ರಜನಿ ಅಭಿನಯದ ಬಹುನಿರೀಕ್ಷಿತ 'ಅನ್ನತ್ತೆ' ಬಿಡುಗಡೆಗೆ ಸಿದ್ಧ
ದಿಪಾವಳಿಗೆ ಬಿಡುಗಡೆಯಾಗಲಿದೆ ಅನ್ನತ್ತೆ ಚಿತ್ರ
Jul 2, 2021, 07:35 IST
| ಚೆನ್ನೈ: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಅನ್ನತ್ತೆ' ಬಿಡುಗಡೆಗೆ ಸಿದ್ಧವಾಗಿದೆ. ಅನ್ನತ್ತೆ ಚಿತ್ರವನ್ನು ಬಾರಿಯ ದೀಪಾವಳಿಗೆ ಬಿಡುಗಡೆ ಮಾಡಲು ಸನ್ ಪಿಕ್ಚರ್ಸ್ ನಿರ್ಧರಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಸನ್ ಪಿಕ್ಚರ್ಸ್ ದೀಪಾವಳಿ ಅನ್ನತ್ತೆಗೆ ನೀವು ಸಿದ್ಧನಾ? ಎಂದು ಸನ್ ಪಿಕ್ಚರ್ಸ್ ಪ್ರೇಕ್ಷಕರನ್ನು ಪ್ರಶ್ನಿಸಿದ ಟ್ವೀಟ್ ಮಾಡಿದೆ.
#AnnaattheDeepavali ku ready ah?!@rajinikanth @directorsiva #Nayanthara @KeerthyOfficial @immancomposer #Annaatthe pic.twitter.com/RVVIqO0xJS
— Sun Pictures (@sunpictures) July 1, 2021
ಈ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿದ್ದು, ಶಿವ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ನಯನ ತಾರಾ, ಮೀನಾ, ಖುಷ್ಬೂ ಸುಂದರ್, ಪ್ರಕಾಶ್ ರಾಜ್ ಸೇರಿದಂತೆ ಮತ್ತಿತರ ನಟಿಸಿದ್ದಾರೆ. ಡಿ ಇಮಾನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.