ಜೂನಿಯರ್ NTR ಹುಟ್ಟುಹಬ್ಬದಂದು ಆಕರ್ಷಕ ಪೋಸ್ಟರ್ ರಿಲೀಸ್

ಪೋಸ್ಟರ್ ಬಿಡುಗಡೆ ಮಾಡಿ ಹುಟ್ಟುಹಬ್ಬದ ಶುಭಾಶಯ ಕೋರಿದ ನಿರ್ದೇಶಕ ರಾಜಮೌಳಿ

 | 
RRR Movie Poster

ತೆಲುಗು ನಟ ಜೂನಿಯರ್ ಎನ್ ಟಿ ಆರ್ ಅವರ 38ನೇ ಹುಟ್ಟುಹಬ್ಬಕ್ಕೆ ನಿರ್ದೇಶಕ ಎಸ್ ಎಸ್ ರಾಜಮೌಳಿ ಮತ್ತು RRR ಚಿತ್ರ ತಂಡ ಆಕರ್ಷಕ ಪೋಸ್ಟರ್ ಒಂದನ್ನು ಅನಾವರಣಗೊಳಿಸಿದೆ. ಈ ಪೋಸ್ಟರ್ ನಲ್ಲಿ ಕೊಮರಂ ಭೀಮನ ಅವತಾರದಲ್ಲಿ ನಟಿಸುತ್ತಿರುವ ಜೂನಿಯರ್ ಎನ್ ಟಿ ಆರ್ ಕೈಯಲ್ಲಿ ಚೂಪಾದ ಭರ್ಜಿಯನ್ನು ಎಸೆಯುತ್ತಿದ್ದು, ಮುಖದಲ್ಲಿ ತೀಕ್ಷತೆಯನ್ನು ಕಾಣಬಹುದಾಗಿದೆ.

ಈ ಪೋಸ್ಟರ್ ಮೂಲಕ ಎಸ್ ಎಸ್ ರಾಜಮೌಳಿ ಅವರು ಜೂನಿಯರ್ ಎನ್ ಟಿ ಆರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುವ ಮೂಲಕ RRR ಚಿತ್ರದ ಕೊಮರಂ ಭೀಮ್ ಕ್ಯಾರೆಕ್ಟರ್ ಅನ್ನು ಸಿನಿ ರಸಿಕರಿಗೆ ತಿಳಿಸಿದ್ದಾರೆ.

ಈ ಪೋಸ್ಟರ್ ಅನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡಿರುವ ನಿರ್ದೇಶಕ ರಾಜಮೌಳಿ, ನನ್ನ ಭೀಮ ಬಂಗಾರದಂತ ಹೃದಯ ಹೊಂದಿದ್ದಾನೆ, ತಿರುಗಿ ಬಿದ್ದರೆ, ಗಟ್ಟಿಯಾಗಿ, ದಿಟ್ಟನಾಗಿ ನಿಲ್ಲುತ್ತಾನೆ ಎಂದು ಬರೆದುಕೊಂದು ಪೋಸ್ಟರ್ ಹಂಚಿಕೊಂಡಿದ್ದಾರೆ.

RRR ಚಲನಚಿತ್ರ ಅಲ್ಲುರಿ ಸೀತಾ ರಾಮ ರಾಜು ಮತ್ತು ಕೊಮರಂ ಭೀಮ ಎಂಬ ಇಬ್ಬರು ಸ್ವತಂತ್ರ ಹೋರಾಟಗಾರರ ಕಥೆಯಾಧಾರಿತ ಕಾಲ್ಪನಿಕ ಕಥೆಯಾಗಿದೆ, ಈ ಚಿತ್ರಕ್ಕೆ ಬರೋಬ್ಬರಿ 450 ಕೋಟಿ ರೂಪಾಯಿ ಬಾರೀ ಮೊತ್ತವನ್ನು ಹೂಡಿಕೆ ಮಾಡಿ ಡಿವಿವಿ ದನಯ್ಯ ಎಂಬುವವರು ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಾಮ್ ಚರಣ್ ತೇಜ್, ಅಲಿಯಾ ಭಟ್, ಅಜಯ್ ದೇವಗನ್, ಒಲಿವಿಯಾ ಮೋರಿಸ್, ಅಲಿಸನ್ ದೂದಿ, ಮತ್ತು ರೇ ಸ್ಟಿವೆನ್ಸನ್ ನಟಿಸಿದ್ದಾರೆ.

ಸಧ್ಯ ಜೂನಿಯರ್ ಎನ್ ಟಿ ಆರ್ ಅವರಿಗೆ ಕೊರೋನಾ ಸೋಂಕು ತಗುಲಿದ್ದು, ಅವರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಕುಟುಂಬಸ್ಥರೂ ಸಹ ಪ್ರತ್ಯೇಕ ವಾಸದಲ್ಲಿದ್ದು, ಯಾರೂ ಚಿಂತಿಬೇಡಿ ಎಂದು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.