ಖಾಸಗಿ ವಾಹಿನಿ ವಿರುದ್ಧ ರಕ್ಷಿತ್ ಶೆಟ್ಟಿ ಗರಂ

ರಕ್ಷಿತ್ ಶೆಟ್ಟಿ ಬೆಂಬಲಕ್ಕೆ ನಿಂತ ನಟ ಅನಿಶ್

 | 
Rakshith shetty

ಸ್ಯಾಂಡಲ್ ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ವಿರುದ್ಧ ಕನ್ನಡದ ಖಾಸಗಿ ವಾಹಿನಿಯೊಂದು ಅವರ ಮಾನಹಾನಿ ಕಾರ್ಯಕ್ರಮ ಪ್ರಸಾರ ಮಾಡಿದ ಹಿನ್ನೆಲೆ ಆ ವಾಹಿನಿಯ ವಿರುದ್ಧ ರಕ್ಷಿತ್ ಶೆಟ್ಟಿ ಗರಂ ಆಗಿದ್ದಾರೆ.

ಖಾಸಗಿ ವಾಹಿಯ ವಿರುದ್ಧ ಆಕ್ರೋಶಗೊಂಡಿರುವ ಅವರು ಜುಲೈ 1ನೇ ತಾರೀಖಿನಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಅವರು, TRPಗೋಸ್ಕರ ನಡೆಸುತ್ತಿರುವ ಒಂದು ಸುದ್ಧಿವಾಹಿನಿ ನನ್ನ ಬಳಿ ಇರುವ ಅಸ್ತ್ರ ಕೆಲಸದ ಮೇಲಿರೋ ನನ್ನ ಶ್ರದ್ಧೆ, ಜೀವನದಲ್ಲಿ ಅಳವಡಿಸಿಕೊಂಡಿರುವ ನೀತಿ, ನನ್ನ ಸಿನಿಮಾ ಹಾಗು ಜನಬೆಂಬಲ. ಇವೆರಡರಲ್ಲಿ ಜಯ ಯಾರಿಗೆ ಎಂದು ನೋಡಿ ಬಿಡೋಣ ಎಂದು ಬಹಿರಂಗ ಸವಾಲು ಹಾಕಿದ್ದಾರೆ.

ನನ್ನ ವೃತ್ತಿ ಜೀವನದಲ್ಲಿ ನನ್ನ ಬಳಿ ಯಾರೆಲ್ಲಾ ಕೆಲಸ ಮಾಡಿದ್ದಾರೋ ಅವರಲ್ಲಿ ಶೇಖಡ 90ರಷ್ಟು ಮಂದಿ ಇಂದಿಗೂ ನನ್ನ ಜೊತೆಯೇ ಇದ್ದಾರೆ. ಬಿಟ್ಟು ಹೋದವರು ನನ್ನಿಂದ ಏನನ್ನಾದರೂ ಪಡೆದುಕೊಂಡೆ ಹೋಗಿದ್ದಾರೆ ಹೊರತು ಕಳೆದುಕೊಂಡು ಹೋಗಿಲ್ಲ. ಕಳೆದುಕೊಂಡವರಿಗೆ ನಾನು ಮಂದೆ ನಿಂತು ಸಹಾಯ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಖಾಸಗಿ ವಾಹಿನಿಯೊಂದು ನನ್ನ ವಿರುದ್ಧ ಕಳೆದ ಎರಡು ವರ್ಷಗಳಿಂದ ನನ್ನ ಬಗ್ಗೆ ಹಲವು ರೀತಿಯ ಕಾರ್ಯಕ್ರಮಗಳನ್ನು ಮಾಡಿ ಮತ್ತೆ ಮತ್ತೆ ನನ್ನ ವಿರುದ್ಧ ವೈಯಕ್ತಿಕ ದಾಳಿ ನಡೆಸಿ ತೇಜೋವಧೆ ಮಾಡುವ ಮೂಲಕ ಮಸಿ ಬಳಿಯುವ ಕೀಳು ಮಟ್ಟದ ಕೆಲಸಕ್ಕೆ ಇಳಿದಿದೆ. ಇದಕ್ಕೆಲ್ಲ ಕೆಲವೇ ದಿನಗಳಲ್ಲ ಉತ್ತರ ಕೊಡುತ್ತೇನೆ ಜುಲೈ 11ವರೆಗೆ ಕಾದು ನೋಡಿ ಎಂದು ತಿಳಿಸಿದ್ದಾರೆ.

  

ಖಾಸಗಿ ವಾಹಿನಿಯ ವಿರುದ್ಧ ಸಮರ ಸಾರಿರುವ ರಕ್ಷಿತ್ ಶೆಟ್ಟಿಯ ಪರ ನಟ ಅನೀಶ್ ಕೈ ಜೋಡಿಸಿದ್ದು, ಫೇಸ್ ಬುಕ್ ನಲ್ಲಿ ರಕ್ಷಿತ್ ಶೆಟ್ಟಿಯವರನ್ನು ಬೆಂಬಲಿಸಿ ಬರೆದುಕೊಂಡಿದ್ದಾರೆ.