ಸಹಾಯ ನೆನೆದು ಸೋನು ಸೂದ್ ಕಾಲಿಗೆ ಬೀಳಲು ಮುಂದಾದ ಅಭಿಮಾನಿಗಳು
ದೂರ ಸರಿದು ಕೈ ಮುಗಿದು ನಮಸ್ಕರಿಸಿ ಸಂತೈಸಿದ ಸೋನು ಸೂದ್
ಮುಂಬೈ: ಕಳೆದೊಂದು ವರ್ಷದಿಂದ ನಟ ಸೋನು ಸೂದ್ ಕೋವಿಡ್ ನಿಂದ ಸಮಸ್ಯೆಗೆ ಒಳಗಾದವರಿಗೆ ಸಹಾಯ ಮಾಡುತ್ತಲೇ ಬಂದಿದ್ದಾರೆ. ಕೊರೋನಾ ರೋಗಿಗಳಿಗೆ ಸೂದ್ ಪೌಂಡೇಷನ್ ಮೂಲಕ ಸಹಾಯ ಮಾಡುತ್ತಿದ್ದು, ಕೊರೋನಾ ರೋಗಿಗಳಿಗೆ ಬೇಕಾಗುವ ಆಸ್ಪತ್ರೆ ಬೆಡ್ ವ್ಯವಸ್ಥೆ, ಆಕ್ಸಿಜನ್, ಔಷಧಿ ವಯವಸ್ಥೆಯನ್ನು ಸರಿಯಾದ ಸಮಯಕ್ಕೆ ಕಲ್ಪಿಸುವ ಮೂಲಕ ಸೋನು ಸೂದ್ ಕೊರೋನಾ ರೋಗಿಗಳ ಆರಾಧ್ಯ ದೈವವಾಗಿದ್ದಾರೆ.
ಭಾನುವಾರ ಬೆಳಗ್ಗೆ ಮುಂಬೈನ ಅವರ ಮನೆಯ ಎದುರು ಇವರಿಂದ ಸಹಾಯ ಪಡೆದು ಗುಣಮುಖರಾದ ಹಲವು ರೋಗಿಗಳು ಮತ್ತು ಅವರ ಕುಟುಂಬ ವರ್ಗದವರು ಸೋನು ಸೂದ್ ಅವರ ಮನೆ ಮುಂದೆ ಆಗಮಿಸಿ ಅವರ ದರ್ಶನ ಮಾಡಿದ್ದಾರೆ.
ಈ ವೇಳೆ ಸೋನುಸೂದ್ ರನ್ನು ನೋಡಿ ಭಾವುಕರಾದ ರೋಗಿಗಳು ಹಿರಿಯರು ಕಿರಿಯರೆನ್ನದೆ ಸೋನು ಸೂದ್ ಅವರ ಕಾಲಿಗೆ ಬಿದ್ದು ನಮಸ್ಕರಿಸಲು ಮುಂದಾಗಿದ್ದಾರೆ. ಇದಕ್ಕೆ ಅವಕಾಶ ನೀಡದ ಸೋನು ಸೂದ್ ಅವರಿಂದ ದೂರ ಸರಿದು ಕೈ ಮುಗಿದು ನಮಸ್ಕರಿಸಿ ಮತ್ತು ಕೆಳಗೆ ಕುಳಿತು ಅವರನ್ನು ಸಂತೈಸಿದ್ದಾರೆ.
ಇನ್ನು ಕೆಲವರು ಅವರು ಮನೆ ಬಳಿಗೆ ಆಗಮಿಸಿ ಅವರ ಸಮಸ್ಯೆಗಳನ್ನು ತಿಳಿಸಿ ಅವರಿಗೆ ಅವಶ್ಯಕವಿದ್ದ ಸಹಾಯ ಪಡೆದು ತೆರಳಿದ್ದಾರೆ.