ಕಷ್ಟದಲ್ಲಿರುವ ಬಡವರಿಗೆ ದಿನಸಿ ವಿತರಿಸಿದ ಶುಭಾ ಪೂಂಜಾ
ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಶುಭಾರ ಸಮಾಜ ಸೇವೆ
May 15, 2021, 17:42 IST
| ಬೆಂಗಳೂರು: ಬಿಗ್ ಬಾಸ್ ಗೆ ಹೋಗಿ ಎಲ್ಲರ ಮನ ಗೆದ್ದು ಬಂದಿದರಿವ ಸ್ಯಾಂಡಲ್ ವುಡ್ ನಟಿ ಶುಭಾ ಪೂಂಜಾ ಕೊರೋನಾ ಸಂದರ್ಭದಲ್ಲಿ ಬಡವರ ಸಂಕಷ್ಟಕ್ಕೆ ಮಿಡಿದಿದ್ದಾರೆ.
ಬಿಗೆ ಬಾಸ್ ಮನೆಯಲ್ಲೇ ಹೇಳಿದಂತೆ ಶುಭಾ ಪೂಂಜಾ ಅವರು ಬಡವರು, ಖೂಲಿ ಕಾರ್ಮಿಕರಿಗೆ ತಮ್ಮ ಕೈಲಾದ ಸೇವೆ ಮಾಡುತ್ತಿದ್ದು, ಆಹಾರ ಕಿಟ್ ಗಳನ್ನು ವಿತರಿಸುವ ಮೂಲಕ ಅನೇಕೆ ಹಸಿವನ್ನು ನೀಗಿಸುತ್ತಿದ್ದಾರೆ.
ತಮ್ಮ ಸೇವೆಯ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಶುಭಾ ಅವರು ಬಹಳ ಸಣ್ಣಮಟ್ಟದಲ್ಲಿ ಪ್ರಾರಂಭವಾಗಿದೆ ನನ್ನ ಮನೆಯ ಸಮೀಪದವರಿಗೆ ಆಹಾರ ಕಿಟ್ ವಿತರಿಸಿದ್ದೇನೆ. ಮುಂದಿನ ದಿನಗಳಲ್ಲಿ ಹೆಚ್ಚು ಜನರನ್ನು ತಲುಪುವ ಪ್ರಯತ್ನ ಮಾಡುತ್ತೇನೆ. ದಯವಿಟ್ಟು ನಿಮ್ಮ ಪ್ರದೇಶದ ಜನರಿಗೆ ಸಹಾಯ ಮಾಡಿ ಹಾಗೂ ಪ್ರಾಣಿಯಳಿಗೆ ಆಹಾರಿ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.