ನಟ ಕಮಲ್ ಆರ್ ಖಾನ್ ವಿರುದ್ಧ ಸಲ್ಮಾನ್ ದೂರು

ಕಮಲ್ ಆರ್ ಖಾನ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಸಲ್ಮಾನ್ ಖಾನ್

 | 
Salman khan and kamal R Khan

ಮುಂಬೈ: ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ರಾಧೆ ಚಲನಚಿತ್ರದ ಕುರಿತು ಚಿತ್ರವಿಮರ್ಶೆ ವಿಚಾರಕ್ಕೆ ಸಂಬಂಧಿಸಿದಂತೆ ನಟ ಕಮಾಲ್ ಆರ್ ಖಾನ್ ವಿರುದ್ಧ ಸಲ್ಮಾನ್ ಖಾನ್ ಮುಂಬೈ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ನಟ ಸಲ್ಮಾನ್ ಖಾನ್ ಅಭಿನಯದ ರಾಧೆ ಚಿತ್ರವಿಮರ್ಶೆ ವೇಳೆ ನಟ ಕಮಾಲ್ ಆರ್ ಖಾನ್ ಅವರು ಸಲ್ಮಾನ್ ಖಾನ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು ಎನ್ನಲಾಗಿದೆ. ಇದೇ ವಿಚಾರವಾಗಿ ನಟ ಸಲ್ಮಾನ್ ಖಾನ್ ಪರ ವಕೀಲರು ಮುಂಬೈ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿ, ನೋಟಿಸ್ ಜಾರಿ ಮಾಡಿದ್ದಾರೆ.

ತಮಗೆ ನೋಟಿಸ್ ತಲುಪಿರುವ ಕುರಿತು ನಟ ಕಮಾಲ್ ಆರ್ ಖಾನ್ ಕೂಡ ಸ್ಪಷ್ಟನೆ ನೀಡಿದ್ದು, ಈ ಬಗ್ಗೆ ಟ್ವೀಟ್ ಮಾಡಿರುವ ಅವರು ‘ಸಲ್ಮಾನ್ ಖಾನ್ ರಾಧೆ ಅವರ ವಿಮರ್ಶೆಗಾಗಿ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ. 

ನೋಟಿಸ್ ಪ್ರಕಾರ, ಸಲ್ಮಾನ್ ಖಾನ್ ಅವರ ಕಾನೂನು ತಂಡವು ಗುರುವಾರ ನಗರ ಸಿವಿಲ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರ ಮುಂದೆ ತುರ್ತು ವಿಚಾರಣೆಗೆ ಈ ವಿಷಯವನ್ನು ಪ್ರಸ್ತಾಪಿಸಿದೆ.