ಸೋನು ಸೂದ್ ನಮ್ಮ ಪ್ರಾಧಾನಿಯಾಗಬೇಕು: ಬಾಲಿವುಡ್ ಬೆಡಗಿಯ ಬೇಡಿಕೆ

ಸೋನು ಸೂದ್ ಚುನಾವಣೆಗೆ ನಿಲ್ಲಬೇಕು, ಪ್ರಧಾನಿಯಾಗಬೇಕು ಎಂದ ಹುಮಾ ಖುರೇಶಿ

 | 
Sonu sood and Huma qureshi

ಸೋನು ಸೂದ್ ಕೊರೋನಾ ಕಾಲದಲ್ಲಿ ಬಿಡುವಿಲ್ಲದೆ ಬಡವರು ಮತ್ತು ರೋಗಿಗಳ ಜೀವಗಳಿಗೆ ಮಿಡಿಯುತ್ತಿದ್ದಾರೆ. ಈ ಹಿನ್ನೆಲೆ ಸೋನು ಸೂದ್ ಅವರಿಗೆ ಅಭಿಮಾನಿಗಳು ಹೆಚ್ಚಾಗಿದ್ದು, ಸೋನು ಸೂದ್ ಸಮಾಜಿಕ ಸೇವೆಗಳ ಜೊತೆಗೆ ದೇಶದ ಉನ್ನತ ಸ್ಥಾನಗಳನ್ನು ಅಲಂಕರಿಸಬೇಕು ಎಂಬ ಬೇಡಿಕೆಗಳು ಕೇಳಿಬರುತ್ತಿವೆ.

ಬಾಲಿವುಡ್ ಮೊಗಸಾಲೆಯಿಂದಲೂ ಈ ರೀತಿಯ ಅನಿಸಿಕೆಗಳು ವ್ಯಕ್ತವಾಗಿದ್ದು, ನನ್ನ ಪ್ರಕಾರ ಸೋನು ಸೂದ್ ಚುನಾವಣೆಗೆ ನಿಲ್ಲಬೇಕು, ಸೋನು ಸೂದ್ ಪ್ರಧಾನಿಯಾಗಬೇಕು ಎಂದು ಬಾಲಿವುಡ್ ಬೆಡಗಿ ನಟಿ ಹುಮಾ ಖುರೇಶಿ ಅಭಿಮತ ವ್ಯಕ್ತಪಡಿಸಿದ್ದಾರೆ.

ಬಾಲಿವುಡ್ ಹಾಂಗಾಮ ನಡೆಸಿದ ಸಂದರ್ಶನದಲ್ಲಿ ಚುಟುಕು ಪ್ರಶ್ನೆಗಳಿಗೆ ಉತ್ತರ ನೀಡುವ ವೇಳೆ ಈ ರೀತಿ ತಮ್ಮ ಅಬಿಪ್ರಾಯವನ್ನು ತಿಳಿಸಿದ್ದಾರೆ.

ಬಾಲಿವುಡ್ ಕಲಾವಿದರಲ್ಲಿ ಯಾರು ರಾಜಕೀಯಕ್ಕೆ ಕಾಲಿಡಬೇಕೆಂಬ ಪ್ರಶ್ನೆಗೆ ಉತ್ತರರಿಸಿರುವ ಅವರು, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಸೋನು ಸೂದ್ ಚುನಾವಣೆಗೆ ನಿಲ್ಲಬೇಕು, ನಾವು ಅವರಿಗೆ ಓಟ್ ಮಾಡ್ತೀವಿ, ಅದರಲ್ಲೂ ನಾನು ಅವರಿಗೆ ಓಟ್ ಹಾಕ್ತೀನಿ, ಸೋನು ಸೂದ್ ನಮ್ಮ ಪ್ರಾಧಾನಿಯಾಗಬೇಕೆಂದು ನಾನು ಭಯಸುತ್ತೇನೆ ಎಂದು ಹುಮಾ ಖುರೇಶಿ ಹೇಳಿದ್ದಾರೆ.