ಕಥಾಲೇಖನ ಚಿತ್ರದ ಪೋಸ್ಟರ್ ಬಿಡುಗಡೆ

" ಕರುನಾಡ ಹೆಮ್ಮೆಯ ಲಂಡನ್ ಕನ್ನಡಿಗ ಶ್ರೀ ಗೋಪಾಲ್ ಕುಲಕರ್ಣಿರವರಿಗೆ ಗೌರವಾನ್ವಿತ ಪ್ರಶಸ್ತಿ" ಸ್ಪೇಸ್ ಮೀಡಿಯಾ & ಮೈಸೂರು ಸ್ಯಾಂಡಲ್ ಅರ್ಪಿಸುವ " ಮರಳಿ ಸಂಸ್ಕೃತಿ - 2 " ರವರು ಆಯೋಜಿಸಲಾದ ಚೌಡೇಶ್ವರಿ ಮೆಮೋರಿಯಲ್ ಸಭಾಂಗಣ ವೇದಿಕೆಯಲ್ಲಿ ಪರಮಪೂಜ್ಯ ಕರ್ನಾಟಕ ರತ್ನ ತುಮಕೂರಿನ ಸಿದ್ದಗಂಗಾ ಮಠದ ಡಾ || ಶ್ರೀ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದದೊಂದಿಗೆ " ಅಭಿನವ ಬಸವಣ್ಣ ಸಿದ್ದಗಂಗಾ ಶ್ರೀ ಪ್ರಶಸ್ತಿ " ಹಾಗೂ " ಅಂತರರಾಷ್ಟ್ರೀಯ ವರ್ಷದ ಶುಶ್ರೂಷಕ " ಪ್ರಶಸ್ತಿಯನ್ನು ಮಠದ ಪೀಠಾಧಿಪತಿಗಳಾದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಗಣ್ಯರ ಸಮ್ಮುಖದಲ್ಲಿ ದೊರೆತಿದ್ದು ಅತ್ಯಂತ ಹೆಮ್ಮೆಯ ವಿಚಾರ ಶ್ರೀ ಗೋಪಾಲ್ ಕುಲಕರ್ಣಿಯವರು ಲಂಡನ್ನಲ್ಲಿ ವಾಸವಾಗಿರುವ ಕಾರಣ ಅವರ ಅನುಪಸ್ಥಿತಿಯಲ್ಲಿ ಅವರ ಅಳಿಯರಾದ ಸುನಿಲ್ ಕುಮಾರ್ ರವರು " ಅಭಿನವ ಬಸವಣ್ಣ ಸಿದ್ದಗಂಗ ಶ್ರೀ ಪ್ರಶಸ್ತಿ"ಯನ್ನು ಹಾಗೂ ನಿರ್ದೇಶಕರಾದ ಸತ್ಯರತ್ನಮ್ ರವರು " ಅಂತರಾಷ್ಟ್ರೀಯ ವರ್ಷದ ಶುಶ್ರೂಷಕ " ಪ್ರಶಸ್ತಿಯನ್ನು ಸ್ವೀಕರಿಸಲಾಯಿತು ಕರೋನ ಮಹಾಮಾರಿಯ ಸಮಯದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಹಲವಾರು ಜನರನ್ನು ಗುರುತಿಸಿ ಗೌರವಾನ್ವಿತವಾಗಿ ಸತ್ಕರಿಸಲಾಯಿತುಕರ್ನಾಟಕ ರತ್ನ ತುಮಕೂರಿನ ಸಿದ್ದಗಂಗಾ ಮಠದ ಡಾ || ಶ್ರೀ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದದೊಂದಿಗೆ ಮಠದ ಪೀಠಾಧಿಪತಿಗಳಾದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಜಿಕೆ ಎಂಟರ್ಟೈನ್ಮೆಂಟ್ ನಿರ್ಮಿಸಿರುವ ಕಥಾಲೇಖನ ಚಿತ್ರದ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರ್ ಬಿಡುಗಡೆಯಾಯಿತು . ಚಿತ್ರದ ಚಿತ್ರೀಕರಣವು ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ನಲ್ಲಿ ಚಿತ್ರತಂಡ ಕಾರ್ಯನಿರತವಾಗಿದೆ. ನಿರ್ಮಾಪಕರು - ಗೋಪಾಲ್ ಕುಲಕರ್ಣಿ. ರಚನೆ -ನಿರ್ದೇಶನ ಸತ್ಯರತ್ನಮ್. ಸಂಗೀತ - ಕರಣಂ. ಛಾಯಾಗ್ರಹಣ - ಸ್ಯಾಮ್.ಸಂಕಲನ - ಶ್ರೀ ವರ್ಕಲ. ನೃತ್ಯ ನಿರ್ದೇಶಕ - ರಾಜು.
.ತಾರಾಗಣ - ನಾಯಕ " ಜೈ " ಪಾತ್ರದಲ್ಲಿ ನನ್ನರಸಿ ರಾಧೆ ಖ್ಯಾತಿಯ ಅರ್ಫಾತ್. ನಾಯಕಿ ನಂದಿನಿ ಪಾತ್ರದಲ್ಲಿ ನಯನತಾರ ಖ್ಯಾತಿಯ ಕಾವ್ಯ ಗೌಡ.ತಂದೆಯ ಪಾತ್ರದಲ್ಲಿ ಇಂಡಿಯಾ ವರ್ಸಸ್ ಇಂಗ್ಲೆಂಡ್ ಖಳನಾಯಕ ಖ್ಯಾತಿಯ ಗೋಪಾಲ್ ಕುಲಕರ್ಣಿ. ಸ್ವಪ್ನ ರಾಜ್. ನಾಗೇಂದ್ರ ಹರಸ್ ಮಹಾಭಾರತದ ಚಂದ್ರಪ್ರಭ. ಪಲ್ಟಿ ಗೋವಿಂದ. ಜಗಪ್ಪ. ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ.ಅರುಣ್ ಕುಮಾರ್. ಪ್ರಶಾಂತ್ ಶೆಟ್ಟಿ. ರಾಮಜಿ. ರಾಜೇಶ್ವರಿ ಪಾಂಡೆ. ವಿನಯ್. ದಮ್ ಕುಮಾರ್. ಪರಿಟ್. ರಾಜ್ ಬಸು. ಕಾಮಿಡಿ ಕಿಲಾಡಿಗಳು ಸಂತು ಸಿಕೆ. ಗವಿಸಿದ್ದಯ್ಯ. ಸಂಜಯ್. ಸುಧಾ. ಸುನಿಲ್ ಕುಮಾರ್