ಅನಾರೋಗ್ಯದಿಂದ ನಟ ಸುದೀಪ್ ಗುಣಮುಖ
ಕಿರುತೆರೆಯ ಅತ್ಯಂತ ದೊಡ್ಡ ಮನೋರಂಜನಾ ರಿಯಾಲಿಟಿ ಶೋ ಬಿಗ್ ಬಾಸ್ ವೀಕ್ಷಕರಿಗೆ ನಟ ಹಾಗೂ ಬಿಗ್ ಬಾಸ್ ನಿರೂಪಕ ಕಿಚ್ಚ ಸುದೀಪ್ ಸಿಹಿಸುದ್ದಿ ನೀಡಿದ್ದಾರೆ. ಅನಾರೋಗ್ಯ ಕರಣ ಬಿಗ್ ಬಾಸ್ ಕಿರುತೆರೆಯ ವೀಕೆಂಡ್ ಶೋಗಳ ನಿರೂಪಣೆಯಿಂದ ಹಿಂದೆ ಸರಿದಿದ್ದ ಸುದೀಪ್ ಈಗ ಮತ್ತೆ ಈ ವಾರದಿಂದ ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್ 'ನಿಮ್ಮ ಪ್ರಾರ್ಥನೆ ಮತ್ತು ಹಾರೈಕೆಗೆ ಧ್ಯನವಾದ, ನಾನೀಗ ಚೇತರಿಸಿಕೊಂಡಿದ್ದೇನೆ, ಈ ವಾರಂತ್ಯದ ಬಿಗ್ ಬಾಸ್ ಸಂಚಿಕೆಯಾಲ್ಲಿ ಭಾಗವಹಿಸಲು ಎದುರುನೋಡುತಿದ್ದೇನೆ ಎಂದು ತಿಳಿಸಿದ್ದು, ತಮ್ಮ ಆರೋಗ್ಯದ ಮೇಲೆ ನಿಗಾ ಇರಿಸಿದ ವೈದ್ಯರುಗಳಿಗೆ ಧನ್ಯವಾದ ತಿಳಿಸಿದ್ದಾರೆ.
— Kichcha Sudeepa (@KicchaSudeep) April 29, 2021
ಕಳೆದೆರಡು ವಾರಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಕಿಚ್ಚ ಸುದೀಪ್ ಅವರು, ಕಳೆದ ಎರಡು ವಾರಗಳಲ್ಲಿ ಬಿಗ್ ಬಾಸ್ ನ 'ವಾರದ ಕಥೆ ಕಿಚ್ಚನ ಜೊತೆ' ಹಾಗೂ 'ಸೂಪರ್ ಸಂಡೇ ವಿಥ್ ಸುದೀಪ್' ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಸುದೀಪ್ ಅವರ ಅಭಿಮಾನಿಗಳು, ಬಿಗ್ ಬಾಸ್ ಸ್ಪರ್ಧಿಗಳು ಸುದೀಪ್ ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದರು.