ವಲಸೆ ಕಾರ್ಮಿಕರಿಗೆ ಸಹಾಯಸ್ತ ಚಾಚಿದ ನಟಿ ಸನ್ನಿ ಲಿಯೋನ್

ಪೇಟಾ ಜೊತೆ ಸೇರಿ ವಲಸೆ ಕಾರ್ಮಿಕರಿಗೆ ಅನ್ನ ನೀಡಲು ಸನ್ನಿ ತೀರ್ಮಾನ

 | 
ವಲಸೆ ಕಾರ್ಮಿಕರಿಗೆ ಸಹಾಯಸ್ತ ಚಾಚಿದ ನಟಿ ಸನ್ನಿ ಲಿಯೋನ್

ದೆಹಲಿ ನಗರದ 10,000 ವಲಸೆ ಕಾರ್ಮಿಕರಿಗೆ ಅನ್ನ ನೀಡಲು ಮಾಜಿ ನೀಲಿತಾರೆ ಹಾಗೂ ಬಾಲಿವುಡ್ ನಟಿ ಸನ್ನಿ ಲಿಯೋನ್ ಪೇಟಾ ಜೊತೆ ಕೈ ಜೋಡಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಮೋಹಕ ತಾರೆ ಸನ್ನಿ ಲಿಯೋನ್ ನಾವು ಬಹುಡೊದ್ದ ಬಿಕಟ್ಟನ್ನು ಎದುರಿಸುತ್ತಿದ್ದೇವೆ. ಆದರೆ ನಾವೆಲ್ಲರೂ ಸಹನುಭೂತಿ ಮತ್ತು ಒಗ್ಗಟ್ಟಿನಿಂದ ಈ ಪರಸ್ಥಿತಿಯಿಂದ ಹೊರಬರಬೇಕಿದೆ. ನಾವು ನೀಡುವ ಊಟವು ದಾಲ್, ಅನ್ನ, ಕಿಚ್ಡಿ ಮತ್ತು ಹೆಚ್ಚು ಹಣ್ಣುಗಳಿಂದ ಕೂಡರಲಿದೆ ಎಂದು ತಿಳಿಸಿದ್ದಾರೆ.

ಕೊರೋನಾ ಮೊದಲ ಅಲೆಯ ಸಂದರ್ಭದಲ್ಲೂ ಸಹಾಯ ಮಾಡಿದ್ದ ಸನ್ನಿ ಲಿಯೋನ್ ಈಗಲೂ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಇವರ ಜೊತೆ ಜಾಕ್ವಲೀನ್ ಸಲ್ಮಾನ್ ಖಾನ್, ಪ್ರಿಯಾಂಕ ಚೋಪ್ರಾ ಸೇರಿದಂತೆ ಹಲವರು ತಮ್ಮ ಕೈಲಾದ ಸೆವೆಯನ್ನು ಮಾಡುತ್ತಿದ್ದಾರೆ

Click here https://newslati.com/education/sf6-was-a-good-from-a-safety-and-insulation-standpoint/cid2939416.htm