ವೇದಿಕೆ ಕಲ್ಪಿಸುವುದು ಇದರ ಜೊತೆಗೆ ಸಿನೆಮಾಗಳನ್ನು ಪ್ರೀತಿಸುವಂತೆ ಪ್ರೋತ್ಸಾಹಿಸುವ ನಿರಂತರ ತಾಣವಾಗಲಿದೆ.
ಇದು ಬೆಂಗಳೂರಿನ ಪ್ರಮುಖ ಚಲನಚಿತ್ರೋತ್ಸವದಲ್ಲಿ ಒಂದಾಗಿದ್ದು, ಇದು ಅಂತರಾಷ್ಟ್ರೀಯ ಉಪಶಾಖೆಗಳ ಜೊತೆಗೆ ಜಾಗತಿಕವಾಗಿ ಗುರುತಿಸಿಕೊಂಡಿದೆ. ಚಿತ್ರ ನಿರ್ದೇಶಕ, ನಿರ್ಮಾಪಕರನ್ನು ಅವರ ಕಿರುಚಿತ್ರಗಳ ಪ್ರಸಾರ, ಮಾರ್ಕೆಟಿಂಗ್ ಮತ್ತು ವಿತರಣೆಗಾಗಿ ಬಾಗಿಲು ತೆರೆದು ಆಹ್ವಾನಿಸುವುದು ಇದರ ಗುರಿಯಾಗಿದೆ.
ಈ ಚಿತ್ರೋತ್ಸವದಲ್ಲಿ ಚಿತ್ರರಂಗದ ಶ್ರೇಷ್ಠ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಮತ್ತು ಈ ಚಲನಚಿತ್ರಗಳನ್ನು ಅಂತರ್ಜಾಲ, ಸಾಮಾಜಿಕ ಜಾಲತಾಣ, ಓಟಿಟಿ, ಮತ್ತು ನಮ್ಮ ಮಾಧ್ಯಮ ಸಂಪರ್ಕಗಳ ಮೂಲಕ ಪ್ರದರ್ಶಿಸಲಾಗುತ್ತದೆ.
For more information please click this link https://cinemamarket.in/index.html