ಸಂಚಾರಿ ವಿಜಯ್ ಬದುಕೋದು ಕಷ್ಟ, ಅಂಗಾಂಗ ದಾನಕ್ಕೆ ವಿಜಯ್ ಕುಟುಂಬಸ್ಥರ ನಿರ್ಧಾರ

ಡಿಸಿಎಂ ಅಶ್ವತ್ಥ ನಾರಾಯಣ್ ಫೌಂಢೇಷನ್ ನಿಂದ ಚಿಕಿತ್ಸಾ ವೆಚ್ಚ ಭರಿಸುವ ಭರವಸೆ
 | 
Sanchari vijay

ಬೆಂಗಳೂರು: ಬೈಕ್ ಅಪಘಾತದಿಂದ ತೀವ್ರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ನಟ ಸಂಚಾರಿ ವಿಜಯ್ ಅವರು ಬದುಕುಳಿಯುವ ಸಾಧ್ಯತೆ ಕ್ಷೀಣಿಸಿದೆ. ಅವರ ಮೆದುಳು ನಿಷ್ಕೃಯವಾಗಿದ್ದು, ವಿಜಯ್ ಬದುಕುಳಿಯುವುದ ಕಷ್ಟ ಎಂದು ವೈದ್ಯರು ಹೇಳಿದ್ದಾರೆ.

ವಿಜಯ್ ಅವರ ಶಸ್ತ್ರಚಿಕಿತ್ಸೆ ಬಳಿಕವೂ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡಿಬಂದಿಲ್ಲ ಸಧ್ಯಕ್ಕೆ ಹೆಚ್ಚು ಮಾಹಿತಿ ನೀಡಲಾಗದು ಎಂದು ವೈದ್ಯ ಅರೂಣ್ ತಿಳಿಸಿದ್ದಾರೆ.

ದೇಹದ ಸ್ಥಿತಿಗತಿ ಬಗ್ಗೆ ವಿಜಯ್ ಕುಟುಂಬಸ್ಥರಿಗೆ ವೈದ್ಯರು ವಿವರಿಸಿದ ನಂತರ ಮಾಧ್ಯಮಗಳಗೆ ಮಾಹಿತಿ ನೀಡಿದ ವಿಜಯ್ ಸಹೋದರ ಸಿದ್ದೇಶ್ ಕುಮಾರ್ ಅಣ್ಣ ಬದುಕುವುದು ಕಷ್ಟವೆಂದು ವೈದ್ಯರು ಹೇಳುತ್ತಿದ್ದಾರೆ ಎಂದು ಭಾವುಕರಾದರು. ಮೆದುಳು ನಿಷ್ಕೃಯವಾಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಆಗೇನಾದರೂ ಆದರೆ ಅವರ ಅಂಗಾಂಗ ದಾನ ಮಾಡಲು ತೀರ್ಮಾನಿಸಿದ್ದೇವೆ ಎಂದು ಹೇಳಿದ್ದಾರೆ.

ಹಾಗೆ ನಟ ಸಚಾರಿ ವಿಜಯ್ ಅವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸಲು ಪಮುಖ್ಯಮಂತ್ರಿ ಡಾ.ಸಿ.ಎಸ್ ಅಶ್ವತ್ಥ ನಾರಾಯಣ್ ಮಂದೆ ಬಂದಿದ್ದು, ಅಪೋಲೋ ಆಸ್ಪತ್ರೆ ಆಡಳಿತ ವರ್ಗಗಳ ಜೊತೆ  ಅಶ್ವತ್ಥ ನಾರಾಯಣ್ ಅವರು ಕರೆ ಮಾಡಿ ವಿಜಯ್ ಚಿಕಿತ್ಸಾ ವೆಚ್ಚವನ್ನು ಅಶ್ವತ್ಥ ನಾರಾಯಣ್ ಫೌಂಢೇಷನ್ ಭರಿಸುತ್ತದೆ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.